Bengaluru Traffic: ವಿಶ್ವದಲ್ಲೇ ಬೆಂಗಳೂರು ಟ್ರಾಫಿಕ್‌ಗೆ 2ನೇ ಸ್ಥಾನ, ವರ್ಷದ 7 ದಿನ ರಸ್ತೆಯಲ್ಲೇ ವ್ಯರ್ಥ
ಬೆಂಗಳೂರು: ದೇಶದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು, ತಂತ್ರಜ್ಞಾನದಲ್ಲಿ ಎಷ್ಟು ಮುಂಚೂಣಿಯಲ್ಲಿದೆಯೋ, ಸಂಚಾರ ದಟ್ಟಣೆಯಲ್ಲಿಯೂ ಅಷ್ಟೇ ಕುಖ್ಯಾತಿ ಗಳಿಸುತ್ತಿದೆ. ಅಂತಾರಾಷ್ಟ್ರೀಯ ಲೊಕೇಶನ್ ಟೆಕ್ನಾಲಜಿ ಕಂಪನಿಯಾದ 'ಟಾಮ್‌ಟಾಮ್' (TomTom) ಬಿಡುಗಡೆ ಮಾಡಿರುವ 2025ರ ವಾರ್ಷಿಕ ಟ್ರಾಫಿಕ್ ವರದಿಯು ಬೆಂಗಳೂರಿಗರ ನಿದ್ದೆಗೆಡಿಸಿದೆ. ಈ ವರದಿಯ ಪ್ರಕಾರ, ಅತಿ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೆಕ್ಸಿಕೋ ಸಿಟಿ ಮಾತ್ರ ಬೆಂಗಳೂರಿಗಿಂತ ಮುಂದಿದ್ದು, ಐರ್ಲೆಂಡ್‌ನ ಡಬ್ಲಿನ್ ಮೂರನೇ ಸ್ಥಾನದಲ್ಲಿದೆ.
10 ಕಿಲೋಮೀಟರ್‌ಗೆ 36 ನಿಮಿಷಗಳ ಪಯಣ!
ಬೆಂಗಳೂರಿನ ವಾಹನ ಸವಾರರ ತಾಳ್ಮೆಯನ್ನು ಪರೀಕ್ಷಿಸುವಂತಹ ಅಂಕಿಅಂಶಗಳನ್ನು ಈ ವರದಿ ಹೊರಹಾಕಿದೆ. ನಗರದ ರಸ್ತೆಗಳಲ್ಲಿ ಕೇವಲ 10 ಕಿಲೋಮೀಟರ್ ದೂರವನ್ನು ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತವೆ. 2024ನೇ ಸಾಲಿಗೆ ಹೋಲಿಸಿದರೆ, ಈ ಪ್ರಯಾಣದ ಸಮಯದಲ್ಲಿ 2 ನಿಮಿಷ 4 ಸೆಕೆಂಡುಗಳಷ್ಟು ಹೆಚ್ಚಳವಾಗಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ರಸ್ತೆಗಳಲ್ಲಿ ವಾಹನಗಳ ವೇಗ ಕುಸಿಯುತ್ತಿದ್ದು, ಸಂಚಾರ ದಟ್ಟಣೆ ವಿಪರೀತವಾಗುತ್ತಿದೆ.

ವರ್ಷಕ್ಕೆ 7 ದಿನ ಟ್ರಾಫಿಕ್‌ನಲ್ಲೇ ವ್ಯರ್ಥ
ಈ ವರದಿಯಲ್ಲಿರುವ ಅತ್ಯಂತ ಆಘಾತಕಾರಿ ಅಂಶವೆಂದರೆ, ಬೆಂಗಳೂರಿನ ವಾಹನ ಸವಾರರು ವರ್ಷವೊಂದಕ್ಕೆ ಬರೋಬ್ಬರಿ 168 ಗಂಟೆಗಳನ್ನು ಕೇವಲ ರಶ್ ಅವರ್ (Rush Hour) ಟ್ರಾಫಿಕ್‌ನಲ್ಲಿಯೇ ಕಳೆಯುತ್ತಿದ್ದಾರೆ. ಇದನ್ನು ದಿನಗಳ ಲೆಕ್ಕದಲ್ಲಿ ನೋಡುವುದಾದರೆ, ಒಬ್ಬ ವ್ಯಕ್ತಿ ತನ್ನ ಜೀವನದ ಅಮೂಲ್ಯವಾದ 7 ದಿನ, 40 ನಿಮಿಷಗಳನ್ನು ರಸ್ತೆಯಲ್ಲೇ ವ್ಯರ್ಥ ಮಾಡುತ್ತಿದ್ದಾನೆ! ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 12 ಗಂಟೆ 46 ನಿಮಿಷಗಳನ್ನು ಜನರು ಟ್ರಾಫಿಕ್‌ನಲ್ಲಿ ಕಳೆದಿದ್ದಾರೆ.
ಬೆಳಗಿನ ಸಮಯದಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 14.6 ಕಿ.ಮೀ ಇದ್ದರೆ, ಸಂಜೆಯ ಸಮಯದಲ್ಲಿ ಇದು 13.2 ಕಿ.ಮೀ.ಗೆ ಕುಸಿಯುತ್ತದೆ. ಅಂದರೆ, ಸೈಕಲ್‌ನಲ್ಲಿ ಹೋಗುವ ವೇಗಕ್ಕಿಂತಲೂ ನಿಧಾನವಾಗಿ ವಾಹನಗಳು ಚಲಿಸುತ್ತಿವೆ. ಮೇ 17, 2025 ರಂದು ನಗರವು ಅತ್ಯಂತ ಕೆಟ್ಟ ಟ್ರಾಫಿಕ್ ದಿನವನ್ನು ಕಂಡಿದ್ದು, ಅಂದು ದಟ್ಟಣೆಯ ಮಟ್ಟ ಶೇ.101 ಕ್ಕೆ ತಲುಪಿತ್ತು ಎಂದು ವರದಿ ಉಲ್ಲೇಖಿಸಿದೆ.
ವಿಶ್ವದ ಪಟ್ಟಿಯಲ್ಲಿ ಭಾರತದೇ ಮೇಲುಗೈ:
ಜಾಗತಿಕ ಮಟ್ಟದ ಟಾಪ್ 35 ನಗರಗಳ ಪಟ್ಟಿಯಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದಿರುವುದು ದೇಶದ ನಗರ ಯೋಜನೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು (2ನೇ ಸ್ಥಾನ) ಮತ್ತು ಪುಣೆ (5ನೇ ಸ್ಥಾನ) ಟಾಪ್ 5 ರಲ್ಲಿದ್ದರೆ, ಮುಂಬೈ (18), ನವದೆಹಲಿ (23), ಕೋಲ್ಕತ್ತಾ (29), ಜೈಪುರ (30) ಮತ್ತು ಚೆನ್ನೈ (32) ಕೂಡ ಈ ಪಟ್ಟಿಯಲ್ಲಿವೆ.
ಸಣ್ಣ ಪ್ರಯಾಣಗಳೂ ಸಹ ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. 15 ನಿಮಿಷಗಳಲ್ಲಿ ಬೆಂಗಳೂರಿನ ವಾಹನಗಳು ಕ್ರಮಿಸುವ ಸರಾಸರಿ ದೂರ ಈಗ ಕೇವಲ 4.2 ಕಿ.ಮೀ.ಗೆ ಇಳಿದಿದೆ. ಇದು ಕಳೆದ ವರ್ಷಕ್ಕಿಂತ 0.2 ಕಿ.ಮೀ ಕಡಿಮೆಯಾಗಿದೆ. ಈ ದಟ್ಟಣೆಯು ಜನರ ದೈನಂದಿನ ಜೀವನ, ಕೆಲಸದ ಉತ್ಪಾದಕತೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ರಸ್ತೆಗಳ ಅಗಲೀಕರಣ, ಮೆಟ್ರೋ ಸಂಪರ್ಕ ವಿಸ್ತರಣೆ ಮತ್ತು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವುದು ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications