Watch Video: ಬೆಂಗಳೂರಲ್ಲಿ ಕಾರ್ ಪಾರ್ಕಿಂಗ್ ಕಿರಿಕ್; ಹಳದಿ ಲೈನ್ ತೋರಿಸಿ ಮಹಿಳೆಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ

ಬೆಂಗಳೂರು: ಬೆಂಗಳೂರಿನಂತಹ ನಗರ ಹೊಂದಿರುವ ಭಾರತದಲ್ಲಿ ಕಾರುಗಳ ಪಾರ್ಕಿಂಗ್ ಸಮಸ್ಯೆ, ನಿಯಮಗಳಡಿ ವಾಹನ ಪಾರ್ಕಿಂಗ್ ಮಾಡದೇ ಇರುವ ಕಾರಣ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬರು ಕಾರು ಪಾರ್ಕಿಂಗ್ ಕುರಿತು ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ಕಾರು ಪಾರ್ಕಿಂಗ್ ಹಾಗೂ ತಮ್ಮ ಮೇಲಿನ ದೂರಿದ್ದ ಮಹಿಳೆಯ ಪಾರ್ಕಿಂಗ್ ವೈಖರಿಯನ್ನು ವ್ಯಕ್ತಿ ವಿವರಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಡಿಯೋ ಲಕ್ಷಾಂತರ ವಿವ್ಸ್ ಪಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ @mtcurse ಖಾತೆಯಿಂದ ಹಂಚಿಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಕಾರು ಪಾರ್ಕಿಂಗ್ ಅನ್ನು ಹೇಗೆ ಮಾಡಬೇಕೆಂದು ವಿವರಿಸಲಾಗಿದೆ. ಬೆಂಗಳೂರಿನ ಬೃಹತ್ ವಸತಿ ಸಂಕೀರ್ಣದ ವಿಡಿಯೋ ಇದಾಗಿದ್ದು, ಒಳಗೆ ಪಾರ್ಕಿಂಗ್ ಸ್ಥಳದಲ್ಲಿನ ಹಳದಿ ಬೆ ಲೈನ್ ಒಳಗೇ ತಮ್ಮ ಕಾರನ್ನು ನಿಲ್ಲಿಸಿದ್ದಾಗಿ ಅವರು ತೋರಿಸಿದ್ದಾರೆ. ನಿಯಮದ ಪ್ರಕಾರ ಈ ರೀತಿ ಕಾರು ನಿಲ್ಲಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ.

Bengaluru Parking

ಇದೇ ವಸತಿ ಪ್ರದೇಶದ ಮಹಿಳೆಯೊಬ್ಬರು ನನ್ನ ಕಾರು ಪಾರ್ಕಿಂಗ್ ಕುರಿತು ದೂರಿದ್ದಾರೆ. ನನ್ನ ಮರ್ಸಿಡೀಸ್ ಬೆಂಜ್ ಕಾರನ್ನು ಸರಿಯಾದ ಕ್ರಮದಲ್ಲಿ ಹಳದಿ ಲೈನ್ ಒಳಗೆ ನಿಲ್ಲಿಸಿದ್ದೇನೆ. ನನ್ನ ಕಾರು ಪಕ್ಕದಲ್ಲಿ ಬೈಕ್ ಗಳನ್ನು ತಪ್ಪಾದ ಕ್ರಮದಲ್ಲಿ ಪಾರ್ಕ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನೂ ತನ್ನ ಮೇಲೆ ದೂರಿದ ಆ ಮಹಿಳೆಯ ಫೋರ್ಡ್ ಕಾರು ಹಳದಿ ಲೈನ್ ಆಚೆಗೆ ಬಂದಿದೆ. ಇತರ ನಿವಾಸಿಗಳ ವಾಹನಗಳಿಗೆ ತೊಂದರೆ ಆಗುವಂತೆ ಆಕೆ ಪಾರ್ಕ್‌‌ ಮಾಡಿದ್ದಾಳೆ ನೋಡಿ ಎಂದು ವಿಡಿಯೋ ಮೂಲಕ ವ್ಯಕ್ತಿ ತೋರಿಸಿದ್ದಾರೆ. ಮಹಿಳೆ ಕಾರಿನತ್ತ ಕ್ಯಾಮೆರಾ ತಿರುಗಿಸಿ ತೋರಿಸಿ ನಗಾಡಿದ್ದಾರೆ.

