Bengaluru Rent: ಬೆಂಗಳೂರಿನಲ್ಲಿ ಹಣ ಉಳಿಸುವುದು ಸುಲಭ ಎಂದ ಯುವತಿ, ಬಾಡಿಗೆ ಮನೆ ಬಗ್ಗೆಯೂ ಬೆಸ್ಟ್‌ ಟಿಪ್ಸ್‌, ವೈರಲ್ ಪೋಸ್ಟ್‌

Bengaluru Rent: ಬೆಂಗಳೂರು ಮಹಾನಗರದಲ್ಲಿ ಬಾಡಿಗೆ ಮನೆಗಳ ವಿಷಯವು ಎಂದಿಗೂ ಮುಗಿಯದ ಚರ್ಚೆಯ ವಿಷಯ. ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಗಳನ್ನು ಹುಡುಕುವುದು ಮೊದಲ ಸವಾಲಾದರೆ, ಉತ್ತಮ ಬಾಡಿಗೆ ಮನೆ ಹಾಗೂ ಕಡಿಮೆ ಬಾಡಿಗೆ ಮನೆಗಳು ಸಿಗುವುದು ಮತ್ತೊಂದು ಸವಾಲು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆ ಬೆಲೆಯು ಭಾರೀ ದುಬಾರಿ ಆಗುವುದಕ್ಕೆ ಪ್ರಾರಂಭವಾಗಿದೆ. ನಗರದಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾಗಿರುವುದು ಸಹ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ದುಬಾರಿ ವೆಚ್ಚದ ಬಗ್ಗೆ ಬೆಂಗಳೂರಿನಲ್ಲಿ ವಾಸಿಸುವ ಯುವತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ದುಬಾರಿ ಜೀವನಶೈಲಿಯ ಆಯ್ಕೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಬೆಂಗಳೂರಲ್ಲಿ ದುಬಾರಿ ಬಾಡಿಗೆಗೆ ಮನೆ ಪಡೆಯುವುದು, ಕೆಫೆಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುವುದೆಲ್ಲ ಬೇಡದ ವಿಷಯ. ಯುವಕರು ಆದಾಯ ಗಳಿಸುವುದರೊಂದಿಗೆ ಭವಿಷ್ಯಕ್ಕಾಗಿ ಒಳ್ಳೆಯ ಸೇವಿಂಗ್ಸ್‌ ಮಾಡಬೇಕು ಅಂತ ಅವರು ಹೇಳಿದ್ದಾರೆ ಬೆಂಗಳೂರಿನಲ್ಲಿ ಜನರು ಹೇಗೆಲ್ಲ ಹಣ ಖರ್ಚು ಮಾಡುತ್ತಾರೆ. ಈ ದುಬಾರಿ ವೆಚ್ಚದಿಂದ ಹೊರ ಬರುವುದು ಹೇಗೆ ಎಂದು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.

Bengaluru Rent

ಬೆಂಗಳೂರು ನಗರದಲ್ಲಿ ಕಳೆದ 7 ತಿಂಗಳಿನಿಂದ ವಾಸಿಸುತ್ತಿರುವ ನಾರ್ಥಿ ಯುವತಿ ಸಿಮ್ರಿಧಿ ಮಖಿಜಾ ಅವರು, ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ವೈಯಕ್ತಿಕ ಖರ್ಚುಗಳ ವಿವರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೇಗೆ ಹಣ ಉಳಿತಾಯ ಮಾಡಬಹುದು ಹಾಗೂ ಯಾವ ಖರ್ಚನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ.

ನಾನು ಬೆಂಗಳೂರಿನಲ್ಲಿ ಏಳು ತಿಂಗಳು ವಾಸಿಸಿದ ನಂತರ, ಜನರು ಏಕೆ ಇಷ್ಟೊಂದು ಖರ್ಚು ಮಾಡುತ್ತಾರೆ ಎನ್ನುವುದು ಅರ್ಥವಾಯಿತು. ಆದರೆ ನನಗೆ ಅರ್ಥವೇ ಆಗದ ಕೆಲವು ವಿಚಾರಗಳೂ ಸಹ ಇವೆ. ಇಲ್ಲಿ ಜನ ಕೆಫೆಗಳಲ್ಲಿ ಒಂದೇ ಬಾರಿಗೆ 5,000 ರೂಪಾಯಿ ಖರ್ಚು ಮಾಡುವುದು, ಸುಮಾರು 20,000ಕ್ಕೆ ಉತ್ತಮ ಮನೆ ಸಿಗುವಾಗ ದುಬಾರಿ ಮನೆಯಲ್ಲಿ ವಾಸಿಸಲು 40,000 ರೂಪಾಯಿ ಬಾಡಿಗೆ ಮನೆಯನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಒಂದೇ ವಾರಾಂತ್ಯದಲ್ಲಿ 20,000 ರೂಪಾಯಿ ಮೊತ್ತವನ್ನು ಶಾಪಿಂಗ್‌ಗೆ ಖರ್ಚು ಮಾಡುವುದು.

ಜನರ ಆದಾಯವು ಹೆಚ್ಚಾದಂತೆಲ್ಲ ಅದನ್ನು ಉಳಿತಾಯವೂ ಹೆಚ್ಚಾಗಬೇಕು. ಕನಿಷ್ಠ ಅಗತ್ಯಕ್ಕೆ ಮಾತ್ರ ಖರ್ಚು ಮಾಡುವ ಮತ್ತು ಸಾಧ್ಯವಾದಷ್ಟು ಉಳಿಸುವ ಜೀವನ ರೂಢಿಸಿಕೊಳ್ಳಬೇಕು. ಏಕೆಂದರೆ ಭವಿಷ್ಯವು ಯಾವಾಗಲೂ ತುಂಬಾ ಅನಿರೀಕ್ಷಿತವಾಗಿರುತ್ತದೆ ಎಂದಿದ್ದಾರೆ.

Bengaluru Rent: ಆಸೆಗಳಿಗೆ ಕಡಿವಾಣವೇಕೆ; ಆದಾಯ ಹೆಚ್ಚಿಸಿಕೊಳ್ಳಿ!

ಇನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಾವು ಆಸೆಗಳಿಗೆ ಯಾಕೆ ಕಡಿವಾಣ ಹಾಕಬೇಕು ಇದರ ಬದಲಿಗೆ ಆದಾಯ ಹೆಚ್ಚಿಸಿಕೊಳ್ಳುವುದು ಉತ್ತಮವಲ್ಲವೇ ಅಂತ ಹಲವು ನೆಟ್ಟಿಗರು ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+