Namma Metro: ಹೊಸ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಲೋಪ, ರೈಲಿಗಾಗಿ ಪ್ರಯಾಣಿಕರ ಪರದಾಟ

ಬೆಂಗಳೂರು, ಸೆಪ್ಟಂಬರ್ 23: ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ಉದ್ಘಾಟನೆ ಆಗಿ ಎರಡು ತಿಂಗಳು ಆಗಿಲ್ಲ. ಅದಾಗಲೇ ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಸೋಮವಾರ ಸೆಪ್ಟಂಬರ್ 22ರಂದು ಸಂಜೆ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಮಸ್ಯೆ ಉಂಟಾಗಿ ರೈಲು ನಿಂತಲ್ಲೆ ನಿಂತು ಬಿಟ್ಟಿತ್ತು. ಹೀಗಾಗಿ ಪ್ರಯಾಣಿಕರು ಪರದಾಡಬೇಕಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 10ರಂದು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದ ಬಳಿಕ ದೈನಂದಿನ 70 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮೂರು ರೈಲು ಇದ್ದದ್ದು ಇದೀಗ ನಾಲ್ಕು ರೈಲುಗಳಾಗಿವೆ. ಶೀಘ್ರವೇ ಐದನೇ ರೈಲು ಬರಲಿದೆ. ಈ ಮಧ್ಯೆ ಸೋಮವಾರ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದಾಗಿ ಕೆಲ ಕಾಲ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಆಯಿತು.

Bengaluru Namma Metro Yellow Line Technical Snag Services Hit for 40 Minutes

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸೋಮವಾರ ಸಂಜೆ 7 ಗಂಟೆಯಿಂದ BMRCL ವೇಳಾಪಟ್ಟಿಯಂತೆ ಸಂಚರಿಸಲಿಲ್ಲ. ರೈಲಿನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಜನ ಸಂಚಾರದಲ್ಲಿ ವಿಳಂಬವಾಯಿತು. ಈ ಅನಾನುಕೂಲತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕಾರಿಗಳು ವಿಷಾಧ ವ್ಯಕ್ತಪಡಿಸಿದ್ದಾರೆ. ಶೀಘ್ರೇ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು. ಮತ್ತೊಂದೆಡೆ ಪ್ರಯಾಣಿಕರು ಇತ್ತೀಚೆಗಷ್ಟೆ ಉದ್ಘಾಟನೆ ಆದ ಈ ಹಳದಿ ಮಾರ್ಗದಲ್ಲಿ ಹೀಗಾದರೆ ಹೇಗೆ? ಎಂದು ಮಾತನಾಡಿಕೊಂಡಿದ್ದು ಕಂಡು ಬಂತು.

ಬಿಎಂಆರ್‌ಸಿಎಲ್ ಅಧಿಕಾರಿಗಳು ರಾತ್ರಿ 9 ಗಂಟೆಗೆ ಹೊತ್ತಿಗೆ ತಾಂತ್ರಿಕ ಸಮಸ್ಯೆ ಬಗೆಹರಿಯಬಹುದೆಂದು ತಿಳಿಸಿದ್ದರು. ಸಮಾರು 40 ನಿಮಿಷ ಮೆಟ್ರೋ ಇಲ್ಲದೇ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಯಿತು. ತಾಂತ್ರಿಕ ಸಮಸ್ಯೆ ಉಂಟಾಗಿದ್ದನ್ನು ಖಚಿತಪಡಿಸಿದ ನಮ್ಮ ಮೆಟ್ರೋ ಅಧಿಕಾರಿಗಳು ತಂತ್ರಜ್ಞರ ಜತೆ ನಿಂತು ಸಮಸ್ಯೆ ಬಗೆಹರಿಸಿದರು. ಗಂಟೆಗಳ ಬಳಿಕ ಎಂದಿನಂತೆ ಮೆಟ್ರೋ ಸಂಚಾರ ಶುರುವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದನೇ ರೈಲಿನಿಂದ ಕಾಯುವ ಸಮಯ ಇಳಿಕೆ

ಹಳದಿ ಮಾರ್ಗದಲ್ಲಿ ಮೂರು ರೈಲುಗಳು ಇದ್ದಾಗ ಪ್ರತಿ 25 ನಿಮಿಷಕ್ಕೆ ಒಂದರಂತೆ ರೈಲುಗಳು ಓಡಾಡುತ್ತಿದ್ದವು. ಮೊನ್ನೆಯಷ್ಟೇ ನಾಲ್ಕನೇ ರೈಲಿನ ಆಗಮನದಿಂದ ರೈಲಿನ ಆವರ್ತನ ಸಮಯ 19 ನಿಮಿಷಕ್ಕೆ ಇಳಿಕೆ ಆಯಿತು. ಅಕ್ಟೋಬರ್ ತಿಂಗಳಿನ ಮಧ್ಯಭಾಗಕ್ಕೆ ಐದನೇ ರೈಲು ಸೇವೆಗೆ ನಿಯೋಜನೆಗೊಳ್ಳುವ ನಿರೀಕ್ಷೆ ಇದೆ. ಹಾಗಾದಲ್ಲಿ ರೈಲಿಗೆ ಕಾಯುವ ಸಮಯ 19ರಿಂದ 15 ನಿಮಿಷಕ್ಕೆ ಇಳಿಯಲಿದೆ ಎಂಬ ನಿರೀಕ್ಷೆ ಇದೆ.

ಈ ಮಾರ್ಗದಲ್ಲಿ ನಿತ್ಯ ಬೆಳಗ್ಗೆ 6.30ಕ್ಕೆ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುತ್ತದೆ. ಬೊಮ್ಮಸಂದ್ರ ಮತ್ತು ಆರ್‌.ವಿ.ರಸ್ತೆಯಿಂದ ಮೊದಲ ರೈಲುಗಳು ಹೊರಡುತ್ತವೆ. ಭಾನುವಾರ ಮಾತ್ರ ಬೆಳಗ್ಗೆ 7 ಗಂಟೆಗೆ ಮೆಟ್ರೋ ರೈಲು ಕಾರ್ಯಾಚರಣೆ ಆರಂಭವಾಗುತ್ತದೆ. ನಿತ್ಯ ರಾತ್ರಿ 11.55ಕ್ಕೆ ಆರ್‌ವಿ ರಸ್ತೆಯಿಂ ಕೊನೆಯ ರೈಲು ಹಾಗೂ ಬೊಮ್ಮಸಂದ್ರದಿಂದ ರಾತ್ರಿ 10.42ಕ್ಕೆ ಕೊನೆಯ ರೈಲು ಸಂಚರಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+