ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ!
ಬೆಂಗಳೂರು, ಫೆಬ್ರವರಿ 28: ಸೈಬರ್ ಕಳ್ಳರ ಕಣ್ಣು ನಿವೃತ್ತ ಪೊಲೀಸ್ ಅಧಿಕಾರಿಗಳ ಮೇಲೆ ಬಿದ್ದಂತಾಗಿದೆ. ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಹಣ ದೋಚಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಅವರ ಇ ಮೇಲ್ ಹ್ಯಾಕ್ ಮಾಡಿ ಅವರ ಆಪ್ತರಿಂದ ಸೈಬರ್ ಕಳ್ಳರು ಎತ್ತುವಳಿ ಮಾಡಿದ್ದಾರೆ.
ಶಂಕರ್ ಬಿದರಿ ಅವರು ಬಳಸುತ್ತಿದ್ದ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿರುವ ಸೈಬರ್ ಕಿರಾತಕರು, ಹಣ ಕಳಿಸುವಂತೆ ಶಂಕರ್ ಬಿದರಿ ಆಪ್ತರಿಗೆ ಇ ಮೇಲ್ ಸಂದೇಶ ರವಾನಿಸಿದ್ದಾರೆ. ಇ ಮೇಲ್ ಜತೆಗೆ ಖಾಸಗಿ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸಿದ್ದಾರೆ. ತುರ್ತಾಗಿ ಹಣ ಬೇಕಾಗಿದೆ ಎಂದು ಶಂಕರ್ ಬಿದರಿ ಸಂದೇಶ ನೋಡಿದ ಕೂಡಲೇ ಅದನ್ನು ಖಚಿತ ಪಡಿಸಿಕೊಳ್ಳದೇ ಆಪ್ತರೊಬ್ಬರು 25 ಸಾವಿರ ರೂಪಾಯಿ ಕಳಿಸಿದ್ದಾರೆ. ಇದೇ ರೀತಿ ಶಂಕರ್ ಬಿದರಿ ಇ ಮೇಲ್ ಮಾಡಿದ್ದಾರೆ ಎಂದು ಭಾವಸಿ ಅವರ ಆಪ್ತರು ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಇದು ಶಂಕರ್ ಬಿದರಿ ಅವರ ಗಮನಕ್ಕೆ ಹೋದ ಕೂಡಲೇ , ಸೈಬರ್ ಕ್ರಿಮಿನಲ್ ಗಳ ಕೃತ್ಯ ಎಂಬುದು ಬೆಳಕಿಗೆ ಬಂದಿದೆ. ಅವರು ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇ ಮೇಲ್ ಐಡಿ ಹ್ಯಾಕ್ ಮಾಡಿ ಆಪ್ತ ಸ್ನೇಹಿತರಿಗೆ ಸಂದೇಶ ಕಳಿಸಿ ಹಣ ಎತ್ತುವಳಿ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸವುಂತೆ ದೂರಿನಲ್ಲಿ ಕೋರಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಎರಡು ಲಕ್ಷ ರೂ. ವಂಚನೆ ಮಾಡಿದ್ದರು. ಈ ಕುರಿತು ಅಜಯ್ ಕುಮಾರ್ ಸಿಂಗ್ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಇತ್ತೀಚೆಗೆ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ದಕ್ಷ ಪೊಲೀಸ್ ಅಧಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಸೈಬರ್ ಕಳ್ಳರು, ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಆಪ್ತರಿಗೆ ಸಂದೇಶ ಕಳಿಸುವುದು, ಇಲ್ಲವೇ, ಅವರ ಖಾತೆಗಳಿಗೆ ನಾನಾ ರೀತಿಯ ಸಂದೇಶ ಕಳಿಹಿಸಿ ಬ್ಯಾಂಕ್ ನಿಂದಲೇ ಹಣ ಎಗರಿಸುವ ಕೃತ್ಯಗಳು ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಿವೆ. ಇತ್ತೀಚೆಗೆ ಹಲವು ಇನ್‌ಸ್ಪೆಕ್ಟರ್ ಗಳ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಸೈಬರ್ ಕಳ್ಳರು, ಅವರ ಆಪ್ತ ಕೂಟಕ್ಕೆ ಗೂಗಲ್ ಪೇ ಮಾಡುವಂತೆ ಸಂದೇಶ ರವಾನಿಸಿದ್ದರು. ಈ ಕುರಿತು ಸರಣಿ ದೂರುಗಳು ದಾಖಲಾಗಿದ್ದವು. ಇದೀಗ ನಿವೃತ್ತ ಪೊಲೀಸ್ ಅಧಿಕಾರಿಗಳ ಸರದಿ ಆರಂಭವಾಗಿದೆ.
Recommended Video
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications