• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಬೆಂಗಳೂರಿನಲ್ಲಿ ಲಾಲ್ ಬಾಗ್ ಪ್ರವೇಶಕ್ಕೆ ಸಾಲುಗಟ್ಟಿದ ಜನ!

|

ಬೆಂಗಳೂರು, ಮೇ.19: ಭಾರತ ಲಾಕ್ ಡೌನ್ ನಿಂದ ಮನೆಯಲ್ಲೇ ಕುಳಿತು ರೋಸಿ ಹೋಗಿದ್ದ ಬೆಂಗಳೂರಿಗರು ಪಾರ್ಕ್ ಗಳತ್ತ ಮುಖ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸಸ್ಯಕಾಶಿ ಲಾಲ್ ಬಾಗ್ ಗೆ ಭೇಟಿ ನೀಡುತ್ತಿದ್ದಾರೆ.

ಕರ್ನಾಟಕ ಲಾಕ್ ಡೌನ್ 4.0 ವಿಸ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಎಲ್ಲ ಪಾರ್ಕ್ ಗಳನ್ನು ತೆರೆಯಲು ಅನುಮತಿ ನೀಡಿದ್ದರು. 57 ದಿನಗಳ ನಂತರ ಪಾರ್ಕ್ ಗಳನ್ನು ತೆರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7 ಗಂಟೆವರೆಗೂ ತೆರೆದಿರುತ್ತವೆ.

KSRTC ಮತ್ತು BMTC ಬಸ್ ಹತ್ತುವ ಮುನ್ನ ಪ್ರಯಾಣಿಕರೇ ಗಮನಿಸಿ!
ಲಾಲ್ ಬಾಗ್ ಓಪನ್ ಆಗುತ್ತಿದ್ದಂತೆ ಸಾರ್ವಜನಿಕರು ಸಸ್ಯಕಾಶಿಯ ಅಂದವನ್ನು ಸವಿಯಲು ಧಾವಿಸಿ ಬಂದರು. ಲಾಕ್ ಡೌನ್ ನಡುವೆ ತೆರದ ಸಸ್ಯಕಾಶಿ ಪ್ರವೇಶಕ್ಕೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಲಾಲ್ ಬಾಗ್ ಪ್ರವೇಶಕ್ಕೆ ಕಂಡೀಷನ್ಸ್ ಅಪ್ಲೈ:

ಬೆಂಗಳೂರಿನ ಲಾಲ್ ಬಾಗ್ ಪ್ರವೇಶಿಸಬೇಕೆಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು.

ಫಿವರ್ ಚೆಕ್ ಮಾಡಿ, ಸ್ಯಾನಿಟೈಸರ್ ನೀಡಿ ಲಾಲ್ ಬಾಗ್ ಒಳಗೆ ಪ್ರವೇಶ ನೀಡಲಾಗುತ್ತಿದೆ. 2 ತಿಂಗಳ ಬಳಿಕ ಸಸ್ಯಕಾಶಿಯಲ್ಲಿ ಸಾರ್ವಜನಿಕರು ವಾಕ್ ಮಾಡಿದರು.

English summary
Lalbagh: Queues up Not Just for Liquor but for Morning Walks too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X