ಬೆಂಗಳೂರು: ಪೊಲೀಸರ ಚೀತಾ ಬೈಕ್ ಕದ್ದ ಐನಾತಿ ಕಳ್ಳ
ಬೆಂಗಳೂರು, ಆಗಸ್ಟ್ 16: ಸಾರ್ವಜನಿಕರ ಬೈಕು, ಕಾರುಗಳನ್ನು ಕದಿಯುವುದು ಸಾಮಾನ್ಯ ಆದರೆ ಇಲ್ಲೊಬ್ಬ ಐನಾತಿ ಕಳ್ಳ ಪೊಲೀಸರ ಬೈಕ್ ಅನ್ನೇ ಕಳ್ಳತನ ಮಾಡಿದ್ದಾನೆ.
ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯ ಚೀತಾ ಬೈಕ್ ಅನ್ನು ಮಂಗಳವಾರ ರಾತ್ರಿ ನಾಪತ್ತೆಯಾಗಿತ್ತು. ಬಳಿಕ ಮಾರನೇಯ ದಿನ ಬೆಂಗಳೂರಿನಿಂದ 75 ಕಿ.ಮೀ ದೂರದಲ್ಲಿ ಮದ್ದೂರು ಸಮೀಪ ಬೈಕ್ ಪತ್ತೆ ಆಯಿತು.
ಮಂಗಳವಾರ ರಾತ್ರಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಪ್ರಿನ್ಸ್ ರಾಯಲ್ ಹೊಟೆಲನ್ ನವರು ಕರೆ ಮಾಡಿದ್ದಾರೆ. ಹೊಟೆಲ್‌ಗೆ ಬಂದ ವ್ಯಕ್ತಿ ಬೇರೆ ಬೇರೆ ಹೆಸರಿನ ದಾಖಲೆಗಳು ಹೊಂದಿದ್ದು, ಆತನ ಬಗ್ಗೆ ಅನುಮಾನವಿದೆ ಬಂದು ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದಾರೆ.

ಕೂಡಲೇ ಸ್ಥಳಕ್ಕೆ ಎಸ್‌ಐ ರಂಗಸ್ವಾಮಯ್ಯ ತೆರಳಿದ್ದಾರೆ. ಅವರ ಜೊತೆಗೆ ಚೀತಾ ಬೈಕ್‌ನಲ್ಲಿ ಸಿಬ್ಬಂದಿ ಗಿರೀಶ್ ಕೂಡಾ ತೆರಳಿದ್ದಾರೆ. ಹೊಟೆಲ್ ಒಳಗೆ ಹೋಗುವ ಆತುರದಲ್ಲಿ ಬೀಗವನ್ನು ಬೈಕ್‌ನಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದರ ಲಾಭ ಪಡೆದ ಕಳ್ಳರು ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದಾರೆ.
ಬೈಕ್ ನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಅದರ ಮೂಲಕ ಬೈಕ್ ಅನ್ನು ಬೆಳಿಗ್ಗೆ ಪತ್ತೆ ಹಚ್ಚಿದಾಗ ಮದ್ದೂರು ಸಮೀಪ ಬೈಕ್ ಪತ್ತೆ ಆಗಿದೆ. ಈ ಕೆಲಸ ಕಳ್ಳರದ್ದೆ? ಅಥವಾ ಕುಡಿದ ಮತ್ತಿನಲ್ಲಿ ಯಾರಾದರೂ ಬೈಕ್ ತೆಗೆದುಕೊಂಡು ಹೋದರೇ ತಿಳಿಯಬೇಕಿದೆ.












Click it and Unblock the Notifications