ಬೆಂಗಳೂರಿಗಿಂತ ಮತ್ತೊಂದು ಬೆಸ್ಟ್ ನಗರ ಇಲ್ಲ: ಚೆನ್ನೈನಿಂದ ಸಿಲಿಕಾನ್ ಸಿಟಿಗೆ ಬಂದ ತಮಿಳುನಾಡು ಉದ್ಯಮಿ ಹೇಳಿಕೆ ವೈರಲ್!
ತಮಿಳುನಾಡಿನ ಉದ್ಯಮಿಯೊಬ್ಬರು ಬೆಂಗಳೂರು ನಗರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಐಟಿ - ಬಿಟಿ ಸಿಟಿ, ಸಿಲಿಕಾನ್ ಸಿಟಿ ಆಗಿರುವ ಬೆಂಗಳೂರು ಸ್ಟಾರ್ಟ್‌ಅಪ್ ವಿಚಾರದಲ್ಲೂ ಮುಂಚೂಣಿಯಲ್ಲಿದೆ. ಆದರೆ, ಇದೀಗ ತಮಿಳುನಾಡಿನ ಮೂಲದ ಉದ್ಯಮಿಯೊಬ್ಬರು ಮಾಡಿರುವ ಲಿಂಕ್ಡ್ ಇನ್ ಪೋಸ್ಟ್ ಗಮನ ಸೆಳೆಯುತ್ತಿದೆ.
ಒಂದು ವರ್ಷದ ಹಿಂದೆ ಬೆಂಗಳೂರಿಗೆ ತಮ್ಮ ವ್ಯವಹಾರವನ್ನು ಸ್ಥಳಾಂತರಿಸಿದ ಉದ್ಯಮಿಯೊಬ್ಬರು ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ತಮ್ಮ ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ಮಾಡಿದ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಇದು ಸಹ ಒಂದಾಗಿದೆ. ಚೆನ್ನೈಗಿಂತಲೂ ಬೆಂಗಳೂರು ನಗರ ಉತ್ತಮವಾಗಿದೆ ಎಂದು ಎಂದಿದ್ದಾರೆ.

ಬೆಂಗಳೂರಿಗೆ ತಮ್ಮ ಸಂಸ್ಥೆ ಸ್ಥಳಾಂತರಿಸುವ ಬಗ್ಗೆ ಸಂಸ್ಥಾಪಕ ಹರೀಶ್ ವರದರಾಜನ್ ಅವರು ಸೋಷಿಯಲ್ ಮೀಡಿಯಾ ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆನ್ನೈ ಮೂಲದ ಸ್ಟಾರ್ಟ್ಅಪ್ ಫ್ರಾಗೇರಿಯಾ ಎನ್ನುವ ಸಂಸ್ಥೆಯನ್ನು ಈಚೆಗೆ ಬೆಂಗಳೂರಿಗೆ ಹರೀಶ್ ಅವರು ಸ್ಥಳಾಂತರಿಸಿದ್ದಾರೆ. ತಮಿಳುನಾಡಿನಲ್ಲಿ ಜಾಗತಿಕ ಉತ್ಪನ್ನವನ್ನು ನಿರ್ಮಿಸಲು ತಮ್ಮ ಎಲ್ಲ ಮಾದರಿಯ ಸೌಲಭ್ಯಗಳಿದ್ದರೂ, ಬೆಂಗಳೂರಿಗೆ ಕಂಪನಿಯನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ.
ಒಂದು ವರ್ಷದ ನಂತರ ವರದರಾಜನ್ ಅವರು, ತಮ್ಮ ವ್ಯವಹಾರದ ಬಗ್ಗೆ ಮತ್ತು ವ್ಯವಹಾರವನ್ನು ಹೆಚ್ಚಿಸುವ ವಿಷಯದಲ್ಲಿ ಯಾವುದೇ ನಗರವು ಬೆಂಗಳೂರಿನ ಸಮೀಪ ಬರುವುದಕ್ಕೂ ಸಾಧ್ಯವಿಲ್ಲ. ಬೆಂಗಳೂರು ನಗರದ ಸಮೀಪಕ್ಕೆ ಭಾರತದ ಯಾವುದೇ ಮತ್ತೊಂದು ನಗರವೂ ಬರುವುದಕ್ಕೂ ಸಾಧ್ಯವಿಲ್ಲ. ಬೆಂಗಳೂರು ನಗರವು ಭಾರತದ ಉಳಿದ ನಗರಗಳಿಗಿಂತಲೂ ತೀರ ಭಿನ್ನವಾಗಿದೆ. ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಒಂದು ವರ್ಷವಾಗಿದೆ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಇದೂ ಒಂದಾಗಿದೆ ಅಂತ ವರ್ದರಾಜನ್ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಾವು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಒಂದು ವರ್ಷವಾಯಿತು. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಇದು ಒಂದು ಎಂದು ನಾನು ಭಾವಿಸುತ್ತೇನೆ. ವೈಯಕ್ತಿಕವಾಗಿ, ಕಳೆದ 10 ವರ್ಷಗಳಲ್ಲಿ ನಾವು ಪ್ರಪಂಚದಾದ್ಯಂತ ಐದು ನಗರಗಳಲ್ಲಿ ವಾಸಿಸುತ್ತಿದ್ದೇವೆ. ವರ್ಷಪೂರ್ತಿ ಹವಾಮಾನಕ್ಕೆ ಬೆಂಗಳೂರಿನ ಸಮೀಪಕ್ಕೆ ಯಾವುದೇ ಮತ್ತೊಂದು ನಗರ ಬರುವುದಕ್ಕೆ ಸಾಧ್ಯವಿಲ್ಲ.
