ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಯಾವೆಲ್ಲಾ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ?
Bengaluru-Pune Expressway: ನಿರ್ಮಾಣ ಹಂತದಲ್ಲಿರುವ ಬಹುನಿರೀಕ್ಷಿತ ಹೆದ್ದಾರಿಗಳಲ್ಲಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಸಹ ಒಂದಾಗಿದೆ. ಈ ಬಗ್ಗೆ ಆಗಾಗ ಟಪ್ಡೇಟ್ ಮಾಹಿತಿಗಳು ಲಭ್ಯ ಆಗುತ್ತಲಿರುತ್ತದೆ. ಹಾಗೆಯೇ ಇದೀಗ ಮತ್ತೊಂದು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ. 700 ಕಿಲೋ ಮೀಟರ್ ಉದ್ದದ ಈ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನ 15 ರಿಂದ 7 ಗಂಟೆವರೆಗೆ ಕಡಿತ ಮಾಡಲಿದೆ.

ಈ ಎಕ್ಸ್‌ಪ್ರೆಸ್ ವೇ ಅನ್ನು 50,000 ಕೋಟಿ ರೂಪಾಯಿ ವೆಚ್ಚದದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 6 ಲೇನ್‌ಗಳ ಹೆದ್ದಾರಿ ಇದಾಗಲಿದ್ದು, ಗರಿಷ್ಠ ವೇಗದ ಮಿತಿ ಗಂಟೆಗೆ 120 ಕೀಲೋ ಮೀಟರ್ ಆಗಿದೆ. ಈ ಮೂಲಕ ಎರಡು ನಗರಗಳ ನಡುವೆ ಅತೀ ಕಡಿಮೆ ಸಮಯದ ಪ್ರಯಾಣಕ್ಕೆ ಅನುಕೂಲ ಆಗಲಿದೆ.
ಪುಣೆಯಲ್ಲಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕ ಸಾಧಿಸಲಿದ್ದು, ಎರಡು ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಇದು ಮಹಾರಾಷ್ಟ್ರದ ಸಾಂಗ್ಲಿ, ಸತಾರ ಮತ್ತು ಪುಣೆ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಸೇರಿ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಕಾಮಗಾರಿ ಯಾವಾಗ ಪೂರ್ಣ?: ಆರು ಪಥಗಳಲ್ಲಿ ನಿರ್ಮಾಣ ಆಗಲಿರುವ ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಮುತ್ತಗಡಹಳ್ಳಿ ಪ್ರದೇಶದಲ್ಲಿ ಪ್ರಸ್ತಾವಿತ ಉಪಗ್ರಹ ರಿಂಗ್ ರಸ್ತೆಯಲ್ಲಿ ಕೊನೆಗೊಳ್ಳುತ್ತದೆ. ಈ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ ಆಗಲಿದ್ದು, 2028ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
2022ರಲ್ಲಿ ಭಾರತ್‌ಮಾಲಾ ಪರಿಯೋಜನೆಯ ಎರಡನೇ ಹಂತದ ಅಡಿಯಲ್ಲಿ ಯೋಜಿಸಲಾಗಿದ್ದ ಈ ಯೋಜನೆಯು ಫೆಬ್ರವರಿ 2025ರಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳಿಂದ ಅದರ ವಿವರವಾದ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆಯನ್ನು ಪಡೆಯಿತು. ಇದೀಗ ಕೇಂದ್ರ ಸರ್ಕಾರದ ಅನುಮತಿಗಾಗಿ ನಿರೀಕ್ಷಿಸಲಾಗಿದ್ದು, 2028ರ ವೇಳೆಗೆ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಯಾವೆಲ್ಲಾ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ?: ಈ ಎಕ್ಸ್‌ಪ್ರೆಸ್‌ವೇ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಸ್ವಯಂಚಾಲಿತ ಟೋಲ್ ವ್ಯವಸ್ಥೆಗಳು, ಡ್ರೋನ್ ಆಧಾರಿತ ಯೋಜನಾ ಮೇಲ್ವಿಚಾರಣೆ, ಹೆಚ್ಚಿನ ವೇಗಕ್ಕೆ ತಡೆಹಾಕಲು ಕಣ್ಗಾವಲು ಮತ್ತು ತುರ್ತು ಸೇವೆಗಳನ್ನು ಒಳಗೊಂಡಿರಲಿದೆ.
ಪ್ರಯೋಜನೆಗಳೇನು?: ಬಹುನಿಕ್ಷಿತ ಈ ಎಕ್ಸ್‌ಪ್ರೆಸ್‌ವೇ ಪೂರ್ಣ ಆದರೆ, ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿ ಆಗಲಿವೆ. ಆರ್ಥಿಕ ಕ್ಷೇತ್ರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿದ್ದು, ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತಿದೆ.
ಇದೇ ರೀತಿ ದೇಶದಲ್ಲಿ ಹಲವು ಹೆದ್ದಾರಿಗಳು ನಿರ್ಮಾಣದ ಹಂತದಲ್ಲಿದ್ದು, ಇನ್ನೂ ಕೆಲವು ಈಗಾಗಲೇ ಉದ್ಘಾನೆ ಆಗಿ ವಾಹನಗಳು ಸಂಚಾರ ಕೂಡ ಮಾಡುತ್ತಿದೆ. ಕರ್ನಾಟಕದ ವಿಚಾರಕ್ಕೆ ಬಂದರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹನಗಳು ಸಂಚಾರ ಮಾಡುತ್ತಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಹ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡಿದ್ದು, ವಾಹನಗಳು ಸಂಚಾರ ಕೂಡ ಮಾಡುತ್ತಿವೆ. ಆದರೆ, ಟೋಲ್ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ. ತಮಿಳುನಾಡು ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣವಾದರೆ ಉದ್ಘಾನೆಗೆ ಸಜ್ಜಾಗಲಿದೆ.












Click it and Unblock the Notifications