Namma Metro: ದರ ಏರಿಕೆ ಮಾಡಿ 1 ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡ ನಮ್ಮ ಮೆಟ್ರೋ

ಬೆಂಗಳೂರು, ಫೆಬ್ರವರಿ 15: ನಮ್ಮ ಮೆಟ್ರೋ ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಯಾಣಿಕರ ಮೆಚ್ಚಿನ ಆಯ್ಕೆಯಾಗಿತ್ತು. ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿಸಲು ಪ್ರತಿನಿತ್ಯ ಲಕ್ಷಾಂತರ ಜನರು ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು. ಕೊಟ್ಟಿರುವ ಟಿಕೆಟ್‌ ದರಕ್ಕೆ ಮೋಸ ಇಲ್ಲದ ಪ್ರಯಾಣ ಎಂದುಕೊಂಡು ಜನರು ನಮ್ಮ ಮೆಟ್ರೋದಲ್ಲೇ ಸಂಚರಿಸುತ್ತಿದ್ದರು.

ಜನ ಹೆಚ್ಚಾದಂತೆ ದರ ಹೆಚ್ಚು ಎನ್ನುವಂತೆ ನಮ್ಮ ಮೆಟ್ರೋ ಸಂಸ್ಥೆ ಕೂಡ ಟಿಕೆಟ್‌ ದರ ಏರಿಕೆ ಮಾಡಿದೆ. ಮೆಟ್ರೋ ಟಿಕೆಟ್‌ ದರ ಏರಿಕೆಯಾಗಲಿದೆ ಎನ್ನುವ ಸುದ್ದಿ ಈ ಮೊದಲೇ ಎಲ್ಲೆಡೆ ಹರಿದಾಡುತ್ತಿತ್ತು. ಈಗಿರುವ ಟಿಕೆಟ್‌ ದರಕ್ಕಿಂತ ಹತ್ತೋ ಇಪ್ಪತ್ತೋ ಶೇಕಡದಷ್ಟು ದರ ಏರಿಕೆ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ದೊಡ್ಡ ಶಾಕ್‌ ಕೊಟ್ಟಿದ್ದು, ಬರೋಬ್ಬರಿ 46%ದಷ್ಟು ದರ ಏರಿಕೆ ಮಾಡಿದೆ.

Bengaluru Namma Metro Ticket Price Increase Causes 100000 Passenger Decline

ಮೆಟ್ರೋ ಟಿಕೆಟ್ ದರ ದುಪ್ಪಟ್ಟು ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ಆಕ್ರೋಶ ಹಾಗೂ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಸಂಸ್ಥೆ ಸದ್ಯ ಟಿಕೆಟ್‌ ದರ ಇಳಿಕೆ ಮಾಡಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್‌ ಸಂಸ್ಥೆ ಕೊನೆಗೂ ಟಿಕೆಟ್‌ ದರ ಇಳಿಕೆ ಮಾಡಿದ್ದು, ನಿನ್ನೆಯಿಂದ ಹೊಸ ದರ ಜಾರಿ ಮಾಡಿದೆ. ದುಪ್ಪಟ್ಟು ದರ ಏರಿಕೆ ಮಾಡಲಾದ ಕೆಲವು ಮಾರ್ಗಗಳಿಗೆ ಹತ್ತು ರೂಪಾಯಿ ದರ ಇಳಿಕೆ ಮಾಡಲಾಗಿದೆ.

ಯಾವಾಗ ಮೆಟ್ರೋ ದರ ದುಪಟ್ಟಾಯ್ತೋ ಜನರು ಕೂಡ ಮೆಟ್ರೋಗೆ ಬಾಯ್‌ ಬಾಯ್‌ ಹೇಳಿ ಮತ್ತೆ ಬಸ್‌ ಹಾಗೂ ಆಟೋ ಕಡೆ ಮುಖ ಮಾಡಿದ್ದರು. ಆದರೂ ಟಿಕೆಟ್‌ ದರ ಇಳಿಕೆಯಾಗಬಹುದು ಎನ್ನುವ ಆಶಾಭಾವನೆ ಪ್ರಯಾಣಿಕರಲ್ಲಿತ್ತು. ಆದರೆ ಬಿಎಂಆರ್ಸಿಎಲ್ ಕೊಂಚ ಅಂದರೆ ಹತ್ತು ರೂಪಾಯಿ ಬೆಲೆ ಇಳಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ ಮೇಲಂತೂ ಜನ ನಮ್ಮ ಮೆಟ್ರೋ ಕಡೆ ತಲೆ ಹಾಕುತ್ತಿಲ್ಲ.

ಹೌದು ದರ ಏರಿಕೆ-ಇಳಿಕೆ ಆಟದಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನೂರಲ್ಲ..ಸಾವಿರವಲ್ಲ.. ಬರೋಬ್ಬರಿ ಒಂದು ಲಕ್ಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಸೋಮವಾರ 8 ಲಕ್ಷದ 28 ಸಾವಿರ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ಮಂಗಳವಾರ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, 7 ಲಕ್ಷದ 78 ಸಾವಿರಕ್ಕೆ ಇಳಿಕೆಯಾಗಿದೆ. ಇನ್ನು ಬುಧವಾರ 7 ಲಕ್ಷದ 62 ಸಾವಿರ ಮಂದಿ ಪ್ರಯಾಣ ಬೆಳೆಸಿದ್ದು, ಗುರುವಾರ 7 ಲಕ್ಷದ 51 ಮಂದಿ ನಮ್ಮ ಮೆಟ್ರೋ ಬಳಸಿದ್ದಾರೆ. ಶುಕ್ರವಾರ ಇನ್ನಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಸರಿ ಸುಮಾರು ಒಂದು ಲಕ್ಷ ಜನರು ಟಿಕೆಟ್‌ ದರ ಏರಿಕೆಯಿಂದ ನಮ್ಮ ಮೆಟ್ರೋ ಬಳಸುವುದನ್ನು ಬಿಟ್ಟು, ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+