ಬೆಂಗಳೂರಲ್ಲಿ ಕಳಪೆ ರಸ್ತೆ ಕಂಡರೆ ಟ್ವಿಟ್ಟರ್‌ನಲ್ಲಿ ದೂರು ನೀಡಿ

ಬೆಂಗಳೂರು, ಜ. 19: ನಗರದಲ್ಲಿರುವ ಕಳಪೆ ರಸ್ತೆಗಳ ಕುರಿತು ಟ್ವಿಟ್ಟರ್‌ನಲ್ಲಿ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ. "ಬೆಂಗಳೂರಿಗರು ತಮಗೆ ಕಂಡುಬಂದ ಕಳಪೆ ರಸ್ತೆ ಗುಣಮಟ್ಟ ಕುರಿತು ಡಿಸಿಪಿ ಪೊಲೀಸ್ ಉಪ ಆಯುಕ್ತರ (ಆಡಳಿತ) ಟ್ವಿಟ್ಟರ್ ಖಾತೆ (@dcpadminbcp) ಕ್ಕೆ ಟ್ವೀಟ್ ಮಾಡಿ ದೂರು ನೀಡಬೇಕು. ಆಗ ರಸ್ತೆ ಗುಣಮಟ್ಟ ಸುಧಾರಣೆಗೆ ನಾಗರಿಕ ಸಂಸ್ಥೆಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ. [ಬೆಂಗಳೂರಲ್ಲಿ ನಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅರಿಯೋದು ಹೇಗೆ?]

reddy

"ಕಳಪೆ ರಸ್ತೆ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬಿಡಿಎ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ರಸ್ತೆ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ ಹಾಗೂ ಬಿಡಿಎ ತಮ್ಮ 2015-16ನೇ ಬಜೆಟ್‌ನಲ್ಲಿ ರಸ್ತೆ ರಿಪೇರಿಗಾಗಿ ಹಣ ತೆಗೆದಿರಿಸಲು ಸಾಧ್ಯವಾಗುತ್ತದೆ" ಎಂದು ಎಂ.ಎನ್. ರೆಡ್ಡಿ ಹೇಳಿದ್ದಾರೆ. [ಬಿಬಿಎಂಪಿಗೆ ಟ್ವಿಟ್ಟರ್ ಮೂಲಕ ದೂರು ನೀಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+