Bengaluru Rain Alert: ಸಿಹಿ ಸುದ್ದಿ: ಬಿಸಿಲಿಗೆ ಬ್ರೇಕ್- 'ಪೂರ್ವ ಮುಂಗಾರು' ಮಳೆ ಚುರುಕು, ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 08: ಐಟಿ ಕೇಂದ್ರವಾಗಿರುವ ಉದ್ಯಾನ ನಗರಿ ಬೆಂಗಳೂರಲ್ಲಿ ಭಾರೀ ಬಿಸಿಲು ಆವರಿಸುತ್ತಿದೆ. ಗರಿಷ್ಠ ತಾಪಮಾನ ಏಗುತಿಯಲ್ಲಿದ್ದು, ಜನರು ಹೈರಾಣಾಗಿದ್ದಾರೆ. ಬಿಸಿಲಿಗೆ ತತ್ತರಿಸಿರುವ ಜನರಿಗೆ ನೆಮ್ಮದಿಯ, ಸಿಹಿ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಶೀಘ್ರವೇ ಈ ಉರಿಬಿಸಿಲು ಅಂತ್ಯ ಮತ್ತು ಮಳೆ ಚುರುಕು ಕುರಿತು ಮಹತ್ವದ ಮುನ್ಸೂಚನೆ ಕೊಟ್ಟಿದೆ.

ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಡಾ.ಪ್ರಸಾದ್ ಅವರ ಪ್ರಕಾರ, ಪೂರ್ವ ಮುಂಗಾರು ಮಳೆ ಬೆಂಗಳೂರಿನಲ್ಲಿ ಚುರುಕಾಗುವ ಲಕ್ಷಣಗಳು ಕಂಡು ಬಂದಿವೆ. ಬೆಂಗಳೂರು ಈ ವರ್ಷ ವಾಡಿಕೆಗಿಂತ ಅತ್ಯಧಿಕ ಬಿಸಿಲಿನ ತಾಪಮಾನಕ್ಕೆ ಸಾಕ್ಷಿಯಾದ ಬೆಂಗಳೂರಿನಲ್ಲಿ ಮಳೆ ಸುರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Bengaluru Rain Alert April Mid Bengaluru Will Face Pre Monsoon Rain Know IMD Full Forecast

ಸುರಿಯಲಿದೆ ಪೂರ್ವ ಮುಂಗಾರು ಮಳೆ

ಏಪ್ರಿಲ್ ಮಧ್ಯೆ ಭಾಗದಲ್ಲಿ ಬೆಂಗಳೂರು ನಗರವು ಮಳೆ ಕಾಣಲಿದೆ. ಸದ್ಯ ಪೂರ್ವ ಮುಂಗಾರು ಚಾಲ್ತಿಯಲ್ಲಿದೆ. ಜೂನ್ ನಿಂದ ಉತ್ತಮ ಮುಂಗಾರು ಮಳೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈಗ ಜನರು ಉರಿ ಬಿಸಿಲಿಗೆ ತತ್ತರಿಸಿದ್ದಾರೆ. ಇನ್ನೊಂದು ವಾರದಲ್ಲಿ ಸುರಿಯುವ ಎಲ್ಲ ಲಕ್ಷಣಗಳು ಇವೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯು ಬೆಂಗಳೂರಿನಲ್ಲಿ ಏಪ್ರಿಲ್ ಎರಡನೇ ವಾರಾಂತ್ಯ ಅಂದರೆ ಏಪ್ರಿಲ್ ಮಧ್ಯದ ಅವಧಿಯಲ್ಲಿ ತಾಪಮಾನ ಹಂತ ಹಂತವಾಗಿ ಕಡಿಮೆ ಆಗುತ್ತದೆ. ಪೂರ್ವ ಮುಂಗಾರು ಚುರುಕುಗೊಂಡು ಉತ್ತಮ ಮಳೆ ಆಗಲಿದೆ ಎಂದಿದೆ.

ಬೆಂಗಳೂರಿಗೆ ತಾತ್ಕಾಲಿಕ ರಿಲೀಪ್

ಬೆಂಗಳೂರಿನಲ್ಲಿ ನಗರದಲ್ಲಿ ಕಳದ ಮಂಗಳವಾರದಿಂದ ತಾಪಮಾನದಲ್ಲಿ ನಿತ್ಯ ಏರಿಕೆ ಆಗುತ್ತಲೇ ಇದೆ. ಕಳೆದ 12 ವರ್ಷಗಳಲ್ಲಿ ಅತ್ಯಧಿಕ ತಾಪಮಾನ ಈ ಏಪ್ರಿಲ್ ಆರಂಭದಲ್ಲೇ ಕೆಲವು ಭಾರಿ ದಾಖಲಾಗಿದೆ. ಇದುವರೆಗೆ ಬೆಂಗಳೂರಿನಲ್ಲಿ37 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಾರ್ವತ್ರಿಕ ದಾಖಲೆ ಪ್ರಮಾಣವಾಗಿತ್ತು. ಇಷ್ಟು ಪ್ರಮಾಣದ ಬಿಸಿಲು ಕಳೆ ಒಂದು ವಾರದಿಂದ ದಾಖಲಾಗಿ ಜನರಿಗೆ ಇನ್ನಿಲ್ಲದಂತೆ ತೊಂದರೆ ನೀಡುತ್ತಿದೆ.

ಸದ್ಯ ಮಳೆ ಮುನ್ಸೂಚನೆ ನೀಡಿರುವ ಹವಾಮಾನ ತಜ್ಞರು, ಈ ಮಳೆ ಬೇಸಿಗೆಯ ಶಾಖಕ್ಕೆ ತಾತ್ಕಾಲಿಕ ರಿಲೀಫ್ ನೀಡಲಿದೆ. ಮಳೆ ಮುನ್ನ ಬಿಸಿಲು ತಕ್ಕಮಟ್ಟಿಗೆ ಇಳಿಕೆ ಆಗಲಿದೆ. ಮಳೆ ಲಕ್ಷಣಗಳು ಕಡಿಮೆ ಆದ ಬಳಿಕ ಮತ್ತೆ ಬಿಸಿಲು ಹೆಚ್ಚಾಗಬಹುದು ಎಂದು ಊಹಿಸಿದ್ದಾರೆ.

Bengaluru Rain Alert April Mid Bengaluru Will Face Pre Monsoon Rain Know IMD Full Forecast

ಉತ್ತಮ ಮಳೆಯ ವಾತಾವರಣ

ನಗರದಲ್ಲಿ ಈ ಹಿಂದಿನ ವರ್ಷ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಸೂಚ್ಯಂಕವನ್ನು ಹೊಂದಿದ್ದ 'ಎಲ್ ನಿನೊ' ಪರಿಣಾಮವು ಪ್ರಸ್ತುತ 1.1 ಹೊಂದಿದೆ. ಅದರೆ ಎಲ್‌ನಿನೋ ಪ್ರಭಾವ ತುಸು ಇಳಿಕೆ ಆಗಿದೆ. ವಿಶೇಷವೆಂದರೆ 'ಎಲ್ ನಿನೊ' ವರ್ಷಗಳಲ್ಲಿ, ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಕಡಿಮೆ ಮಳೆ, ನಿರ್ದಿಷ್ಟವಾಗಿ ಪೆನಿನ್ಸುಲರ್ ಭಾರತದ ಮೇಲೆ, ಸಾಮಾನ್ಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದರು.

ಪ್ರತಿ ವರ್ಷ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಏಪ್ರಿಲ್ ಮೊದಲ ವಾರ ಅಲ್ಪ ಸ್ವಲ್ಪ ಪೂರ್ವ ಮುಂಗಾರು ಮಳೆ ಬರುತ್ತಿತ್ತು. ಆದರೆ ಈ ವರ್ಷ ಮಳೆಯ ಆಗಮನ ವಿಳಂಬವಾಗಿದೆ. ಅಲ್ಲದೇ ಮಾರ್ಚ್ ತಿಂಗಳಲ್ಲಿ ಒಂದೇ ಒಂದು ಹನಿ ಮಳೆ ಸಹ ಬೆಂಗಳೂರಿನಲ್ಲಿ ಆಗಿಲ್ಲ. ಈ ಮಧ್ಯೆ ಹವಾಮಾನ ಇಲಾಖೆ ನೀಡಿರುವ ಏಪ್ರಿಲ್ ಮಧ್ಯೆ ಮಳೆ ಮುನ್ಸೂಚನೆ ಸ್ಥಳೀಯ ನಿವಾಸಿಗಳಿಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿದೆ.

ಏಪ್ರಿಲ್‌ನಲ್ಲಿ 61.7 ಮಿ.ಮೀ ವಾಡಿಕೆ ಮಳೆ ನಿರೀಕ್ಷೆ

ಪೂರ್ವ ಮುಂಗಾರು ಚುರುಕುಗೊಂಡಾಗ ನಗರದಲ್ಲಿ ತಕ್ಕಮಟ್ಟಿಗೆ ತಾಪಮಾನ ಇಳಿಕೆ ಆಗುವ ಸಂಭವವಿದೆ. ಇದನ್ನು ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಎನ್ನುತ್ತಿದ್ದಾರೆ. ಐಎಂಡಿ ಪ್ರಕಾರ ಏಪ್ರಿಲ್‌ನಲ್ಲಿ ಒಟ್ಟು 61.7 ಮಿಮೀ ವಾಡಿಕೆಯಷ್ಟು ಮಳೆ ದಾಖಲಾಗಬೇಕಿದೆ.

ಇನ್ನೂ ಇದೇ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ನಷ್ಟಿರಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ತಿಂಗಳ ಆರಂಭದಿಂದಲೂ ಬೆಂಗಳೂರು ನಿರಂತರವಾಗಿ ವಾಡಿಕೆಗಿಂತ ಅತೀ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಯೂ ತಾಪಮಾನ ಏರುಗತಿಯಲ್ಲೇ ಮುಂದುವರಿದಿದೆ. ಕೆಲವೆಡೆ ಮಳೆ ಮುನ್ಸೂಚನೆಯೂ ಇದೆ.

ಮುಂದಿನ ಕೆಲವು ದಿನಗಳ ಬೆಂಗಳೂರಿನಲ್ಲಿ ಒಣಹವೆ ಮುಂದುವರಿಯಲಿದೆ. ಮಳೆ ಬರುವವರಿಗೆ ಜನರು ಶಾಖಲೆ ಅಲೆಯ ವಾತಾವರಣನ್ನು ಸಹಿಸಿಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+