Bengaluru Second Airport: ಬೆಂಗಳೂರು ಎರಡನೇ ಏರ್‌ಪೋರ್ಟ್‌ ನಿರ್ಮಾಣ ಹೇಗೆ ನಡೆಯಲಿದೆ, ಮಾನದಂಡಗಳೇನು?

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರವಾಗಿ ರಾಜ್ಯ ಸರ್ಕಾರದ ನಿಯೋಗವು ದೆಹಲಿಗೆ ತೆರಳಿ ಮಹತ್ವದ ಚರ್ಚೆ ನಡೆಸಿದೆ. ಅಲ್ಲದೆ ತ್ವರಿತವಾಗಿ ಈ ಏರ್ಪೋರ್ಟ್‌ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದೆ. ಈಗಾಗಲೇ ಮೂರು ಜಾಗಗಳನ್ನು ಗುರುತಿಸಿ, ಕೇಂದ್ರದ ಒಪ್ಪಿಗೆಗೆ ಕಾಯುತ್ತಿದೆ. ಸದ್ಯದಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಬೆಂಗಳೂರಿಗೆ ತಂಡ ಕಳಿಸಿಕೊಡಲಿದೆ. ಇನ್ನು ಈ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ? ಅದಕ್ಕಿರುವ ಮಾನದಂಡಗಳೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಸ್ಥಾಪಿಸಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ನಿರ್ಮಿಸಲಾಗುತ್ತದೆ. ಏಕೆಂದರೆ ಅಂತಹ ವಿಮಾನ ನಿಲ್ದಾಣಗಳಿಗೆ ಪಿಪಿಪಿ ರಿಯಾಯಿತಿಗಳ ಮೂಲಕ ಹಣಕಾಸು ಒದಗಿಸಲಾಗುತ್ತದೆ. ಮೊದಲಿಗೆ ವಿಮಾನ ನಿಲ್ದಾಣಗಳಿಗೆ ಭೂಮಿಯನ್ನು ಒದಗಿಸಬೇಕು. ಒಂದು ವೇಳೆ ಹಣಕಾಸಿನ ಸಮಸ್ಯೆಗಳಿದ್ದರೆ, ಕಾರ್ಯಸಾಧ್ಯತಾ ಅಂತರ ನಿಧಿ ಯೋಜನೆಯನ್ನು ಬಳಸಿಕೊಳ್ಳಬಹುದು. ಇದು ಯೋಜನೆಯ ವೆಚ್ಚದ ಶೇ 20ರವರೆಗೆ ಬಂಡವಾಳ ಅನುದಾನವನ್ನು ಒದಗಿಸುತ್ತದೆ. ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ರಿಯಾಯಿತಿಗಳನ್ನು ಕೂಡ ನೀಡಲಾಗುತ್ತದೆ. ಈ ಮಾರ್ಗವನ್ನು ಅನುಸರಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಪ್ರಾಧಿಕಾರವು ಸ್ವತಃ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಬಹುದು.

Bengaluru Second Airport Proposed Location Guidelines And Updates Criteria

ಈಗಾಗಲೇ ಕಾರ್ಯಾಚರಣೆಯಲ್ಲಿರುವ ನಾಗರಿಕ ವಿಮಾನ ನಿಲ್ದಾಣದ 150 ಕಿ.ಮೀ.ಗಿಂತ ಒಳಗೆ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣವು ಇಷ್ಟು ವರ್ಷದ ಅವಧಿಗೆ ಮಾಡುವಂತಿಲ್ಲ ಎನ್ನುವ ನಿಯಮವೂ ಇದೆ. ಇದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮೋದನೆಯ ಅಗತ್ಯವಿಲ್ಲ. ಇದಕ್ಕೆ ಪರವಾನಗಿ ನೀಡಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಅಧಿಕಾರವಿದೆ.

Take a Poll

ಒಂದು ವೇಳೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ಅಸ್ತಿತ್ವದಲ್ಲಿರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿ.ಮೀ. ಒಳಗೆ ನಿರ್ಮಿಸುವುದಾದರೆ ಮಾರ್ಗಸೂಚಿಗಳು ಹಾಗೂ ಇತರೆ ನೀತಿಗಳಿಂದ ವಿನಾಯಿತಿ ಕೂಡ ಪಡೆಯಬಹುದು. ಇದಕ್ಕಾಗಿ ಸಮಿತಿಯು ಶಿಫಾರಸುಗಳನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸುತ್ತದೆ. ಸ್ಟೀರಿಂಗ್ ಸಮಿತಿಯು ಒಮ್ಮತವನ್ನು ತಲುಪಲು ಸಾಧ್ಯವಾಗದಿದ್ದರೆ, ಆ ಪ್ರಸ್ತಾವನೆಯನ್ನು ಪ್ರಾಧಿಕಾರದ ಮುಂದೆ ಇಡಲಾಗುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ಪಡೆದ ನಂತರವೇ ಡಿಜಿಸಿಎ ಪರವಾನಗಿ ನೀಡಲಿದೆ.

ಒಂದು ವೇಳೆ ರಾಜ್ಯ ಸರ್ಕಾರವು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲು ಬಯಸಿದರೆ, ಪ್ರಾಧಿಕಾರಕ್ಕೆ ಭೂಮಿ, ರಿಯಾಯಿತಿ, ವಿಮಾನ ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತಲಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಹಕ್ಕುಗಳು, ರಸ್ತೆ ಸೇರಿ ವಿಮಾನ ನಿಲ್ದಾಣಕ್ಕೆ ಸಂಪರ್ಕ, ರಾಜ್ಯ ತೆರಿಗೆಗಳಿಂದ ವಿನಾಯಿತಿಗಳ ಮೂಲಕ ಹಣಕಾಸಿನ ಪ್ರೋತ್ಸಾಹ ಧನ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಹಕರಿಸಬಹುದು.

Bengaluru Second Airport Proposed Location Guidelines And Updates Criteria

ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಮೊದಲಿಗೆ ಸೂಕ್ತವಾದ ಸ್ಥಳವನ್ನು ಗುರುತಿಸುವುದು, ಪೂರ್ವ-ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದು, ವಿವಿಧ ಸರ್ಕಾರಿ ಸಂಸ್ಥೆಗಳಿಂದ ಅನುಮತಿಗಳನ್ನು ಪಡೆಯುವುದು ಮತ್ತು ಮಾಸ್ಟರ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು, ನಂತರ ನಿರ್ಮಾಣ ಮತ್ತು ಕಾರ್ಯಾರಂಭ ಮಾಡುವುದು ಒಳಗೊಂಡಿರುತ್ತದೆ.

ಸ್ಥಳ ಅನುಮತಿಗಾಗಿ ಹಾಗೂ ತಾತ್ವಿಕವಾಗಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಎಲ್ಲ ಪ್ರಸ್ತಾವನೆಗಳನ್ನು ಸ್ಟೀರಿಂಗ್ ಸಮಿತಿ ಮೂಲಕ ರವಾನಿಸಲಾಗುತ್ತದೆ. ಅರ್ಜಿದಾರರು ಭಾರತ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಚಿವಾಲಯಗಳಿಂದ ಅನುಮತಿಗಳನ್ನು ಪಡೆಯಬೇಕಾಗುತ್ತದೆ. ಸದ್ಯ ಈ ಪ್ರಕ್ರಿಯೆ ಕೇಂದ್ರದ ಹಂತದಲ್ಲಿದ್ದು, ಶೀಘ್ರದಲ್ಲೇ ಬೆಂಗಳೂರಿಗೆ ಕೇಂದ್ರ ತಂಡ ಭೇಟಿ ನೀಡಿ, ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಫೈನಲ್‌ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+