ಇನ್ನು ಬೆಂಗಳೂರು ನಗರದ ಸಂಚಾರದ ವಿಷಯಕ್ಕೆ ಬಂದರೆ, ಕಳೆದ ವರ್ಷದಲ್ಲಿ ಎರಡು ಬಾರಿ ಮಾತ್ರ ನಾವು ಒಂದು ಗಂಟೆಗಿಂತ ಹೆಚ್ಚು ಕಾಲ ಸಂಚಾರದಲ್ಲಿ ಕಳೆದಿದ್ದೇವೆ. ಮೆಟ್ರೋ + ಆಫ್-ಪೀಕ್ ಪ್ರಯಾಣ + ಹೊರವಲಯದಲ್ಲಿ ವಾಸಿಸುವುದು ಬಹುಶಃ ಸಹಾಯ ಮಾಡುತ್ತದೆ. ವೃತ್ತಿಪರವಾಗಿ, ದಕ್ಷಿಣ ಭಾರತದ ನಗರಗಳಲ್ಲಿ ಬೆಂಗಳೂರು ಪ್ರೀಮಿಯಂ ಹಣ್ಣುಗಳಿಗೆ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಹವಾಮಾನವು ನಮ್ಮ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನೀವು ದೇಶದ ಕೆಲವು ಅತ್ಯುತ್ತಮ ಹೂಡಿಕೆದಾರರಿಂದ ಟ್ಯಾಕ್ಸಿ ಸವಾರಿ ಸಹ ಇಲ್ಲಿ ಸಿಗುತ್ತದೆ. ನೀವು ಭಾರತದಲ್ಲಿ ಕಂಪನಿಯನ್ನು ಪ್ರಾರಂಭಿಸುತ್ತಿದ್ದರೆ ಅಥವಾ ಒಂದನ್ನು ನಿರ್ಮಿಸಲು ಭಾರತಕ್ಕೆ ಹಿಂತಿರುಗುತ್ತಿದ್ದರೆ, ಬೆಂಗಳೂರು ಸ್ಪಷ್ಟ ಉತ್ತರವಾಗಿದೆ ಎಂದೂ ಅವರು ಸೋಷಿಯಲ್ ಮೀಡಿಯಾ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
Bengaluru: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನಾನು ಒಪ್ಪುತ್ತೇನೆ. ನಿಮ್ಮ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿಲ್ಲ, ಆದರೆ ನಿಮ್ಮ ಭಾವನೆಗಳನ್ನು ನಾನು ಸಹ ಅನುಭವಿಸುತ್ತೇನೆ! ನಾವು ಇತ್ತೀಚೆಗೆ ನ್ಯೂಫಿನ್ ಎನರ್ಜಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸಿದ್ದೇವೆ. ಪ್ರತಿಭಾವಂತರು, ಮೂಲಸೌಕರ್ಯ, ಗ್ರಾಹಕರು ಮತ್ತು ಅಧಿಕೃತ ಹೂಡಿಕೆದಾರರನ್ನು ಸುಲಭವಾಗಿ ಸಂಪರ್ಕಿಸಲು ಬೆಂಗಳೂರಿಗೆ ಏಕೆ ಮೊದಲೇ ಬರಲಿಲ್ಲ ಎಂದು ಈಗ ಅನಿಸುತ್ತಿದೆ. ಇಲ್ಲಿನ ಉತ್ತಮ ಹವಾಮಾನ ನಾವು ನಿರೀಕ್ಷಿಸದ ಹೆಚ್ಚುವರಿ ಲಾಭವಾಗಿದೆ. ಪ್ರತಿದಿನ ಹೊಸದನ್ನು ನಿರ್ಮಿಸಲು ಮತ್ತು ಕೆಲಸ ಮಾಡಲು ಇದು ಸಾಕಷ್ಟು ಸಹಾಯ ಮಾಡುತ್ತದೆ ಎಂದೂ ನೆಟ್ಟಿಗರೊಬ್ಬರು ಹೇಳಿದ್ದಾರೆ.
ನೀವು ಹೇಳಿದಂತೆ ಮಾರುಕಟ್ಟೆಗಳಿಗೆ ಮತ್ತು ಹೂಡಿಕೆದಾರರಿಗೆ ಪ್ರವೇಶದ ವಿಷಯದಲ್ಲಿ ಬೆಂಗಳೂರು ಅತ್ಯುತ್ತಮವಾದದ್ದನ್ನು ಒದಗಿಸುತ್ತದೆ ಎಂದು ನಾನು ಒಪ್ಪುತ್ತೇನೆ, ಆದರೆ ಭಾರತದಲ್ಲಿ ಸಮಾನ ಪ್ರವೇಶ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ಹೆಚ್ಚಿನ ನಗರಗಳಿವೆ, ಅದನ್ನು ನಾನು ವೈಯಕ್ತಿಕವಾಗಿ ವಿಶ್ಲೇಷಿಸಿದೆ. ಮತ್ತು ಆ ನಗರವು ನಾಸಿಕ್ ಆಗಿದೆ. ಇಡೀ ದೇಶದಲ್ಲಿ ನಾಸಿಕ್‌ಗಿಂತ ತರಕಾರಿಗಳು, ಹಣ್ಣುಗಳಿಗೆ ಉತ್ತಮ ಪರಿಸರ ವ್ಯವಸ್ಥೆ ಇಲ್ಲ. ಅದನ್ನು ಬೆಂಬಲಿಸಲು ನನ್ನ ಬಳಿ ಕೆಲವು ಡೇಟಾ ಇದೆ ಆದರೆ ಅದು ಬೇರೆ ಕೆಲವು ದಿನಗಳಿಗೆ ಮಾತ್ರ ಎಂದೂ ಮತ್ತೊಬ್ಬರು ಹೇಳಿದ್ದಾರೆ.


Click it and Unblock the Notifications
