Bengaluru Rains: ಮುಂದಿನ 2 ದಿನ ಮಳೆ, ಒಂದು ವಾರ ಶಾಖದ ಅಲೆ: ಹವಾಮಾನ ವರದಿ
Bengaluru, ಮೇ 05: ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಮಳೆ ಮತ್ತೆ ಮುಂದುವರಿಯುವ ನಿರೀಕ್ಷೆ ಇದೆ. ಮಳೆ ಕಡಿಮೆ ಆಗುತ್ತಿದ್ದಂತೆ ನಗರಾದ್ಯಂತ ಉಷ್ಣ ಅಲೆ ಹೆಚ್ಚಾಗುತ್ತಿದೆ. ಸದ್ಯ ನಗರಾದ್ಯಂತ ಗರಿಷ್ಠ 33-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಈ ನಡುವೆ ಮುಂದಿನ 48 ಗಂಟೆಗಳ ಕಾಲ ಅಲ್ಲಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಆಗಬಹುದು. ಇಂದು ಸೋಮವಾರ ಸಂಜೆ ಸಹ ಮಬ್ಬು ಕವಿಯಲಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಗರಿಷ್ಠ ತಾಪಮಾನ 33.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ಬೆಂಗಳೂರು ಇಂಟರ್‌ನ್ಯಷನಲ್ ಏರ್‌ಪೋರ್ಟ್ ಲಿಮಿಟೆಡ್ (KIAL) 33.6 ಗರಿಷ್ಠ ಮತ್ತು 21.4 ಕನಿಷ್ಠ ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 33 ಮತ್ತು 20.01 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ಶಾಖದ ಅಲೆ ಏರಿಕೆ ಮುನ್ಸೂಚನೆ ಸಿಕ್ಕಂತಾಗಿದೆ.

ಬೆಳಗ್ಗೆಯಿಂದ ಒಣಹವೆಯ ವಾತಾವರಣವೇ ಕಂಡು ಬರಲಿದೆ. ನಂತರ ಸಂಜೆಯಾಗುತ್ತಿದ್ದಂತೆ ನಗರದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ. ಈ ವೇಳೆ ತಾಪಮಾನ ಇಳಿಕೆ ಆಗಲಿದೆ. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮಬ್ಬು ಕವಿಯಲಿದೆ. ಅಲ್ಲಲ್ಲಿ ಚುದರಿದಂತೆ ಮಳೆ ಬರಲಿದೆ. ಹಲವೆಡೆ ವ್ಯಾಪಕ ಮಳೆಯ ನಿರೀಕ್ಷೆ ಇದೆ.
ಮೇ 06ರವರೆಗ ನಗರದಲ್ಲಿ ಮಳೆ ಬರಲಿದ್ದು, ನಂತರ ಮೇ 10ರವರೆಗೆ ನಗರಾದ್ಯಂತ ಒಣಹವೆ ಕಂಡು ಬರಲಿದೆ. ಮುಂದಿನ ಒಂದು ವಾರ ಕಾಲ ನಗರದೆಲ್ಲಡೆ ತಾಪಮಾನ ಏರಿಕೆ ಆಗಲಿದೆ. ಸಮುದ್ರಮಟ್ಟದಲ್ಲಿನ ಹವಾಮಾನ ವೈಪರೀತ್ಯ ಪ್ರಭಾವ ತಗ್ಗಿದೆ. ಹೀಗಾಗಿ ಸದ್ಯಕ್ಕೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಮಳೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ.
ಇಡೀ ಕರ್ನಾಟಕದ ತಾಪಮಾನ ನೋಡುವುದಾದರೆ ಕಲಬುರಗಿ, ಹಾವೇರಿ, ವಿಜಯಪುರ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಭಾಗಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ. ಉತ್ತರ ಒಳನಾಡಿನ ಭಾಗಗಳಲ್ಲಿ ಅಲ್ಲಲ್ಲಿ ಜೋರು ಮಳೆ ಆಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಬಿಸಿಲಿನ ಝಳ ಸೃಷ್ಟಿಯಾಗುತ್ತಿದೆ.












Click it and Unblock the Notifications