NH 4: ಬೆಂಗಳೂರು ಪೀಣ್ಯ ಮೇಲ್ಸೇತುವೆ ಪ್ರತಿ ಬುಧವಾರ ಈ ವಾಹನಗಳಿಗೆ ಬಂದ್!

ಬೆಂಗಳೂರು, ಫೆಬ್ರವರಿ 21: ನಿರಂತರವಾಗಿ ಎರಡು ವರ್ಷ ಸುರಕ್ಷತಾ ಕಾಮಗಾರಿ ನಿರ್ವಹಿಸಿದ್ದ ಮತ್ತು ರಾಜಧಾನಿಯಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ಯಲ್ಲಿನ ಪೀಣ್ಯ ಮೇಲ್ಸೇತುವೆಯಲ್ಲಿ (Peenya Flyover) ಮತ್ತೊಂದು ಕಾಮಗಾರಿ ನಡೆಯಲಿದೆ. ಈ ಸಂಬಂಧ ಪ್ರತಿ ಬುಧವಾರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮೂಲಗಳು ಮಾಹಿತಿ ನೀಡಿವೆ.

ಹೌದು, ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ಮತ್ತೆ ಗ್ರೌಟಿಂಗ್ ಕಾಮಗಾರಿ ನಡೆಸಲು ತಿರ್ಮಾನಿಸಲಾಗಿದೆ. ಈ ಸಂಬಂಧ ಸಂಬಂಧಿಸಿದ ಪ್ರಾಧಿಕಾರ ಮತ್ತು ಅಧಿಕಾರಿಗಳು ಬೃಹತ್ ವಾಹನಗಳಾದ ಟ್ರಕ್‌ಗಳಿಗೆ ಪ್ರತಿ ಬುಧವಾರ ಬೆಳಗ್ಗೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆಗೆ ವರೆಗೆ ಟ್ರಕ್/ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

Bengaluru Peenya Flyover Ban For Truck Due this Reason National Highway-4 update

ಈ ಹಿಂದೆಯು ಇದೇ ಗ್ರೌಟಿಂಗ್ ಕಾಮಗಾರಿ ನಡೆಸಲಾಗಿತ್ತು. ಆಗಲೂ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 06 ಗಂಟೆವರೆಗೆ ಒಟ್ಟು 24 ಗಂಟೆಗೆವರೆಗೆ ವಾಹನಗಳಿಗೆ ನಿರ್ಬಂಧಿಸಲಾಗಿತ್ತು. ಬೆಂಗಳೂರಿನಿಂದ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಿರುತ್ತದೆ.

ಪ್ರಯಾಣಿಕರ ಹಿತರಕ್ಷಣೆ ದೃಷ್ಟಿಯಿಂದ, ವಾಹನ ದಟ್ಟಣೆ ನಿವಾರಣೆಗೆ ಮುಂದಿನ ಫೆಬ್ರವರಿ 26ರಿಂದ ಜಾರಿಗೆ ಬರುವಂತೆ ಈ ಗ್ರೌಟಿಂಗ್ ಕಾಮಗಾರಿ ಕೆಲಸ ಮರು ನಿಗದಿಗೊಳಿಸಲಾಗಿದೆ. ಈ ಕಾರಣದಿಂದಲೇ ಪ್ರತಿ ಬುಧವಾರ ಬೆಳಗ್ಗೆಯಿಂದ 24 ಗಂಟೆಗೆ ಲಾರಿ ಓಡಾಟ ಸ್ಥಗಿತಗೊಳಿಸಲಾಗಿದೆ.

ಹಾಗಾದರೆ ಪರ್ಯಾಯ ಮಾರ್ಗಗಳು ಯಾವುವು?

ಬೆಂಗಳೂರು ನಗರ ಭಾಗದಿಂದ ಪೀಣ್ಯ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸುವ ಬೃಹತ್ ವಾಹನಗಳು, ಲಾರಿಗಳು ಸಿಎಂಐಟಿ ಜಂಕ್ಷನ್ ಫ್ಲೈಓವರ್ ಕೆಳಗಿರುವ ತುಮಕೂರು ರಸ್ತೆಯಲ್ಲಿ ಸಂಚರಿಸಬೇಕು. ತುಮಕೂರು ರಸ್ತೆಯಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚರಿಸುವ ಭಾರೀ ವಾಹನಗಳು ಕೆನ್ನೆಮೆಟಲ್, ಸರ್ವೀಸ್ ರಸ್ತೆ ಮೂಲಕ ಗೊರಗುಂಟೆಪಾಳ್ಯ ಕಡೆ ಸಾಗಬೇಕು. ಅಲ್ಲಿಂದ ನೀವು ಮತ್ತೆ ಹೆದ್ದಾರಿ ಬಳಸಬಹುದಾಗಿದೆ.

ಎರಡು ವರ್ಷ ಎಲ್ಲ ವಾಹನಗಳಿಗೆ ಬಂದ್ ಆಗಿತ್ತು!

ಬೆಂಗಳೂರಿನಿಂದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಹುಮುಖ್ಯ ಮೇಲ್ಸೇತುವೆ ಇದಾಗಿದೆ. ಈ ಭಾಗದಲ್ಲಿ ಅತೀ ಉದ್ದದ ಮೇಲ್ಸೇತುವೆ ಇದಾಗಿದೆ. ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಈ ಹಿಂದೆಯು ಮೇಲ್ಸೇತುವೆ ಕಾಮಗಾರಿಗೆ ಎರಡು ವರ್ಷ ಯಾವುದೇ ವಾಹನಗಳನ್ನು ಬಿಟ್ಟಿರಲಿಲ್ಲ. ಎರಡು ವರ್ಷದ ಬಳಿಕ ಆರಂಭದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಎಲ್ಲ ವಿಧದ ವಾಹನಗಳಿಗೆ ಅವಕಾಶ ನೀಡಲಾಯಿತು. ಇದೀಗ ಮತ್ತೆ ಸಣ್ಣಪುಟ್ಟ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಟ್ರಕ್‌ಗಳಿಗೆ ಸಂಚಾರ ನಿಷೇಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+