Bengaluru Rapido: ರಾಯಲ್ ಎನ್‌ಫೀಲ್ಡ್‌ನಲ್ಲಿ ಬಂದ ರಾಪಿಡೋ ಚಾಲಕ: ಯಾರೆಂದು ತಿಳಿದ ಸಾಫ್ಟ್‌ವೇರ್ ಇಂಜಿನಿಯರ್ ಶಾಕ್
ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ರಾಪಿಡೋ ಜೊತೆ ರೈಡ್ ಬುಕ್ ಮಾಡಿದ್ದು, ತನ್ನ ನಿಯೋಜಿತ ರೈಡರ್ ರಾಯಲ್ ಎನ್‌ಫೀಲ್ಡ್ ಹಂಟರ್ ಮೋಟಾರ್‌ಸೈಕಲ್‌ನಲ್ಲಿ ಬಂದಾಗ ಅಚ್ಚರಿಗೊಂಡರು. ಆದರೆ ರೈಡರ್ ಯಾರೆಂದು ತಿಳಿದಾಗ ಅವರು ಆಶ್ಚರ್ಯ ದುಪ್ಪಟ್ಟಾಗಿದೆ.
ರ್‍ಯಾಪಿಡೊ ಕ್ಯಾಪ್ಟನ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಇದು ಸಾಫ್ಟ್‌ವೇರ್ ಇಂಜಿನಿಯರ್ ಗೆ ಮತ್ತಷ್ಟು ಅಚ್ಚರಿ ಮೂಡಿಸಿದೆ. ತಮಗೆ ಆದ ಅನುಭವವನ್ನು ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ನಿಶಿತ್ ಪಟೇಲ್ ಎನ್ನುವ ಸಾಫ್ಟ್‌ವೇರ್ ಇಂಜಿನಿಯರ್, ಕುಬರ್ನೆಟ್ಸ್ ಮೀಟ್‌ಅಪ್‌ಗೆ ತನ್ನ ಪ್ರಯಾಣಕ್ಕಾಗಿ ಅವರು ರಾಪಿಡೊ ರೈಡ್ ಅನ್ನು ಬುಕ್ ಮಾಡಿದ್ದನ್ನು ವಿವರಿಸಿದ್ದಾರೆ.

ರ್‍ಯಾಪಿಡೋ ರೈಡ್‌ಗೆ ಬುಕ್ ಮಾಡಿದ ನಂತರ ಸಾಮಾನ್ಯ ಮೋಟಾರ್ ಸೈಕಲ್‌ಗೆ ಕಾಯುತ್ತಿದ್ದರು, ಅವರು ಕುಬರ್ನೆಟ್ಸ್ ಕ್ಲಸ್ಟರ್‌ಗಳ ಮೀಟ್‌ಅಪ್‌ಗೆ ಹೋಗಲು ಬುಕ್ ಮಾಡಿದ್ದರು. ಆದರು ಅವರಿಗಾಗಿ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್‌ನಲ್ಲಿ ಬಂದು ಪಿಕ್ ಮಾಡಿದರು. ಇದು ಅವರಿಗೆ ಅಚ್ಚರಿ ಉಂಟು ಮಾಡಿತು.
ರೈಡ್‌ಗಾಗಿ ಆಗಮಿಸಿದ ಉನ್ನತ-ಮಟ್ಟದ ಮೋಟಾರ್‌ಸೈಕಲ್ ಮಾತ್ರವಲ್ಲದೆ, ರಾಪಿಡೊ ಕ್ಯಾಪ್ಟನ್ ಸ್ವತಃ ಎಂಟರ್‌ಪ್ರೈಸ್ ಕುಬರ್ನೆಟ್ಸ್ ಕ್ಲಸ್ಟರ್‌ಗಳ ಮೇಲ್ವಿಚಾರಣೆಯ ಜವಾಬ್ದಾರಿಯುತ ಕಂಪನಿಯಲ್ಲಿ ಕೆಲಸ ಮಾಡುವ ಡೆವೊಪ್ಸ್ ಎಂಜಿನಿಯರ್ ಎಂದು ತಿಳಿದ ಬಳಿಕ, ನಿಶಿತ್ ಪಟೇಲ್ ಮತ್ತಷ್ಟು ಅಚ್ಚರಿಗೊಂಡಿದ್ದಾರೆ.
