Puneeth Rajkumar Road : ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರು, ನಾಳೆ ಬೃಹತ್ ಸಮಾರಂಭ

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ರಾಜ್ಯ ಸರ್ಕಾರ ನೀಡಿದೆ. ಡಾ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರಿಡಲು ತೀರ್ಮಾನಿಸಿದ್ದು

ಬೆಂಗಳೂರು, ಫೆಬ್ರವರಿ 06: ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ರಾಜ್ಯ ಸರ್ಕಾರ ನೀಡಿದೆ. ಡಾ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರಿಡಲು ತೀರ್ಮಾನಿಸಿದ್ದು, ಮಂಗಳವಾರ ಬೃಹತ್ ಕಾರ್ಯಕ್ರಮ ಜರುಗಲಿದೆ.

ಸಿನಿಮಾ ಸೇರಿದಂತೆ ಸಾಮಾಜಿಕ ಸಾಧನೆ ಮಾಡಿ ಮಾದರಿಯಾದ ಅಭಿಮಾನಿಗಳ ಕಣ್ಮಣಿ ದಿ.ಡಾ.ಪುನೀತ್ ರಾಜಕುಮಾರ್ ಅವರ ಹೆಸರು ಚಿರಸ್ಥಾಯಿಯಾಗುವಂತೆ ಮಾಡಲು ಈ ನೀರ್ಧಾರ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದರು.

ಈ ಸಂಬಂಧ ನಡೆದ ಸಭೆ ಬಳಿಕ ಮಾತನಾಡಿದ ಅವರು, ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ಹಾಗೂ ಬನ್ನೇರುಘಟ್ಟವರೆಗಿನ 12ಕಿಲೋ ಮೀಟರ್ ಡಬಲ್ ರಸ್ತೆಗೆ 'ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಹೆಸರು ಇಡಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ನಾಮಕರಣ ಮಾಡಲಿದ್ದಾರೆ ಎಂದರು.

Bengaluru ring road will be naming ceremony Dr. Puneeth Rajkumar on Tuesday Feb 7

ಸಾಕಷ್ಟು ದಿವಸಗಳಿಂದ ಇಂತದ್ದೊಂದು ಬೇಡಿಕೆ ಕೇಳಿ ಬಂದಿದ್ದು, ಅವರ ಬೇಡಿಕೆ ಸ್ಪಂದಿಸಿದೆ. ಮಂಗಳವಾರ ಸಂಜೆ ನಡೆಯಲಿರುವ ಬೃಹತ್ ಸಮಾರಂಭಕ್ಕೆ ಅನೇಕ ಗಣ್ಯರು, ಹಿರಿಯ ನಟ ಡಾ.ಶಿವರಾಜ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+