ಸ್ವಚ್ಛ ಸರ್ವೇಕ್ಷಣ, ಬೆಂಗಳೂರಿಗೆ 194ನೇ ಸ್ಥಾನ, ಬಿಬಿಎಂಪಿ ಎಡವಿದ್ದೆಲ್ಲಿ?

ಬೆಂಗಳೂರು, ಮಾರ್ಚ್ 7: ಬೆಂಗಳೂರನ್ನು ಸ್ವಚ್ಛ ನಗರವಾಗಿಸಬೇಕೆಂದು ಬಿಬಿಎಂಪಿ ಪಟ್ಟಿದ್ದ ಪ್ರಯತ್ನ ವ್ಯರ್ಥವಾಗಿದೆ. ಆದರೂ 22 ಸ್ಥಾನ ಮೇಲೆ ಜಿಗಿದು 194ನೇ ಸ್ಥಾನಕ್ಕೇರಿರಿವುದು ಕೊಂಚ ನೆಮ್ಮದಿ ತಂದಿದೆ.

ತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಸ್ವಚ್ಛತೆಗೆ ಬಿಬಿಎಂಪಿ ಕೈಗೊಂಡ ಕ್ರಮಗು ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾಗಿದ್ದವು. ಅದರೊಂದಿಗೆ ಇದೇ ಮೊದಲ ಬಾರಿಗೆ ಗೊಬ್ಬರ ತಯಾರಿಕೆ ಕಲಿಕಾ ಕೇಂದ್ರವನ್ನು ಬಿಬಿಎಂಪಿಯಿಂದ ಆರಂಭಿಸಲಾಗಿದೆ.

ಜೊತೆಗೆ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕಾಗಿ ವಾರ್ಡ್ ವಾರು ಕಾಂಪೋಸ್ಟ್ ಸಂತೆ, ಇ-ಶೌಚಗೃಹ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಸೇರಿ ಹಲವು ಅಭಿಯಾನಗಳನ್ನು ನಡೆಸಲಾಗಿತ್ತು.

Bengaluru stands in 194 rank for cleanliness

ಹಾಗಾದರೆ ಬೆಂಗಳೂರಿಗೆ ಮಾರಕವಾದ ಅಂಶವೇನು ಎಂದು ನೋಡುವುದಾದರೆ, ಕೇಂದ್ರ ಅಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣ ಅಮೀಕ್ಷೆಯಂತೆ ನಗರಗಳು ಸಂಪೂರ್ಣವಾಗಿ ಬಯಲುಶೌಚಮುಕ್ತ ಎಂದು ಘೋಷಿಸಿಕೊಳ್ಳಬೇಕು.

ರ‍್ಯಾಂಕಿಂಗ್ ನೀಡುವ ವೇಳೆಯಲ್ಲಿಯೂ ಇದೇ ಅಂಶವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್‌ ಪೈಕಿ ಈವರೆಗೆ ಯಾವ ವಾರ್ಡ್ ಅಧಿಕೃತವಾಗಿ ಬಯಲು ಶೌಚಮುಕ್ತವಾಗಿರುವ ಬಗ್ಗೆ ಕೇಂದ್ರ ಸರ್ಕಾರದ ಪ್ರಮಾಣಪತ್ರ ಪಡೆದಿಲ್ಲ.

ಬೆಂಗಳೂರು ದೇಶದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ 425 ನಗರಗಳ ಸಾಲಿನಲ್ಲಿತ್ತು. ಸಮೀಕ್ಷೆಯಲ್ಲಿ 5 ಸಾವಿರ ಅಂಕಗಳಲ್ಲಿ ಒಟ್ಟು ಬೆಂಗಳೂರಿಗೆ 2351.81 ಅಂಕಗಳು ಸಿಕ್ಕಿದೆ.

ಸ್ವಚ್ಛ ನಗರಗಳ ಮಾನದಂಡದಲ್ಲಿ ಬಯಲು ಬಹಿರ್ದೆಸೆ ತಡೆಯುವುದು ಮತ್ತು ಶೌಚಾಲಯಗಳ ನಿರ್ಮಾಣವು ಪ್ರಮುಖವಾಗಿತ್ತು. ಸ್ಟಾರ್‌ ರೇಟಿಂಗ್‌ ಸೇರಿ ಬಯಲು ಬಹಿರ್ದೆಸೆ ಮುಕ್ತ ವಿಭಾಗಕ್ಕೆ 1250 ಅಂಕಗಳಿದ್ದವು. ಇದರಲ್ಲಿ ನಗರಕ್ಕೆ ಕೇವಲ 25 ಅಂಕಗಳಷ್ಟೇ ದೊರೆತಿವೆ. ಹೀಗಾಗಿ 50ರ ಒಳಗೆ ರ‍್ಯಾಂಕ್ ಪಡೆಯಲು ಸಾಧ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+