ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಸರ್ಕಾರದಿಂದ ಭೂಮಿ ಚೌಕಾಸಿ, ಆಸ್ತಿದಾರರಿಗೆ ಶಾಕ್‌ ?!

Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆದಿರುವಾಗಲೇ ಸರ್ಕಾರವು ಭೂಮಿ / ಜಾಗ ಚೌಕಾಸಿಗೆ ಮುಂದಾಗಿದೆ. ಹೌದು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಪ್ರಮುಖ ಚರ್ಚೆಗಳು ಆಗುತ್ತಿವೆ. ಇದೀಗ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಸರ್ಕಾರದ ಜಾಣ್ಮೆಯ ನಡೆಯು ಈ ಭಾಗದಲ್ಲಿ ಆಸ್ತಿ ಮಾರಾಟ ಮಾಡಬೇಕು ಹಾಗೂ ವಿಮಾನ ನಿಲ್ದಾಣದಿಂದ ಭೂಮಿಯ ಬೆಲೆ ಹೆಚ್ಚಳವಾಗಲಿದೆ ಎಂದು ಕನಸು ಕಂಡಿದ್ದ ಆಸ್ತಿದಾರರಿಗೆ ಶಾಕ್‌ ಆಗಿದೆ. ಇದರಿಂದ ರಿಯಲ್‌ ಎಸ್ಟೇಟ್‌ ಲೆಕ್ಕಾಚಾರಗಳು ಸಹ ತಲೆಕೆಳಗಾಗಿವೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ನಡೆದಿರುವ ಚರ್ಚೆಗಳ ಅಪ್ಡೇಟ್‌ ಇಲ್ಲಿದೆ.

ದೇವನಹಳ್ಳಿಯಲ್ಲಿ ಇರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈಗಾಗಲೇ ಮೂರು ಜಾಗಗಳನ್ನು ನಿಗದಿ ಮಾಡಿದೆ ರಾಜ್ಯ ಸರ್ಕಾರ. ಆದರೆ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವ ಕ್ರಮವು ಆಸ್ತಿದಾರರಿಗೆ ಭಾರೀ ಹೊಡೆತ ಕೊಡುವ ಎಲ್ಲಾ ಸಾಧ್ಯತೆಗಳೂ ಇವೆ.

Bengaluru Second International Airport Land Deal with Karnataka Government Shock for Property Owners

ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂತಿಮ ವರದಿ ಇನ್ನೇನು ಕೆಲವೇ ದಿನಗಳಲ್ಲಿ ಸಿದ್ಧವಾಗುವ ಸಾಧ್ಯತೆ. ಜಾಗ ಅಂತಿಮವಾದ ಮೇಲೆ ಮುಂದಿನ ಹಾಗೂ ಪ್ರಮುಖ ಹಂತವೆಂದರೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ 4,500ರಿಂದ 5000 ಸಾವಿರ ಎಕರೆಯಷ್ಟು ಭೂಮಿಯನ್ನು ಗುರುತು ಮಾಡಿ. ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭ ಮಾಡುವುದು. ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದರೆ, ಭೂಮಿಗೆ ಬಂಗಾರದ ಬೆಲೆ ಬರಲಿದೆ. ಅಲ್ಲದೇ ರಿಯಲ್‌ ಎಸ್ಟೇಟ್‌ಗೂ ಧಮಾಕ ಇರಲಿದೆ ಎನ್ನುವ ಈ ಭಾಗದ ಆಸ್ತಿದಾರರ ಕನಸಿಗೆ ಹಿನ್ನಡೆ ಆಗಿದೆ. ಅದರ ವಿವರ ಮುಂದಿದೆ.

ಸರ್ಕಾರಿ ಭೂಮಿ ಲೆಕ್ಕಾಚಾರ: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಎಲ್ಲಿ ಸರ್ಕಾರಿ ಜಾಗ ಹೆಚ್ಚಾಗಿ ಇದೆಯೋ ಆ ಜಾಗವನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದೆ. ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಖಚಿತಪಡಿಸಿದ್ದಾರೆ.

ಸರ್ಕಾರವು ಭೂಮಿಗೆ ಖರ್ಚು ಮಾಡುವ ಹಣವನ್ನು ಕಡಿಮೆ ಮಾಡುವುದು ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳನ್ನು ಸರಳೀಕರಣ ಮಾಡುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಶಾರ್ಟ್‌ ಲಿಸ್ಟ್‌ ಮಾಡಲಾಗಿರುವ ಮೂರು ಜಾಗದಲ್ಲಿ ಎಲ್ಲಿ ಸರ್ಕಾರಿ ಭೂಮಿ ಹೆಚ್ಚಾಗಿ ಇದೆಯೋ ಆ ಭಾಗದಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಹೇಳಿದೆ. ಇದರಿಂದ ಭೂಮಿ ಮಾರಾಟ ಮಾಡಿ ಒಳ್ಳೆಯ ದುಡ್ಡು ಮಾಡಿಕೊಳ್ಳಬೇಕು ಎನ್ನುವವರಿಗೆ ಹಿನ್ನಡೆ ಆಗಿದೆ ಎನ್ನಲಾಗುತ್ತಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಾರ್ಟ್‌ ಲಿಸ್ಟ್‌ ಜಾಗದಲ್ಲಿ ಇರುವ ಆಸ್ತಿದಾರರಿಗೆ ಇದೀಗ ಈ ವಿಚಾರವು ಆಘಾತವನ್ನುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+