ಪತ್ನಿಯನ್ನು ಕಿಡ್ನಾಪ್ ಮಾಡಿದ ಮಾಜಿ ಪ್ರಿಯಕರ!
ಬೆಂಗಳೂರು, ಅಕ್ಟೋಬರ್. 15: 'ನನ್ನ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯಕರ ಅಪಹರಣ ಮಾಡಿದ್ದಾನೆ' ಎಂದು ಆರೋಪಿಸಿ ಪತಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ಇಂಥದ್ದೊಂದು ದೂರು ದಾಖಲಾಗಿದೆ.
ನನ್ನ ಪತ್ನಿ ನಂದಿನಿ ಖಾಸಗಿ ಕಂಪನಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಯನ್ನು ಮಾಜಿ ಪ್ರಿಯಕರ ಅಪಹರಣ ಮಾಡಿದ್ದಾನೆ ಎಂದು ಪತಿ ಥಾಮಸ್ ಸ್ಟಾಲೀನ್ ಪೊಲೀಸರಿಗೆ ದೂರು ನೀಡಿದ್ದಾರೆ.[ತುಮಕೂರು : ಮಹಿಳೆ ಅಪಹರಣ, ಸಾಮೂಹಿಕ ಅತ್ಯಾಚಾರ]

ದಂಪತಿ ಬೆಂಗಳೂರಿನ ಎಂ ಎಸ್ ಪಾಳ್ಯದಲ್ಲಿ ವಾಸವಿದ್ದರು. ಎಂದಿನಂತೆ ಅಕ್ಟೋಬರ್ 14 ರಂದು ಕೆಲಸಕ್ಕೆಂದು ನಂದಿನಿ ಲಿಂಗಾರಾಜಪುರದ ಖಾಸಗಿ ಕಂಪನಿಗೆ ತೆರಳಿದ್ದರು. ಆದರೆ ಸಂಜೆ ಮನೆಗೆ ಬರುವ ವೇಳೆ ಶಿವಾಜಿನಗರದಿಂದ ನಾಪತ್ತೆಯಾಗಿದ್ದಾರೆ. ಪತಿಗೆ ಕರೆ ಮಾಡಿದ ನಂದಿನಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದಾದ ಮೇಲೆ ಪತಿ ದೂರು ನೀಡಿದ್ದು ಪೊಲೀಸರು ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ತನಿಖೆ ಆರಂಭ ಮಾಡಿದ್ದಾರೆ. ಅಪಹರಣಕ್ಕೆ ಮೂಲ ಕಾರಣ ತಿಳಿದು ಬಂದಿಲ್ಲ.












Click it and Unblock the Notifications