ನಿಗದಿತ ಹಳದಿ ಲೈನ್ ದಾಟಿ ಅವರ ಕಾರು ಆಚೆ ಬಂದಿದೆ. ಇವರಿಗೆ ಸರಿಯಾಗಿ ಪಾರ್ಕಿಂಗ್ ಮಾಡಲು ಬಾರದಿದ್ದರೂ ನನ್ನ ಮೇಲೆ ಟೀಕಿಸುತ್ತಾರೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಸತಿ ಪ್ರದೇಶದಲ್ಲಿ ಸರಿಯಾದ ಕ್ರಮದಲ್ಲಿ, ಪಾರ್ಕಿಂಗ್ ಬೆ ಹಳದಿ ಲೈನ್ ಒಳಗೆ ಕಾರು ಸಂಪೂರ್ಣವಾಗಿ ನಿಲ್ಲಿಸಬೇಕು. ಜವಾಬ್ದಾರಿಯುತ ಪಾರ್ಕಿಂಗ್ ಪ್ರತಿ ನಾಗರಿಕರ ಕರ್ತವ್ಯವೆಂದು ತಿಳಿಯಬೇಕು ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

ಸಾವಿರಾರು ಕಾಮೆಂಟ್, ಲಕ್ಷಾಂತರ ವೀಕ್ಷಣೆ!

ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆಯಿತು. ಕೇವಲ 24 ಗಂಟೆಗಳಲ್ಲಿ 1.7ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. 600ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. 1.23 ಲಕ್ಷ ಲೈಕ್ಸ್‌ಗಳು ಬಂದಿವೆ. ನೋಡ ನೋಡುತ್ತಿದ್ದಂತೆ ವಿಡಿಯೋಗೆ ಭಾರೀ ಸದ್ದು ಮಾಡಿದೆ.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

ಪಾರ್ಕಿಂಗ್ ವಿಡಿಯೋ ನೋಡಿದವರಲ್ಲಿ ಕೆಲವರು ತಮಾಷೆ ಮಾಡಿದ್ದರೆ, ಮತ್ತೆ ಕೆಲವರು ಸಲಹೆ ನೀಡಿದ್ದಾರೆ, ಎಚ್ಚರಿಕೆ ಕಾಮೆಂಟ್‌ಗಳು ಬಂದಿವೆ. ಒಬ್ಬರು 'ಫೋರ್ಡ್ ಚಾಲಕರಿಗೆ ಸರಿಯಾದ ಪಾರ್ಕಿಂಗ್ ಕೌಶಲ್ಯ ಇಲ್ಲ. ಆದರೆ ಅವರಿಗೆ ನಿಮ್ಮ ಮೇಲೆ ಅಸೂಯೆ' ಎಂದಿದ್ದಾರೆ. ಫೋರ್ಡ್ ಚಾಲಕರಿಗೆ ಧನ್ಯವಾದ ತಿಳಿಸಿ. ಏಕೆಂದರೆ ಅವರು ಸರಿಯಾದ ಕ್ರಮದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗಿದ್ದರೆ ನಿಮ್ಮ ಕಾರಿಗೆ ಹಾನಿ ಆಗುವ ಸಾಧ್ಯತೆ ಇತ್ತು' ಎಂದು ತಮಾಷೆ ಮಾಡಿದ್ದಾರೆ. ಮೂರನೇಯವರು ಭವಿಷ್ಯದಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಲು ನೀವು ಡ್ಯಾಶ್ ಕ್ಯಾಮರಾ ಬಳಸಿ' ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+