Get Updates
Get notified of breaking news, exclusive insights, and must-see stories!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ವೀಕೆಂಡ್‌ನಲ್ಲಿ ಕರೆಂಟ್ ಇರಲ್ಲ, 2 ದಿನ ಪವರ್ ಕಟ್

ಬೆಂಗಳೂರು: ವಾರಾಂತ್ಯದಲ್ಲಿ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವ ಅಥವಾ ಬಾಕಿ ಉಳಿದ ಕೆಲಸಗಳನ್ನು ಮುಗಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಾದರೆ ಒಮ್ಮೆ ಈ ಸುದ್ದಿಯನ್ನು ಗಮನವಿಟ್ಟು ಓದಿ. ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಈ ಶನಿವಾರ ಮತ್ತು ಭಾನುವಾರ ವಿದ್ಯುತ್ ಕಡಿತ ಉಂಟಾಗಲಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಉತ್ತರ ಭಾಗದ ಪ್ರಮುಖ ಬಡಾವಣೆಗಳಾದ ಜಾಲಹಳ್ಳಿ, ಯಲಹಂಕ ಹಾಗೂ ಹೆಬ್ಬಾಳದ ವ್ಯಾಪ್ತಿಯಲ್ಲಿ ಫೆಬ್ರವರಿ 7 ಮತ್ತು 8 ರಂದು (ಶನಿವಾರ ಮತ್ತು ಭಾನುವಾರ) ಬೆಳಿಗ್ಗೆ 10 ಗಂಟೆಯಿಂದ ಸಂಜೆ 06ಗಂಟೆಯವರೆಗೆ ಬೆಂಗಳೂರು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Bengaluru Power Cut

ಜಾಲಹಳ್ಳಿ ಮತ್ತು ಸೋಲದೇವನಹಳ್ಳಿ ಭಾಗದಲ್ಲಿ ಎಲ್ಲೆಲ್ಲಿ ವ್ಯತ್ಯಯ?

ಜಾಲಹಳ್ಳಿ ವಿಭಾಗದ 66/11 ಕೆ.ವಿ. ಸೋಲದೇವನಹಳ್ಳಿ ಮತ್ತು 66/11 ಕೆವಿಕೆಎಚ್‌ಬಿ ಉಪಕೇಂದ್ರಗಳಲ್ಲಿ ನಿರ್ವಹಣಾ ಕೆಲಸ ನಡೆಯಲಿದೆ. ಹೀಗಾಗಿ ಫೆಬ್ರವರಿ 7 ಮತ್ತು 8 ರಂದು ಈ ಕೆಳಗಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಸೋಲದೇವನಹಳ್ಳಿ, ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ ಮತ್ತು ಕೃಷ್ಣಾ ಕಾಲೇಜು ರಸ್ತೆ.

ಅಲ್ಲದೆ ಸಾಸುವೆಘಟ್ಟ, ಬಜಪ್ಪ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗರ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಐ, ಡ್ಯಾನಿಶ್ ಫಾರ್ಮ್, ಕೆಎಐಎಫ್, ಹಸುನಗೋಸ್, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಕೆ.ಟಿ.ಪುರ, ಐಐಎಚ್‌ಆರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ, ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಪಳ್ಳಿ, ಮಧುಗಿರಿಹಳ್ಳಿ, ಕುರುಬರಹಳ್ಳಿ, ವಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ ಹಾಗೂ ಅಚ್ಯುತ್ ನಗರ ವ್ಯಾಪ್ತಿಯಲ್ಲಿ ಪವರ್ ಕಟ್ ಇರಲಿದೆ.

ಯಲಹಂಕ ಸುತ್ತಮುತ್ತಲ ಪ್ರದೇಶಗಳು

ಯಲಹಂಕ ಮತ್ತು ಸುತ್ತಮುತ್ತಲಿನ ಕೆವಿಚ್ ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಘಟಕಗಳು, ಪುಟ್ಟೇನಹಳ್ಳಿ, ರಾಮಗೊಂಡನಹಳ್ಳಿ, ಶಾರ್ಕ್ ಅಪಾರ್ಟ್‌ಮೆಂಟ್, ಬಿಎಐಎಸ್ ಹಾಸ್ಟೆಲ್, ಯಲಹಂಕ ನ್ಯೂ ಟೌನ್ 5ನೇ ಹಂತ, ಅನಂತಪುರ, ಪಾವನಿ, ಸಿಆರ್‌ಪಿಎಫ್ (CRPF), ಸುರಧೇನುಪುರ, ಇಸ್ರೋ ಲೇಔಟ್, ಅವಲಹಳ್ಳಿ, ರಾಜಾನುಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಮಾರಸಂದ್ರ, ಸಿಲ್ವರ್ ಓಕ್ ಹಾಗೂ ನಲಕುಂಟೆ ಭಾಗಗಳಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಬ್ಬಾಳ, ಆರ್‌ಟಿ ನಗರ, ಸಂಜಯನಗರ ನಿವಾಸಿಗಳೇ ಗಮನಿಸಿ

ಹೆಬ್ಬಾಳ ವ್ಯಾಪ್ತಿಯಲ್ಲಿ ಫೆಬ್ರವರಿ 7ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ: ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೊನಿ, ಸಿಬಿಐ ಕ್ವಾಟ್ರ್ರಸ್, ಆರ್‌ಬಿಐ ಕಾಲೊನಿ, ಯು.ಎ.ಎಸ್ ಕ್ಯಾಂಪಸ್, ದಿಣ್ಣೂರು ಮುಖ್ಯ ರಸ್ತೆ, ಆರ್‌ಟಿ ನಗರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಚ್‌ಎಂಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೊನಿ, ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಅಶ್ವಥ್‌ನಗರ, ಡಾಲರ್ಸ್ ಕಾಲೊನಿ, ಎಂಎಲ್‌ಎ ಲೇಔಟ್, ರಹೇಜಾ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಕೃಷ್ಣಪ್ಪ ಬ್ಲಾಕ್.

ಶಾಂತಿನಗರ ಮುಖ್ಯ ರಸ್ತೆ, ವೇಣುಗೋಪಾಲ ಲೇಔಟ್, ಜಡ್ಸ್ ಕಾಲೊನಿ, 80 ಅಡಿ ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್, ಐವಿಆರ್‌ಐ, ಗಂಗಾನಗರ ಮಾರುಕಟ್ಟೆ, ಚೋಳನಾಯಕನಹಳ್ಳಿ, ಎಜಿಎಸ್ ಕಾಲೊನಿ, ಎಸ್‌ಬಿಐ ಕಾಲೊನಿ, ಆನಂದಗಿರಿ ಎಕ್ಸ್‌ಟೆನ್ಸನ್, ಸಂಜಯನಗರ, ಎಇಸಿಎಸ್ ಲೇಔಟ್, ಗೆದ್ದಲಹಳ್ಳಿ, ಭೂಪಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಕಲ್ಪನಾ ಚಾವ್ಲಾ ರಸ್ತೆ, ಚೋಳನಗರ, ಅಮರಜ್ಯೋತಿ ಲೇಔಟ್, ಗುಂಡಪ್ಪರೆಡ್ಡಿ ಲೇಔಟ್, ಸಿಐಎಲ್ ಲೇಔಟ್, ಸಾರ್ದ್ದೂನ್ ಕಾಲೊನಿ, ಮೈತ್ರಿ ಬಜಾರ್ ಹಾಗೂ ಗುಡ್ಡದಹಳ್ಳಿ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಸಾರ್ವಜನಿಕರಿಗೆ ಮನವಿ

ಎರಡು ದಿನಗಳ ಕಾಲ ಹಗಲು ಹೊತ್ತಿನಲ್ಲಿ ವಿದ್ಯುತ್ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ನೀರಿನ ಸಂಗ್ರಹ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೇರಿದಂತೆ ವಿದ್ಯುತ್ ಅವಲಂಬಿತ ಕೆಲಸಗಳನ್ನು ಮೊದಲೇ ಯೋಜಿಸಿಕೊಳ್ಳುವುದು ಉತ್ತಮ. ತುರ್ತು ನಿರ್ವಹಣಾ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅನ್ನು ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+