New Year: ಹೊಸ ವರ್ಷಕ್ಕೆ ಕುಡಿದು ತೇಲಾಡುವವರಿಗೆ ಪೊಲೀಸರಿಂದ ವಿಶೇಷ ವ್ಯವಸ್ಥೆ, ಏನದು?
ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗುತ್ತಿರುವ ಹಿನ್ನೆಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನ್ಯೂ ಇಯರ್ ಪಾರ್ಟಿ ವೇಳೆ ಜನರು ಮದ್ಯದ ಅಮಲಿನಲ್ಲಿ ಅವಾಂತರಗಳು ಸೃಷ್ಟಿಸುವ ಹಿನ್ನೆಲೆ ಈ ಬಗ್ಗೆಯೂ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಕುಡಿದು ತೂರಾಡುವವರಿಗೂ ವಿಶೇಷ ವ್ಯವಸ್ಥೆ ಮಾಡಿದ್ದಾರೆ.
ಪಾರ್ಟಿ ಹಿನ್ನೆಲೆ ಮೋಜು ಮಸ್ತಿ ಮಾಡುವುದರಿಂದ ಮದ್ಯ ಸೇವಿಸಿ, ಎಲ್ಲೆಂದರಲ್ಲಿ ತೂರಾಡುವವರು ಸಂಖ್ಯೆಯೂ ಹೆಚ್ಚಾಗಿರುತ್ತೆ. ಹಾಗಾಗಿ ಇದು ಪೊಲೀಸರಿಗೂ ತಲೆನೋವಾಗಿತ್ತು. ಇದಕ್ಕೆ ಉಪಾಯ ಕಂಡುಕೊಂಡಿರುವ ಪೊಲೀಸರು ಒಂದು ಫುಲ್ ಟೈಟ್ ಆಗಿ ಬೀಳುವವರಿಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಮುಂದಾಗಿದೆ. ಕುಡಿದು ತೂರಾಡುತ್ತಾ ಬಿದ್ದವರನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲು ಈ ಕ್ರಮ ಕೈಗೊಂಡಿದೆ.

ಪಬ್‌ಗಳ ಮುಂದೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಪಬ್ ಬಳಿಯೂ ಒಬ್ಬೊಬ್ಬರನ್ನು ನಿಯೋಜಿಸಲು ಮುಂದಾಗಿದೆ. ಕುಡಿದು ತೂರಾಡುತ್ತಾ ಅವಾಂತರ ಮಾಡುವವರನ್ನು ಕೂಡಲೇ ಆಂಬುಲೆನ್ಸ್‌ಗೆ ಹತ್ತಿಸಲು ಪೊಲೀಸರು ಅಲರ್ಟ್ ಆಗಿದ್ದಾರೆ. ಕೆಲವರು ರಂಪಾಟ ಮಾಡುವುದನ್ನು ಮನಗಂಡು ಅವರನ್ನೂ ಆಂಬುಲೆನ್ಸ್ ಹತ್ತಿಸಲು ನಿರ್ಧರಿಸಿದ್ದಾರೆ.
ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಮಹತ್ವದ ಸೂಚನೆಗಳನ್ನು ಪೊಲೀಸರಿಗೆ ನೀಡಿದ್ದಾರೆ. ಈ ಬಾರಿ ಹೊಸ ವರ್ಷಾಚರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 31ರಂದು ರಾತ್ರಿ 1 ಗಂಟೆಯ ಒಳಗಾಗಿ ನಗರದ ಎಲ್ಲ ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್ಗಳನ್ನು ಬಂದ್ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಅಂದು ಫ್ಲೈಓವರ್‌ಗಳ ಮೇಲೆಯೂ ಕೆಲವರು ಹುಚ್ಚಾಟ ಮೆರೆಯುವ ಸಾಧ್ಯತೆ ಇರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆ ಸೇರಿದಂತೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ಬಂದ್ ಆಗಲಿದೆ ಎಂದಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಹೊರವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ಸೇರಿದಂತೆ ಹಲವೆಡೆ ಜನ ಹೆಚ್ಚಾಗಿ ಸೇರುವುದರಿಂದ ಈ ಭಾಗಗಳಲ್ಲಿ ಸಿಸಿಟಿವಿ, ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಶ್ವಾನದಳದ ತಪಾಸಣೆಯೂ ಇರುತ್ತದೆ. ಭದ್ರತೆಗಾಗಿ ಇಲ್ಲಿ ಬ್ಯಾರಿಕೇಡ್, ಅಗ್ನಿಶಾಮಕ ದಳ ವಾಹನ ಇರುತ್ತದೆ ಎಂದು ಮಾಹಿತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೊಸವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಅಂದು ಒನ್‌ವೇ ಸಂಚಾರಕ್ಕೆ ಮಾತ್ರವೇ ಅವಕಾಶವಿರಲಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗಲಿದ್ದು, ಸಾರ್ವಜನಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಬಂದಿಳಿಯಬಹುದು ಎಂದು ಮೆಟ್ರೋ ಕೂಡ ಹೇಳಿದೆ.












Click it and Unblock the Notifications