ಬೆಂಗಳೂರು: ಪಿಜಿ ಎದುರೆ ಯುವತಿ ಕಿಡ್ನಾಪ್‌ಗೆ ಯತ್ನ

ಬೆಂಗಳೂರು, ಮೇ, 02: ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುದ್ದಿ ವಾಹಿನಿಗಳಿಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿ ಬೆಂಗಳೂರಿಗರಿಗೆ ಆಘಾತ ಉಂಟುಮಾಡಿದೆ.

ಪೋನ್ ನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ನಿಂತಿದ್ದ ಯುವತಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯ ದಂಗುಬಡಿಸಿದೆ.[ಒಪ್ಪಿಗೆಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮುಂಬೈ ಹೈಕೋರ್ಟ್]

rape

ಕತ್ರಿಗುಪ್ಪೆ ಸಮೀಪದ ಪಿಜಿಯೊಂದರ ಬಳಿ 22 ವರ್ಷದ ಯುವತಿಯನ್ನು ಕಿಡ್ನಾಪ್ ಮಾಡಲು ಯತ್ನ ಮಾಡಲಾಗಿದೆ. ಯುವತಿ ಕೂಗಿಕೊಂಡ ತಕ್ಷಣ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ.

ಏಪ್ರಿಲ್ 23 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯನ್ನು ಹಿಂದಿನಿಂದ ಹಿಡಿದುಕೊಂಡ ವೇಳೆ ಗಾಬರಿಗೊಂಡ ಯುವತಿ ಕೂಗಿಕೊಂಡಿದ್ದಾಳೆ. ಈ ವೇಳೆ ಹಿಡಿತದಿಂದ ತಪ್ಪಿಸಿಕೊಂಡು ಓಡಿದ್ದಾಳೆ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಪಿಜಿ ಮಾಲೀಕರಿಗೆ ವಿಷಯವನ್ನು ಅಂದೇ ತಿಳಿಸಲಾಗಿದ್ದರೂ ಮಾಲೀಕ ದೂರು ದಾಖಲಿಸದಂತೆ ಹೇಳಿದ್ದಾರೆ. ಆದರೂ ಸಹ ಯುವತಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಈ ಘಟನೆ ಬಗ್ಗೆ ಸಮಗ್ರ ತನಿಖೆ ಮಾಡಿ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಪೂರ್ವ ವಿಭಾಗದ ಆಯುಕ್ತ ಲೋಕೇಶ್ ಕುಮಾರ್ ತಿಳಿಸಿದ್ದಾರೆ. ಸಂಘಟನೆಗಳು ಸಹ ಹೋರಾಟ ಆರಂಭಿಸುವ ಮಾತುಗಳನ್ನು ಆಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+