Namma Metro Yellow Line: ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಕೆಲಸ ಚುರುಕು, ಟ್ರಾಫಿಕ್ ಏರಿಕೆ? ಗಮನಿಸಿ
ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ನಮ್ಮ ಮೆಟ್ರೋದ RV ರಸ್ತೆ-ಬೊಮ್ಮಸಂದ್ರದವರೆಗೆ ನಮ್ಮ ಮೆಟ್ರೊದ ಹಳದಿ ಮಾರ್ಗದ (Metro Yellow Line) ಕಾರಿಡಾರ್ ಯಾವಾಗ ತೆರೆಯಲಿದೆ ಎಂಬುದರ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ನಗರದ ಪ್ರಮುಖ ಟ್ರಾಫಿಕ್ ಹಬ್ ಆಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ಮುಂದಿನ ವರ್ಷ ಈ ಭಾಗದಲ್ಲಿ ಇನ್ನಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇವೆ.
ಸದ್ಯ ಸಿಲ್ಕ್ ಬೋರ್ಡ್ ಜಂಕ್ಷನ್ ಆಸುಪಾಸು ಮೆಟ್ರೋ ಹಳದಿ ಲೈನ್ ಕಾಮಗಾರಿ ನಡೆಯುತ್ತಿದೆ. ದೊಡ್ಡ ದೊಡ್ಡ ಮೆಟ್ರೋ ಪಿಲ್ಲರ್‌ಗಳು ತಲೆ ಎತ್ತಿವೆ. ಆದರೆ ಈ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಹಾದು ಹೋಗಿರುವ ಹಳದಿ ಮಾರ್ಗದಲ್ಲಿ ಒಂದಷ್ಟು ಮಾರ್ಪಾಡು ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ನಮ್ಮ ಮೆಟ್ರೋ ಅಧಿಕಾರಿಗಳು ಸಿಲ್ಕ್ ಬೋರ್ಡ್ ಮೇಲ್ಸೇತುವೆಯ ಸುತ್ತಲೂ ನಿರ್ಮಿಸಲಾಗುತ್ತಿರುವ ಐದು ರ‍್ಯಾಂಪ್‌ಗಳಲ್ಲಿ 3 ಫೆಬ್ರವರಿ 2024 ರ ವೇಳೆಗೆ ಸಿದ್ಧಗೊಳ್ಳಲಿವೆ. ಈ ರಾಂಪ್ ಸಿದ್ಧಗೊಂಡ ನಂತರ, ಮೆಟ್ರೋ ಹಳದಿ ಲೈನ್‌ನ ಮೇಲ್ಸೇತುವೆ ಜೊತೆಗೆ ಡಬಲ್ ಡೆಕ್ಕರ್ ರಸ್ತೆ ಬಳಸಿ ರಾಗಿಗುಡ್ಡ ಕಡೆಯಿಂದ ಬರುವ ವಾಹನ ಬಳಕೆದಾರರು ಸಿಗ್ನಲ್‌ನಲ್ಲಿ ನಿಲ್ಲದೆ ಎಚ್‌ಎಸ್‌ಆರ್ ಬಡಾವಣೆ ಹಾಗೂ ಹೊಸೂರು ರಸ್ತೆಗೆ ಕಡೆಗೆ ಹೋಗಲು ಸಾಧ್ಯವಾಗುವಂತೆ ಕೆಲವು ಕೆಲಸಗಳು ನಡೆಯುತ್ತಿವೆ.
ಸಿಲ್ಕ್ ಬೋರ್ಡ್ ಕಡೆಗಿನ ಸಂಚಾರದ ಮಾಹಿತಿ
ಬಿಟಿಎಂ ಲೇಔಟ್‌ನಿಂದ ಬರುವವರು ಹೊರ ವರ್ತುಲ ರಸ್ತೆ (HSR ಲೇಔಟ್ ಕಡೆಗೆ) ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ಏರಿಕೆ ರಾಂಪ್ ಬಳಸಬಹುದು. ಡಬಲ್ ಡೆಕ್ಕರ್ ಫ್ಲೈಓವರ್ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಚಲಿಸಬಹುದಾಗಿದೆ. ಕೆಳ ಹಂತದಲ್ಲಿ ಮೋಟಾರು ವಾಹನಗಳಿಗೆ ಮತ್ತು ಮೇಲಿನ ಹಂತದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ.

BMRCL ಪ್ರಕಾರ, ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಹೊರ ವರ್ತುಲ ರಸ್ತೆ (ORR) ಮತ್ತು ಹೊಸೂರು ರಸ್ತೆಗೆ ಸಂಪರ್ಕಿಸಲು ರಾಂಪ್‌ಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಟ್ರಾಫಿಕ್ ಪೊಲೀಸರ ಜೊತೆಗೆ ಸಮನ್ವಯ ಸಾಧಿಸುತ್ತಿದ್ದೇವೆ. ರಾಂಪ್ ಜೊತೆಗೆ ಯು ಆಕಾರದಲ್ಲಿ 100 ಮೀಟರ್ ಉದ್ದಕ್ಕೆ ನಾಲ್ಕು ಸ್ಪ್ಯಾನ್ ನಿರ್ಮಾಣಗೊಳ್ಳಲಿವೆ ಎಂದು ತಿಳಿಸಿದೆ.
ಕಾಂಕ್ರೀಟ್ ಸೋರ್ಸಿಂಗ್ ಕಾರ್ಯ
ಜನವರಿಯಲ್ಲಿ ಸಿಲ್ಕಬೋರ್ಡ್ ಜಂಕ್ಷನ್ ವ್ಯಾಪ್ತಿಯಲ್ಲಿ ಒಂದಷ್ಟು ಮೆಟ್ರೋ ಕೆಲಸಗಳು ನಡೆಯಲಿವೆ. ಸ್ಲ್ಯಾಬ್‌ಗಳ ನಿರ್ಮಾಣಕ್ಕೆ 2,320 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಸುರಿಯಲು 390 ಟ್ರಕ್‌ಗಳನ್ನು ಬಳಸುವುದರಿಂದ ಕಾಮಗಾರಿಗಳನ್ನು ನಿರ್ವಹಿಸಲು ಎರಡು ದಿನ ಅಗತ್ಯವಿದೆ. ಲಕ್ಕಸಂದ್ರ ಹಾಗೂ ಅಗರ ಎರಡು ಸ್ಥಾವರಗಳಿಂದ ಕಾಂಕ್ರೀಟ್ ಸೋರ್ಸಿಂಗ್ ನಡೆಸಲಾಗುತ್ತಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆ ಇಳಿಕೆಗೆ BMRCL ಒಟ್ಟು150 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇಳಿಜಾರು ನಿರ್ಮಿಸಲಿದೆ. ಇದರ ಒಟ್ಟು ಉದ್ದ 3.4 ಕಿಮೀ ಮತ್ತು ರಸ್ತೆ ಮೂಲ ಸೌಕರ್ಯಕ್ಕಾಗಿ 106 ಪಿಲ್ಲರ್‌ಗಳನ್ನು ನಿರ್ಮಿಸಲಾಗು್ತದೆ.
2024 ರೊಳಗೆ ಕೆಲಸ ಪೂರ್ಣ?
ಇನ್ನೂ ಹೆಚ್‌ಎಸ್‌ಆರ್ ಲೇಔಟ್ ಬದಿಯನ್ನು ಡಬಲ್ ಡೆಕ್ಕರ್ ಫ್ಲೈಓವರ್‌ನೊಂದಿಗೆ ರಾಗಿ ಗುಡ್ಡ ಮತ್ತು ಬಿಟಿಎಂ ಲೇಔಟ್ ಕಡೆಗೆ ಸಂಪರ್ಕಿಸುವ ರಾಂಪ್‌ಗಳ ಕಾಮಗಾರಿಯನ್ನು ಸೆಪ್ಟೆಂಬರ್ 2024 ರೊಳಗೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಸಂಚಾರ ಪೊಲೀಸರ ಸಹಕಾರದಲ್ಲಿ ದಟ್ಟಣೆ ಇಳಿಕೆಗೆ ನಮ್ಮ ಯೋಜನೆ ಸಹಕಾರಿಯಾಗಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ.












Click it and Unblock the Notifications