You won't believe the crazy @peakbengaluru moment I had today! On my way to a Kubernetes meetup, my Rapido captain pulled up on a Royal Enfield Hunter. Turns out he's a DevOps engineer at a company managing enterprise Kubernetes clusters. Just another day in India's tech capital
— Nishit Patel (@nishit130) August 5, 2023
ತರಹೇವಾರಿ ಕಾಮೆಂಟ್
ಟ್ವೀಟ್ ಮಾಡಿರುವ ಅವರು, ಇಂದು ನಾನು ಅನುಭವಿಸಿದ ಕ್ರೇಜಿ ಪೀಕ್ ಬೆಂಗಳೂರು ಘಟನೆಯನ್ನು ನೀವು ನಂಬುವುದಿಲ್ಲ! ಕುಬರ್ನೆಟ್ಸ್ ಮೀಟ್‌ಅಪ್‌ಗೆ ನನ್ನ ದಾರಿಯಲ್ಲಿ, ನನ್ನ ರಾಪಿಡೋ ಕ್ಯಾಪ್ಟನ್ ರಾಯಲ್ ಎನ್‌ಫೀಲ್ಡ್ ಹಂಟರ್ ನಲ್ಲಿ ಪಿಕ್ ಮಾಡಿದರು. ಅವರು ಎಂಟರ್‌ಪ್ರೈಸ್ ಕುಬರ್ನೆಟ್ಸ್ ಕ್ಲಸ್ಟರ್‌ಗಳನ್ನು ನಿರ್ವಹಿಸುವ ಕಂಪನಿಯಲ್ಲಿ ಡೆವೊಪ್ಸ್ ಎಂಜಿನಿಯರ್ ಆಗಿದ್ದಾರೆ. ಭಾರತದ ಟೆಕ್ ಕ್ಯಾಪಿಟಲ್‌ನಲ್ಲಿ ಇನ್ನೊಂದು ದಿನ" ಎಂದು ಬರೆದುಕೊಂಡಿದ್ದಾರೆ.
ಈ ಘಟನೆ ಟ್ವಿಟರ್ ನಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದನ್ನು ಈವರೆಗೆ 6 ಸಾವಿರಕ್ಕಿಂತ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಹಲವು ಬಳಕೆದಾರರು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿದ್ದು, "ಅವರು ನಿಮ್ಮ ಜೊತೆ ಮೀಟ್‌ಅಪ್‌ನಲ್ಲಿ ಭಾಗಿಯಾದರಾ?" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿದ ನಿಶಿತ್ ಪಟೇಲ್ ಇಲ್ಲ, ಅವರಿಗೆ ಬೇರೆ ಕೆಲಸ ಇತ್ತು ಎಂದು ಹೇಳಿದ್ದಾರೆ.
"ಈ ವ್ಯವಹಾರದಿಂದ ಅವರು ಎಷ್ಟು ದುಡಿಯುತ್ತಿದ್ದಾರೆ ಎಂದು ಕೇಳಿದಿರಾ?" ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದು, ಇಲ್ಲ ಅದನ್ನು ನಾನು ಕೇಳಬೇಕಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, "ಇದರಲ್ಲಿ ಅಚ್ಚರಿ ಪಡುವಂತದ್ದೇನು ಇಲ್ಲ, ಭುವನೇಶ್ವರದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ನಲ್ಲಿ ಪಿಕಪ್ ಮಾಡುತ್ತಿದ್ದಾರೆ" ಎಂದು ಹೇಳಿದರು.












Click it and Unblock the Notifications