ಬೆಂಗಳೂರು; ವೈದ್ಯರ ಹನಿಟ್ರ್ಯಾಪ್, 10 ಲಕ್ಷ ಕೇಳಿದವರು ಕಂಬಿ ಹಿಂದೆ!
ಬೆಂಗಳೂರು, ಜೂನ್ 19 : ಹನಿಟ್ರ್ಯಾಪ್ ವಿಡಿಯೋ ಇಟ್ಟುಕೊಂಡು ಬೆಂಗಳೂರು ನಗರದ ವೈದ್ಯರೊಬ್ಬರಿಗೆ ಹಣದ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಕಂಬಿ ಹಿಂದೆ ಹೋಗಿದೆ. 10 ಲಕ್ಷ ಹಣ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
Recommended Video
ಹಣಕ್ಕಾಗಿ ವೈದ್ಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರ ತಂಡವನ್ನು ನಗರದ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೈಕೋಲೇಔಟ್‌ನ 9ನೇ ರಸ್ತೆಯ ಚಾಂದಿನಿ (22) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾಳೆ.
ಕೋಣನಕುಂಟೆಯ ನಿವಾಸಿ ಪ್ರಜ್ವಲ್ (26), ಸಿಂಗಸಂದ್ರದ ಜಿ. ಕೆ. ಲೇಔಟ್ ನಿವಾಸಿ ಅನಿರುದ್ಧ (23) ಬಂಧಿತ ಆರೋಪಿಗಳು. ಚಾಂದಿನಿ ಮತ್ತು ವೈದ್ಯರು ಜೂನ್ 13ರಂದು ಒಟ್ಟಿಗೆ ಇದ್ದ ವಿಡಿಯೋವನ್ನು ಇಟ್ಟುಕೊಂಡು ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದರು.

ಘಟನೆ ವಿವರಗಳು : ವೈದ್ಯರೊಬ್ಬರಿಗೆ ಆನ್‌ಲೈನ್ ಮೂಲಕ ಚಾಂದಿನಿ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ಜೂನ್ 13ರಂದು ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದು, ಊಟ ಮಾಡಿದ್ದಾರೆ.
ಬಳಿಕ ಯಲಹಂಕದ ಪ್ರಕೃತಿ ನಗರದಲ್ಲಿರುವ ಚಾಂದಿನಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದಾಗ ಆಗಮಿಸಿದ ಪ್ರಜ್ವಲ್ ಮತ್ತು ಅನಿರುದ್ಧ ನೀವಿಬ್ಬರು ಒಟ್ಟಿಗೆ ಇರುವ ದೃಶ್ಯಗಳು ನಮ್ಮ ಬಳಿ ಇದೆ. 10 ಲಕ್ಷ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ವೈದ್ಯರು ಈ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.












Click it and Unblock the Notifications