Get Updates
Get notified of breaking news, exclusive insights, and must-see stories!

Bengaluru Property: ಇ - ಖಾತಾ, ಬಿ ಖಾತಾ ಸೇರಿ 27 ಸೇವೆಗಳು ಒಂದೇ ಸೂರಿನಡಿ: ಜಿಬಿಎ ಪಾಸ್‌ಪೋರ್ಟ್ ಮಾದರಿ ಸೇವಾ ಕೇಂದ್ರ

ಬೆಂಗಳೂರಿನ ಜನರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಪರವಾನಗಿ ಹಾಗೂ ಆಸ್ತಿದಾರರಿಗೆ ಇ ಖಾತಾ ಹಾಗೂ ಬಿ ಖಾತಾಗಳನ್ನು ನೀಡುವುದು ಸೇರಿದಂತೆ ಎಲ್ಲಾ ಸೇವೆಗಳನ್ನು ಒಂದೇ ಸೂರಿನ ಅಡಿಯಲ್ಲಿ ನೀಡುವುದಕ್ಕೆ ಮುಂದಾಗಿದೆ.

ದಶಕಗಳಿಂದ ಬೆಂಗಳೂರಿಗರು ಜನನ ಪ್ರಮಾಣಪತ್ರ, ಖಾತಾ, ವ್ಯಾಪಾರ ಪರವಾನಗಿ ಅಥವಾ ಕಟ್ಟಡ ಯೋಜನೆ ಅನುಮೋದನೆ ಪಡೆಯಲು ವಾರಗಟ್ಟಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ(ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ವಿವಿಧ ಯೋಜನೆಗಳನ್ನು ಮಾಡಿಸಿಕೊಳ್ಳಲು ಅಥವಾ ಅರ್ಹತಾ ಪತ್ರವನ್ನು ಪಡೆದುಕೊಳ್ಳುವುದಕ್ಕೆ ದಲ್ಲಾಳಿಗಳಿಗೆ ಹಣ ಪಾವತಿಸಿ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕಾಲದಲ್ಲಿ ಕೆಲಸ ಮಾಡಿಕೊಡುತ್ತಿಲ್ಲ ಎನ್ನುವ ದೂರು ಸಹ ಇದೆ. ಇದೀಗ ಈ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವುದಕ್ಕ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.

Bengaluru Property

ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿವಿಧ ಸೇವೆಗಳಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡುವ ಮೂಲಕ ಹಾಗೂ ಯಾವುದೇ ಸಮಸ್ಯೆಗಳು ಇಲ್ಲದೆ ಒಂದೇ ಸೂರಿನಲ್ಲಿ ಸೇವೆಗಳನ್ನು ನೀಡುವ ಸೇವೆಯನ್ನು ಪರಿಚಯಿಸುತ್ತಿದೆ. ಸಾರ್ವಜನಿಕರು ಇನ್ಮುಂದೆ ದೀರ್ಘ ಸರತಿ ಸಾಲುಗಳಲ್ಲಿ ಕಾಯದೆ 27 ಸೇವೆಗಳನ್ನು ಪಡೆಯಬಹುದು - ಎಲ್ಲವೂ ಒಂದೇ ಸೂರಿನಡಿ. ಇನ್ನು ಈ ಹೊಸ ಮಾದರಿಯು ಪಾಸ್‌ಪೋರ್ಟ್ ಸೇವಾ ಕೇಂದ್ರದ ಮಾದರಿಯಲ್ಲಿಯೇ ಇದೆ. ಬೆಂಗಳೂರಿನಾದ್ಯಂತ ಈ ಮಾದರಿಯ 10 ಸೌಲಭ್ಯಗಳನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ ಎರಡು ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ DH ವರದಿ ಮಾಡಿದೆ.

Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್‌
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್‌

ಬೆಂಗಳೂರು ಒನ್ ಕೇಂದ್ರಗಳಿಗಿಂತ ಹೇಗೆ ಭಿನ್ನ

ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈಗಾಗಲೇ ಬೆಂಗಳೂರಿನಲ್ಲಿ ಇರುವ ಬೆಂಗಳೂರು ಒನ್ ಮಾದರಿಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದೆಯಾದರೂ ಈ ಹೊಸ ಕೇಂದ್ರಗಳು ಬೆಂಗಳೂರು ಒನ್‌ಗಿಂತ ಭಿನ್ನವಾಗಿರಲಿವೆ ಎಂದು ಹೇಳಲಾಗಿದೆ. ಹೊಸ ಸೌಲಭ್ಯವು ಅಸ್ತಿತ್ವದಲ್ಲಿರುವ ಬೆಂಗಳೂರು ಒನ್ ಕೇಂದ್ರಗಳಿಗಿಂತ ಭಿನ್ನವಾಗಿರಲಿವೆ. ಅಲ್ಲದೆ ಎರಡನೆಯದಾಗಿ ಒಂದೇ ಸೂರಿನಡಿ ಈ ಹಲವು ಸೇವೆಗಳನ್ನು ಕಲ್ಪಿಸುವ ಸಾಧ್ಯತೆ ಇದೆ. ಜಿಬಿಎಯ ಅಧಿಕಾರಿಗಳನ್ನು ಈ ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಇದರಿಂದ ಫೈಲ್‌ಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಥವಾ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ ಕಚೇರಿಗಳಿಗೆ ಕಳುಹಿಸದೆ ಅಲ್ಲಿಯೇ ವಿಲೇವಾರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಈ ಸೇವಾ ಕೇಂದ್ರಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಟೆಂಡರ್ ಆಹ್ವಾನಿಸಿದೆ. ಈ ಸೇವೆಯ ಅಡಿಯಲ್ಲಿ ಇ-ಖಾತಾವನ್ನು ಬಯಸುವವರು ಅದನ್ನು 1,000 ರೂಪಾಯಿ ಹೆಚ್ಚುವರಿ ಶುಲ್ಕಕ್ಕೆ ಪಡೆಯಬಹುದು. ಅದೇ ರೀತಿ, ಬಿ-ಖಾತಾವನ್ನು ಎ-ಖಾತಾ ಅಥವಾ ಕಟ್ಟಡದೊಂದಿಗೆ ಫ್ಲಾಟ್ ಅಥವಾ ಪ್ಲಾಟ್‌ಗಾಗಿ ಹೊಸ ಖಾತಾ ಆಗಿ ಪರಿವರ್ತಿಸಲು 2,500 ರೂಪಾಯಿ ವೆಚ್ಚವಾಗಬಹುದು. ಸಂಪೂರ್ಣ ಬಹುಮಹಡಿ ವಸತಿ ಯೋಜನೆಗೆ ಖಾತಾಗಳನ್ನು ಹುಡುಕುವ ಡೆವಲಪರ್‌ನಂತಹ ಬೃಹತ್ ವಹಿವಾಟುಗಳಿಗೆ, ಶುಲ್ಕವು ಪ್ರತಿ ಫ್ಲಾಟ್‌ಗೆ 1,500 ರೂಪಾಯಿ ಆಗುವ ಸಾಧ್ಯತೆ ಇದೆ.

Bengaluru Real Estate: 2026ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಎಸ್ಟೇಟ್‌ಗೆ ಶಾಕ್: ಬೆಂಗಳೂರಿಗೆ ಮಾತ್ರ ಬಂಪರ್
Bengaluru Real Estate: 2026ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಎಸ್ಟೇಟ್‌ಗೆ ಶಾಕ್: ಬೆಂಗಳೂರಿಗೆ ಮಾತ್ರ ಬಂಪರ್

ಅಧಿಕೃತವಾಗಿ, ಜಿಬಿಎ ಸಂಸ್ಥೆಯು ಇ-ಖಾತಾಗೆ 125 ರೂಪಾಯಿಒ ಮಾತ್ರ ವಿಧಿಸುತ್ತದೆ, ಆದರೆ ಎಲ್ಲರಿಗೂ ಈ ಸೇವೆ ಸಿಗುತ್ತಿಲ್ಲ. ಕೆಲವರು ಅನಿವಾರ್ಯವಾಗಿ 3,000 ರೂಪಾಯಿಯಿಂದ 60,000 ರೂಪಾಯಿ ವರೆಗೆ ಪಾವತಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳನ್ನು ಸುಗಮಗೊಳಿಸಲು ಪರಿಚಯಿಸಲಾಗುತ್ತಿರುವ ಹಲವಾರು ಸುಧಾರಣೆಗಳಲ್ಲಿ 'ಸೇವಾ ಕೇಂದ್ರ'ವೂ ಒಂದು ಎಂದು ಜಿಬಿಎಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+