ಮನೆಯಲ್ಲಿಯೇ ಬೆಸ್ಕಾಂ ಬಿಲ್ ಕಟ್ಟಿ, ರಶೀದಿ ಪಡೆಯಿರಿ
ಬೆಂಗಳೂರು, ಏ. 23 : ಬೆಂಗಳೂರಿನಲ್ಲಿರುವ ಜನರು ಇನ್ನು ಮುಂದೆ ಮನೆಯಲ್ಲಿಯೇ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ. ಬೆಸ್ಕಾಂ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ಸ್ಪಾಟ್ ಬಿಲ್ಲಿಂಗ್' ವ್ಯವಸ್ಥೆಯನ್ನು ನಗರದಲ್ಲಿ ಪರಿಚಯಿಸಲು ಮುಂದಾಗಿದೆ.
ಬೆಸ್ಕಾಂ ಪ್ರಾಯೋಗಿಕವಾಗಿ ಜಾರಿಗೆ ತಂದ ಸ್ಪಾಟ್ ಬಿಲ್ಲಿಂಗ್ ವ್ಯವಸ್ಥೆಗೆ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿದ್ದು, ಇದನ್ನು ಬೆಂಗಳೂರು ನಗರಕ್ಕೆ ವಿಸ್ತರಣೆ ಮಾಡಲು ಚಿಂತನೆ ನಡೆದಿದೆ. ಇದರಿಂದ ಬಿಲ್ ಪಾವತಿ ಮಾಡಲು ತಾಸು ಗಟ್ಟಲೇ ಕ್ಯೂನಲ್ಲಿ ಕಾಯುವ ತೊಂದರೆ ತಪ್ಪಲಿದೆ. [ಪಾದಾಚಾರಿಗಳಿಗೆ ತಪ್ಪಲಿದೆ ತೊಂದರೆ]

ಪಾವತಿ ಹೇಗೆ? : ಮನೆಗೆ ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಲು ಬರುವವರ ಬಳಿ ನೀವು ಬಿಲ್ ಪಾವತಿ ಮಾಡಬಹುದು. ಮೀಟರ್ ರೀಡರ್ ತನ್ನ ಜೊತೆ ಬಿಲ್ಲಿಂಗ್ ರಶೀದಿ ನೀಡುವ ಯಂತ್ರವನ್ನು ತೆಗೆದುಕೊಂಡು ಬಂದಿರುತ್ತಾನೆ. ನೀವು ಸ್ಥಳದಲ್ಲಿಯೇ ಬಿಲ್ ಪಾವತಿ ಮಾಡಿದರೆ ರಸೀದಿ ನೀಡಲಾಗುತ್ತದೆ. [ಅಂಚೆ ಕಚೇರಿಯಲ್ಲಿ ಬೆಸ್ಕಾಂ ಬಿಲ್ ಕಟ್ಟಿ]
ಈಗಾಗಲೇ ಸ್ಪಾಟ್ ಬಿಲ್ಲಿಂಗ್ ವ್ಯವಸ್ಥೆಗೆ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದ್ದರಿಂದ ಬೆಂಗಳೂರು ನಗರಕ್ಕೂ ಈ ಸೇವೆ ವಿಸ್ತರಣೆ ಮಾಡಲು ಬೆಸ್ಕಾಂ ಸಿದ್ಧತೆ ನಡೆಸಿದೆ.












Click it and Unblock the Notifications