Bengaluru Rain: ಜೂನ್ ತಿಂಗಳಲ್ಲಿ ಶೇ.35ರಷ್ಟು ಮಳೆ ಕೊರತೆ, 3 ತಿಂಗಳ ಮಳೆ ಮಾಹಿತಿ
ಬೆಂಗಳೂರು, ಜುಲೈ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಮೇ ಮಧ್ಯ ಭಾಗ ಇಲ್ಲವೇ ಅಂತ್ಯಕ್ಕೆ ಕಂಡು ಬರುವ ಮಳೆ ಆರ್ಭಟ ಈ ಬಾರಿ ತುಸು ತಡವಾಯಿತು. ಈ ವಾತಾವರಣವೇ ಮುಮದುವರಿದ ಪರಿಣಾಮ ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಮಳೆ ಕೊರತೆ ಉಂಟಾದೆ.
ನಗರದಲ್ಲಿ ಮೇ ತಿಂಗಳಲ್ಲಿ ಶೇಕಡಾ 138 ರಷ್ಟು ಅಧಿಕ ಮಳೆ ದಾಖಲಾಗಿದ್ದರೆ, ಜೂನ್‌ನಲ್ಲಿ ಶೇ. 35 ರಷ್ಟು ಮಳೆ ಕೊರತೆ ಎದುರಾಗಿದೆ. ಇನ್ನೂ ಬೇಸಿಗೆಯ ತಿಂಗಳಾದ ಏಪ್ರಿಲ್‌ನಲ್ಲಿಯೂ ಶೇಕಡಾ 54.3ರಷ್ಟು ಪೂರ್ವ ಮುಂಗಾರು ಮಳೆ ಕೊರತೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ ಎಂದು TOI ವರದಿ ಮಾಡಿದೆ.

2022ಕ್ಕೆ ಹೋಲಿಕೆ ಮಾಡಿದೆ ಪ್ರಸಕ್ತ ವರ್ಷ ಮಳೆಯು ವ್ಯತಿರಿಕ್ತವಾಗಿದೆ. ಹಿಂದಿನ 2023ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 33ರಷ್ಟು ಕಡಿಮೆ ದಾಖಲಾಗಿದೆ. ಹೀಗೆ ಮಳೆ ಏರಿಳಿದ ಕಳೆದ ಕೆಲವು ರ್ಷಗಳಿಂದ ಕಂಡು ಬರುತ್ತಿದೆ ಎಂದು ತಿಳಿದು ಬಂದಿದೆ.
ಚಂಡಮಾರತದಿಂದ ತಾಪಮಾನ ಏರಿಕೆ
ಹವಾಮಾದಲ್ಲಿನ ಬದಲಾವಣೆಗಳಿಂದ ಕೆಲವು ತಿಂಗಳು ವಾಡಿಕೆಗಿಂತ ಮಳೆ ಹೆಚ್ಚಾದರೆ, ಇನ್ನೂ ಕೆಲವು ತಿಂಗಳು ವಾಡಿಕೆಗಿಂತ ಕಡಿಮೆ ಮಳೆ ಬೀಳುತ್ತಿದೆ. ಮೇ ತಿಂಗಳಲ್ಲಿ ಬಿಪರ್‌ಜಾಯ್ ಚಂಡಮಾರುತ ಹಾವಳಿಯಿಂದಾಗಿ ಕೆಲವೆಡೆ ಮಳೆ ಬಿದ್ದರೆ, ಇನ್ನೂ ಕೆಲವೆಡೆ ತಾಪಮಾನದ ಹೆಚ್ಚಳಕ್ಕೆ ಕಾರಣವಾಯಿತು.
ಪ್ರಸಕ್ತ ವರ್ಷ ಜುಲೈ ಎರಡನೇ ವಾರದವರೆಗೆ ದೇಶವು ಕಡಿಮೆ ಚಂಡಮಾರುತಗಳ ಅಬ್ಬರದ ಅವಧಿಯನ್ನು ಹೊಂದಿದ್ದೇವೆ. ಚಂಡಮಾರುತದಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿ ಬಿರುಗಾಳಿಯನ್ನು ಸೃಷ್ಟಿಸಿದರೆ, ಅದರ ಪ್ರಭಾವ ಮಳೆ ಸುರಿಸುವ ಮೋಡಗಳ ಮೇಲೂ ಆಗುತ್ತದೆ. ಉದಾಹರಣೆಗೆ ಅರಬ್ಬಿ ಸಮುದ್ರದಲ್ಲಿ ಎದ್ದಿದ್ದ ಚಂಡಮಾರುತ ಬಿಪರ್ ಜಾಯ್ ತೀವ್ರತೆಯಿಂದಾಗಿ ಮುಂಗಾರು ಮಾರುತಗಳು ತೀವ್ರತೆ ಕಳೆದುಕೊಂಡಿದ್ದವು ಎಂದು ಐಎಂಡಿ ವಿಜ್ಞಾನಿ ಡಾ.ಪ್ರಸಾದ್ ಹೇಳಿದ್ದಾರೆ.

ಹಿಂದಿನ ಮೂರು ತಿಂಗಳ ಮಳೆ ಮಾಹಿತಿ
ಐಎಂಡಿ ಮಾಹಿತಿ ಪ್ರಕಾರ, ರಾಜ್ಯವು ಈ ಹಿಂದಿನ ಮೂರು ತಿಂಗಳಾದ ಜೂನ್, ಮೇ ಮತ್ತು ಏಪ್ರಿಲ್ ತಿಂಗಳಲ್ಲಿ ಸಾಮಾನ್ಯ ಮಳೆ ಕ್ರಮವಾಗಿ 110 ಮಿಲಿ ಮೀಟರ್, 128.7ಮಿ ಮೀ. ಮತ್ತು 61.7 ಮಿ.ಮೀ. ಮಳೆ ದಾಖಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಕ್ರಮವಾಗಿ ಏಪ್ರೀಲ್ ನಲ್ಲಿ 28.2 ಮಿಮೀ., ಮೇ ತಿಂಗಳಲ್ಲಿ 305.4ಮಿಮೀ. ಮತ್ತು ಜೂನ್‌ನಲ್ಲಿ 72.3 ಮಿಮೀ. ಅನ್ನು ದಾಖಲಿಸಿದೆ.
ಮೂರು ತಿಂಗಳ ಮಳೆ ತೆಗೆದುಕೊಂಡರೆ ಉತ್ತಮ ಮಳೆ ಅನ್ನಬಹುದು. ಆದರೆ ತಿಂಗಳವಾರು ನೋಡಿದರೆ, ಏಪ್ರಿಲ್ ಮತ್ತು ಜೂನ್‌ನಲ್ಲಿ ಶೇಕಡಾ 54.3 ಮತ್ತು 34.5 ರಷ್ಟು ಮಳೆ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ. ಈ ಮಾಹಿತಿಯು ಬೆಂಗಳೂರಿನ ಹವಾಮಾನಕ್ಕೆ ಸಂಬಂಧಿಸಿದ 30 ವರ್ಷದ ಹಳೆಯ (1991-2020) ಮಾಹಿತಿ ಆಧರಿಸಿ ನೀಡಲಾಗಿದೆ.
ಸಾಮಾನ್ಯವಾಗಿ, ಮುಂಗಾರು ಪೂರ್ವ ಮಳೆಯು ಪ್ರಭಾವ ಹೆಚ್ಚಿರುತ್ತದೆ, ಹೀಗಾಗಿ ಮೇ ನಲ್ಲಿ ಜೂನ್ ಗಿಂತ ಅಧಿಕ ಮಳೆ ದಾಖಲಾಗಿದೆ. ರಾಜಧಾನಿಯ ಜನರು 1957 ರ ನಂತರದ ಇಷ್ಟು ವರ್ಷಗಳಲ್ಲಿ ಮೇ ತಿಂಗಳಲ್ಲಿ ಅತ್ಯಧಿಕ ಮಳೆ, ತಂಪು ವಾತಾವರಣ ಅನುಭವಿಸಿದ್ದಾರೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications