Bengaluru Rent House: ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವುದು ಇಷ್ಟು ಸಿಂಪಲ್
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದೇ ದೊಡ್ಡ ಫಜೀತಿ. ಏರಿಯಾ ಚೆನ್ನಾಗಿದ್ದರೆ, ಬಾಡಿಗೆ ಜಾಸ್ತಿ ಬಾಡಿಗೆ ಓಕೆ ಆಯ್ತು ಅಂದ್ರೆ, ಮತ್ತೊಂದು ಪ್ರಾಬ್ಲಂ. ಇದಕ್ಕೆಲ್ಲ ಮೊದಲು ಮನೆ ಹುಡುಕುವುದೇ ಸವಾಲು. ಏರಿಯಾಗಳನ್ನು ಸುತ್ತಿ ಮನೆ ಹುಡುಕುವುದಕ್ಕೆ ಟೈಮ್ ಇರಲ್ಲ. ಬ್ರೋಕರ್‌ಗೆ ಹೇಳಿದ್ರೆ, "ಸರ್, ಮನೆ ಹುಡುಕಿ ಕೊಡ್ತೀವಿ ಒಂದು ತಿಂಗಳು ಬಾಡಿಗೆ ಕೊಡ್ಬೇಕು" ಎನ್ನುವ ಷರತ್ತು ಬೇರೆ. ಬ್ರೋಕರ್‌ಗೆ ದುಡ್ಡು ಕೊಡ್ದೆ ಸರಳವಾಗಿ ಮನೆ ಹುಡುಕುವುದೇಗೆ ಎನ್ನುವುದನ್ನು ನಾವು ತಿಳ್ಸತೀವಿ.
ಬೆಂಗಳೂರು ಮಾತ್ರವಲ್ಲ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ನೀವು ಸರಳವಾಗಿ ಹಾಗೂ ಕುಳಿತಲ್ಲಿಂದಲೇ ಆನ್‌ಲೈನ್ ಮೂಲಕ ನೀವು ಮನೆ ಹುಡುಕಬಹುದು. ಇದಕ್ಕೆ ಅತ್ಯಂತ ಸರಳ ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದು. ಈ ಮೊದಲಿನಂತೆ ನೀವು ರಸ್ತೆ ರಸ್ತೆ ತಿರುಗಿ ಮನೆ ಹುಡುಕುವ ಅವಶ್ಯಕತೆ ಇಲ್ಲ. ಮನೆ ಹುಡುಕುವುದಕ್ಕೆ ಈ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಸಾಕು.

ಬಾಡಿಗೆ ಮನೆ ಹುಡುಕುವುಕ್ಕೆ ಆ್ಯಪ್
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಸ್ವಲ್ಪ ಕಷ್ಟವೇ. ನಮ್ಮ ಬಜೆಟ್ ಹಾಗೂ ಅಭಿರುಚಿಗೆ ಅನುಗುಣವಾಗಿ ಮನೆಗಳು ಸಿಗುವುದಿಲ್ಲ. ಆದರೆ, ಈ ಆ್ಯಪ್‌ಗಳನ್ನು ಮನೆ ಬಾಡಿಗೆ, ಮನೆ ಭೋಗ್ಯಕ್ಕೆ ಹಾಗೂ ಮಾರಾಟಕ್ಕೆ ಇರುವ ಮನೆಗಳನ್ನು ಸಹ ಹುಡುಕಬಹುದು. ಇದರಲ್ಲಿ ಕೆಲವು ಆ್ಯಪ್‌ಗಳು 5ರಿಂದ 20 ಕಾಂಟ್ಯಾಕ್ಟ್‌ಗಳನ್ನು ಉಚಿತವಾಗಿ ನೀಡುತ್ತವೆ. ಅಂದರೆ, ನೀವು ಮನೆ ಹುಡುಕುವುದಕ್ಕೆ ಈ ಆ್ಯಪ್‌ಗಳಲ್ಲಿ ಮೊದಲು ಫ್ರೀ ಸರ್ವೀಸ್ ಸಹ ಬಳಸಬಹುದು. ಇದಾದ ನಂತರೂ ಅತ್ಯಂತ ಕಡಿಮೆ ಶುಲ್ಕವನ್ನು ವಿಧಿಸುತ್ತವೆ. ನೀವು ಬ್ರೋಕರ್‌ಗಳಿಗೆ ಕೊಡುವ ಮೂರನೇ ಒಂದರಷ್ಟು ಹಣವನ್ನು ಮಾತ್ರ ಆ್ಯಪ್‌ಗಳ ಸರ್ವೀಸ್ ಗೆ ನೀಡಿದರೆ ಸಾಕು.
ಬಾಡಿಗೆ ಮನೆ ಹುಡುಕುವುದಕ್ಕೆ ಇರುವ ಫ್ರೀ
ಬಾಡಿಗೆ ಮನೆ ಹುಡುಕುವುದಕ್ಕೆಂದೇ ಕೆಲವು ಆ್ಯಪ್ ಗಳನ್ನು ಈಚೆಗೆ ಪರಿಚಯಿಸಲಾಗಿದೆ. ಅಲ್ಲದೇ ಕೆಲವು ವೆಬ್‌ಸೈಟ್‌ಗಳು ಸಹ ಇವೆ. ಈ ರೀತಿ ಮನೆ ಹುಡುಕುವುದಕ್ಕೆ, ಮನೆ ಖಾಲಿ ಇದೆ ಎನ್ನುವುದನ್ನು ಪತ್ತೆ ಮಾಡುವುದಕ್ಕೆ ಇರುವ ಕೆಲವು ಪ್ರಮುಖ ಆ್ಯಪ್‌ಗ ಳು ಹಾಗೂ ವೆಬ್‌ಸೈಟ್‌ಗಳ ವಿವರ ಈ ರೀತಿ ಇಲ್ಲಿದೆ.
* Noboroker.com: ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಆ್ಯಪ್‌ಗಳಲ್ಲಿ ಒಂದು. ನೀವು ಬಾಡಿಗೆ ಮನೆ
ಹುಡುಕಬೇಕೆಂದರೆ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹುಡುಕಬಹುದು. ಇನ್ನು ಹೆಚ್ಚು ಹಣ ಖರ್ಚು ಮಾಡದೆ ಇದರಿಂದ ಮನೆ ಹುಡುಕಬಹುದು. ಈ ವೆಬ್‌ಸೈಟ್ ಮನೆ ಹುಡುಕುವುದಕ್ಕೆ ಅತ್ಯಂತ ಸರಳವಾಗಿದೆ.
* 99acres: ಮನೆಗಳನ್ನು ಹುಡುಕುವುದಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನ ಬಳಸುತ್ತಿರುವ ವೆಬ್‌ಸೈಟ್ (ಆ್ಯಪ್)ಗಳಲ್ಲಿ ಇದು ಸಹ ಒಂದಾಗಿದೆ. ಇದರಲ್ಲಿ ಯಾವ ಏರಿಯಾದಲ್ಲಿ ಬಾಡಿಗೆ ಟ್ರೆಂಡ್ ಹೇಗಿದೆ ಎನ್ನುವುದನ್ನು ಸಹ ನೀವು ನೋಡಬಹುದು. ಮನೆ ನಿರ್ಮಾಣದಲ್ಲಿ ಹೊಸ ಪ್ರಾಜೆಕ್ಟ್‌ಗಳ ವಿವರವನ್ನು ಈ ಆ್ಯಪ್ ಅನ್ನು ನೀವು ನೋಡಬಹುದು.
* Quicker.com: ಹೆಸರೇ ಸೂಚಿಸುವಂತೆ ಈ ಕ್ವೀಕ್ ಆಗಿ ನೀವು ಮನೆ ಹುಡುಕಬಹುದು. ಬಾಡಿಗೆ ಮನೆ ಮಾತ್ರವಲ್ಲ. ಈ ವೆಬ್‌ಸೈಟ್‌ನ ಮೂಲಕ ನೀವು ಮನೆ ಸರ್ವೀಸ್, ಬೈಕ್ ಸರ್ವೀಸ್ ಹಾಗೂ ಎಲೆಕ್ಟ್ರಾನಿಕ್ಸ್‌ಗಳ ಸರ್ವೀಸ್ ಸಹ ಲಭ್ಯವಿದೆ. ಮೆಜೆಸ್ಟಿಕ್‌ನಲ್ಲಿ ಇಳಿದು ನೀವು, ಬಸ್, ಮೆಟ್ರೋ ಮತ್ತು ಟ್ರೈನ್ ಬಳಸಿದಂತೆ ಎಲ್ಲವೂ ಒಂದೇ ಕಡೆ ಸಿಗಲಿದೆ.
* magicbricks.com: ಈ ವೆಬ್‌ಸೈಟ್‌ನಲ್ಲೂ ನೀವು ಸರಳವಾಗಿ ಬಾಡಿಗೆ ಮನೆಯನ್ನು ಹುಡುಕಬಹುದು. ಮ್ಯಾಜೀಕ್‌ಬ್ರೀಕ್ಸ್ ವೆಬ್‌ಸೈಟ್‌ನ ಮುಖಪುಟದಲ್ಲೇ ಬಾಡಿಗೆ ಮನೆಯ ವಿವರಗಳು ಸಿಗುತ್ತವೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮನೆಗಳನ್ನು ಇಲ್ಲಿ ಹುಡುಕುವುದಕ್ಕೆ ಅವಕಾಶ ಇದೆ.
* Squareyards: ಇದು ಸಹ ಸರಳವಾಗಿ ನೀವು ಬಾಡಿಗೆ ಮನೆ ಹುಡುಕುವುದಕ್ಕೆ ಸಹಕಾರಿಯಾಗಿದೆ. ಇದರೊಂದಿಗೆ Nestway.com: ಈ ವೆಬ್‌ಸೈಟ್ ಮೂಲಕವೂ ನಿಮಗಿಷ್ಟವಾದ ಮನೆಗಳನ್ನು ಹುಡುಕಬಹುದಾಗಿದೆ.
ಮನೆ ಖಾಲಿ ಇದೆ, ಬಾಡಿಗೆಗೆ ಮನೆ ಇದೆ
ಮನೆ ಖಾಲಿ ಇದೆ ಎನ್ನುವುದನ್ನು ಹುಡುಕುವುದಕ್ಕೆ ಇಷ್ಟೊಂದು ಆ್ಯಪ್ ವೆಬ್‌ಸೈಟ್‌ಗಳಿವೆ. ಇದರಲ್ಲಿ ನೀವು ಹೋಗಿ ನಿಮಗೆ ಯಾವ ಏರಿಯಾದಲ್ಲಿ, ಎಷ್ಟು ಬಜೆಟ್ ಹಾಗೂ ಯಾವ ರೀತಿಯ ಮನೆಗಳು ಬೇಕು ಎಂದು ಆಯ್ಕೆ ಮಾಡಿಕೊಂಡರೆ ಮನೆ ಖಾಲಿ ಇರುವ ವಿವರ ಬರಲಿದೆ. ಇದರೊಂದಿಗೆ ಮನೆ ಮಾಲೀಕರ ಮೊಬೈಲ್ ನಂಬರ್ ಕೂಡ ಸಿಗುತ್ತೆ. ಮನೆ ಮಾಲೀಕರಿಗೆ ಕರೆ ಮಾಡಿ, ಬಾಡಿಗೆಗೆ ಖಾಲಿ ಇರುವ ಮನೆಯ ಬಗ್ಗೆ ವಿಚಾರಿಸಬಹುದು. ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಖಾಲಿ ಮನೆಯ ಪೋಟೋಗಳು ಸಹ ಸಿಗಲಿವೆ. ಅವುಗಳನ್ನೂ ನೀವು ನೋಡಬಹುದು. ಆದರೆ, ಆ್ಯಪ್ ಹಾಗೂ ವೆಬ್‌ಸೈಟ್‌ನ ಪೋಟೋಗಳನ್ನು ನೋಡಿಯೇ ನಿರ್ಧಾರಕ್ಕೆ ಬರಬೇಡಿ. ಒಮ್ಮೆ ಬಾಡಿಗೆಗೆ ಖಾಲಿ ಇರುವ ಮನೆಯನ್ನು ಒಮ್ಮೆ ಪರಿಶೀಲಿಸಿ, ನಂತರ ಮುಂದುವರಿಯುವುದು ಉತ್ತಮ.












Click it and Unblock the Notifications