ರೌಡಿಶೀಟರ್ ಯೂನಿಸ್ ಮೇಲೆ ಬೆಳ್ಳಂಬೆಳಗ್ಗೆಯೇ ಪೊಲೀಸ್ ಫೈರಿಂಗ್.!
ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಗುಂಡಿನ ಸದ್ದು ಕೇಳಿಸಿದೆ. ರೌಡಿ ಶೀಟರ್ ಯೂನಿಸ್ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಆತನನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನಲೆ: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಭಟ್ಟಿ ಅಮ್ಜಾದ್ ನನ್ನು ಅಟ್ಟಾಡಿಸಿಕೊಂಡು ಹೋಗಿ ರೌಡಿಶೀಟರ್ ಯೂನಿಸ್ ಕೊಲೆ ಮಾಡಿದ್ದ.
ಭಟ್ಟಿ ಅಮ್ಜಾದ್ ಮತ್ತು ಯೂನಿಸ್ ನಡುವೆ ಹಳೇ ದ್ವೇಷ ಇತ್ತು. ಹೀಗಾಗಿ ಕಳೆದ ಭಾನುವಾರ ಭಟ್ಟಿ ಅಮ್ಜಾದ್ ಮೇಲೆ ಯೂನಿಸ್ ಗ್ಯಾಂಗ್ ನವರು ಅಟ್ಟಾಡಿಸಿಕೊಂಡು ಹೋಗಿ, ನಡು ರಸ್ತೆಯಲ್ಲಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿಕೊಂಡ ಡಿ.ಜೆ.ಹಳ್ಳಿ ಪೊಲೀಸರು ಯೂನಿಸ್ ನನ್ನು ಬಂಧಿಸಿ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೇದೆ ಮೇಲೆ ಯೂನಿಸ್ ಹಲ್ಲೆ ಮಾಡಿ, ಪರಾರಿ ಆಗಲು ಯತ್ನಿಸಿದ್ದಾನೆ. ಆಗ ರೌಡಿಶೀಟರ್ ಯೂನಿಸ್ ಕಾಲಿಗೆ ಡಿ.ಜೆ.ಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications