ಶಾಲೆ ಬಿಟ್ಟವರು ಬೆಂಗಳೂರು ದಕ್ಷಿಣದಲ್ಲೇ ಹೆಚ್ಚು
ಬೆಂಗಳೂರು, ಫೆಬ್ರವರಿ 9: ಪ್ರಾಥಮಿಕ ಶಿಕ್ಷಣ ಇಲಾಖೆ ನಡೆಸಿರುವ ಸಮೀಕ್ಷೆ ನೀಡಿದ ವರದಿಯಲ್ಲಿ ಬೆಂಗಳೂರು ದಕ್ಷಿಣದಲ್ಲೇ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಕಲಬುರಗಿ, ಯಾದಗಿರಿ ಹಾಗೂ ಇತರೆ ಜಿಲ್ಲೆಗಳಲ್ಲಿ ಶಾಲೆಯಿಂದ ದೂರ ಉಳಿದಿರುವ ಮಕ್ಕಳಿದ್ದಾರೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಇದೆಲ್ಲಕ್ಕಿಂತ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಪಾಲಕರು ಕೆಲಸವ್ನರಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದರಿಂದ ಸಾಕಷ್ಟು ಮಕ್ಕಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಮಕ್ಕಳಿಗೆ ಆರೋಗ್ಯ ಸಮಸ್ಯೆ, ಮನೆಯಿಂದ ಶಾಲೆ ದೂರ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ನಿರಾಕರಿಸುವುದು ಕೂಡ ಕೆಲವು ಕಾರಣಗಳಾಗಿವೆ.

ರಾಜ್ಯಾದ್ಯಂತ ಒಟ್ಟು 70,116ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ 14,192 ಮಂದಿ ಮಕ್ಕಳಿದ್ದರು. ಅದರಲ್ಲಿ 39,059 ಮಂದಿ ಗಂಡುಮಕ್ಕಳಿದ್ದರೆ, 39,054 ಮಂದಿ ಹೆಣ್ಣುಮಕ್ಕಳಿದ್ದಾರೆ. 2018ರ ನವೆಂಬರ್ 14ರಿಂದ 30ರವರೆಗೆ 14 ವರ್ಷದೊಳಿಗೆ ಮಕ್ಕಳ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು.
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದೆ. ಕೇವಲ ಸರ್ಕಾರಿ ಶಾಲೆ ಮಾತ್ರವಲ್ಲದೆ ಖಾಸಗಿ ಶಾಲೆಯ ಡಾಟಾವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ.
ಬೆಂಗಳೂರು ದಕ್ಷಿಣ-10,233 ಮಕ್ಕಳು
ಕಲಬುರಗಿ-5,752
ಯಾದಗಿರಿ-5,741
ವಿಜಯಪುರ-4,417
ಬಳ್ಳಾರಿ-4,132
ತುಮಕೂರು-299
ಮಧುಗಿರಿ-288
ಬೆಳಗಾವಿ-527
ಬೆಂಗಳೂರು ಗ್ರಾಮಾಂತರ-553
ಉಡುಪಿ-775
ಕೊಪ್ಪಳ-775 ಮಂದಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.












Click it and Unblock the Notifications