ಬೆಂಗಳೂರು: ಮೆಟ್ರೋ ರೈಲಿಗೆ 20 ನಿಮಿಷ ಕಾಯಬೇಕು
ಬೆಂಗಳೂರು, ಜೂ. 21: ಮೆಟ್ರೋ ರೈಲಿಗೆ ಇನ್ನು ಕೆಲ ದಿನ ನೀವು 20 ನಿಮಿಷ ಕಾಯಬೇಕಾಗುತ್ತದೆ. ಕೆಲ ಕಾಮಗಾರಿ ಹಿನ್ನಲೆಯಲ್ಲಿ ಮೆಟ್ರೊ ರೈಲು ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.
ವಿದ್ಯುತ್ ಕೇಬಲ್ ಜೂ. 24 ರಿಂದ ಎಂ.ಜಿ. ರಸ್ತೆ-ಬೈಯಪ್ಪನಹಳ್ಳಿ ನಡುವಿನ ನಮ್ಮ ಮೆಟ್ರೊ ಸಂಚಾರ ಸಮಯ ತಾತ್ಕಾಲಿಕವಾಗಿ ಬದಲಾಗಲಿದೆ ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.[ಮಲ್ಲೇಶ್ವರಂ ಟು ನಾಗಸಂದ್ರ= 25 ನಿಮಿಷ]

ಪ್ರಸ್ತುತ ಈ ಮಾರ್ಗದಲ್ಲಿ ಬೆಳಿಗ್ಗೆ 6 ರಿಂದ 8 ರವರೆಗೆ ಹಾಗೂ ರಾತ್ರಿ 8 ರಿಂದ 10ರ ವರೆಗೆ 15 ನಿಮಿಷಕ್ಕೊಂದು ಮೆಟ್ರೊ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ 10 ನಿಮಿಷಕ್ಕೊಂದು ಮೆಟ್ರೊ ಸಂಚಾರ ಮಾಡುತ್ತಿದೆ. 24ರಿಂದ ಬೆಳಿಗ್ಗೆ 6ರಿಂದ 10ರ ವರೆಗೆ 20 ನಿಮಿಷಕ್ಕೊಂದು ಮೆಟ್ರೊ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]
ಎಂ. ಜಿ. ರಸ್ತೆ ನಿಲ್ದಾಣ ಹಾಗೂ ಇಂದಿರಾನಗರ ನಿಲ್ದಾಣದ ನಡುವೆ ಒಂದು ಮಾರ್ಗ ಮಾತ್ರ ಕಾರ್ಯನಿರ್ವಹಿಸಲಿದೆ. ಇಂದಿರಾನಗರ-ಬೈಯಪ್ಪನಹಳ್ಳಿ ನಡುವೆ ಜೋಡಿ ಮಾರ್ಗ ಕಾರ್ಯನಿರ್ವಹಿಸಲಿದೆ. ಮುಂದಿನ ಪ್ರಕಟಣೆ ವರೆಗೆ ಇದೇ ನಿಯಮ ಜಾರಿಯಲ್ಲಿ ಇರುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications