Golden Star Ganesh: ಮತಗಟ್ಟೆಯಲ್ಲಿ ಮತ ಚಲಾಯಿಸಿದ ಚೆಲುವಿನ ಚಿತ್ತಾರ ಜೋಡಿ...
ಬೆಂಗಳೂರು ಏಪ್ರಿಲ್ 26: ಬೆಂಗಳೂರಿನಲ್ಲಿ ಅನೇಕ ಸ್ಯಾಂಡಲ್‌ವುಡ್ ನಟ ನಟಿಯರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಮಾತ್ರವಲ್ಲದೆ ತಮ್ಮ ಅಭಿಮಾನಿಗಳು ಹಾಗೂ ಅನುಯಾಯಿಗಳಿಗೆ ಮತಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಯಲ್ಲಿ ವೋಟು ಮಾಡಿದರು.
ಬೆಂಗಳೂರಿನ ಆರ್. ಆರ್ ನಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ ಚಲಾಯಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, 'ಹೆಚ್ಚು ಸಂಖ್ಯೆಯಲ್ಲಿ ಬಂದು ಓಟಿಂಗ್ ಮಾಡಿ. ಹಿರಿಯ ನಾಯಕರು ಹೆಚ್ಚು ಸಂಖ್ಯೆಯಲ್ಲಿ ಬಂದು ವೋಟು ಮಾಡ್ತಾಯಿದ್ದಾರೆ.

ನಾನು ಬೆಳಿಗ್ಗೆ ಯಾಕೆ ಬಂದೆ ಅಂದರೆ, ತನ್ನ ನೋಡಿ ನನ್ನ ಅಭಿಮಾನಿಗಳು, ಅನುಯಾಯಿಗಳು ಬಂದು ಮತ ಚಲಾಯಿಸಲು ಬರಲಿ ಎನ್ನುವ ಕಾರಣಕ್ಕೆ. ವೋಟು ಮಾಡಿಲ್ಲ ಅನ್ನೋದಕ್ಕಿಂತ ವೋಟು ಮಾಡಿದೆ ಅನ್ನೋದಕ್ಕೆ ಬೆಲೆ ಜಾಸ್ತಿ. ಹೀಗಾಗಿ ಯುವ ಪೀಳಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮನವಿ ಮಾಡಿದರು.
ನಟ ಪ್ರಕಾಶ ರೈ ಕೂಡ ಮತಚಲಾಯಿಸಿ ಮತದಾರರು ಮತಚಲಾಯಿಸುವಂತೆ ಕೋರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರಕಾಶ್ ರೈ, 'ನಾನು ಮತದಾನ ಮಾಡಿದ್ದೇನೆ. ನೀವು ಕೂಡ ಮತದಾನ ಮಾಡಿ. ಅದು ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ನೀವು ಚಲಾಯಿಸಿ' ಎಂದು ಹೇಳಿದರು.

ರಾಹುಲ್ ದ್ರಾವಿಡ್, 'ನಾನು ವೋಟು ಮಾಡಿದ್ದೇನೆ. ಯಾರೆಲ್ಲಾ ವೋಟು ಮಾಡಿಲ್ಲ ಮತಗಟ್ಟೆಗೆ ಬಂದು ವೋಟು ಮಾಡಿ. ವೋಟು ಮಾಡಲು ಅರ್ಹರಾಗಿರುವವರು ಮತದಾನ ಮಾಡಿ. ಹಿರಿಯ ನಾಗರಿಕರು ಮತಗಟ್ಟೆಗಳಲ್ಲಿ ಕಾಣಿಸುತ್ತಿದ್ದಾರೆ. ನೀವು ಕೂಡ ಉತ್ಸಾಹದಿಂದ ಬಂದು ಮತ ಚಲಾಯಿಸಿ' ಎಂದರು.
ಇವರೊಂದಿಗೆ ಬೆಂಗಳೂರಿನಲ್ಲಿ ನಟಿ ಅಮೂಲ್ಯ ಮತದಾನ ಮಾಡಿದರು. ನಟ ಜಗ್ಗೇಶ್ ಕೂಡ ಮತ ಚಲಾವಣೆ ಮಾಡಿದರು.












Click it and Unblock the Notifications