Namma Metro Purple Line: ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ

Namma Metro Purple Line: ಬೆಂಗಳೂರು ಜೀನವಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇನ್ನು ನಗರದಲ್ಲಿ ಇದೀಗ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡುತ್ತಿವೆ. ಈ ಪೈಕಿ ನೇರಳೆ ಮೆಟ್ರೋ ಮಾರ್ಗ ಯಾವಾಗ ಆರಂಭವಾಯಿತು? ಎಷ್ಟು ಹಂತಗಳಲ್ಲಿ ನಿರ್ಮಾಣ ಮಾಡಲಾಯಿತು? ಎಷ್ಟು ನಿಲ್ದಾಣಗಳನ್ನು ಒಳಗೊಂಡಿದೆ? ನಿರ್ಮಾಣ ವೆಚ್ಚ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನೇರಳ ಮಾರ್ಗದ ಹಂತ 1 2011ರಲ್ಲಿ 23 ನಿಲ್ದಾಣಗಳನ್ನೊಂದಿಗೆ ಕಾರ್ಯಾಚರಣೆ ಆರಂಭಿಸಿತು. ಇದರಲ್ಲಿ 5 ನಿಲ್ದಾಣಗಳು ಸುರಂಗ ಮಾರ್ಗಗಳಲ್ಲಿ ಇದ್ದು, 17 ಎತ್ತರಿಸಿದ ನಿಲ್ದಾಣಗಳಾಗಿವೆ. ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆ-ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೂ ವಿಸ್ತರಿಸಿದೆ. 25.27 ಕಿಲೋ ಮೀಟರ್ ಉದ್ದವಿದೆ.

Bengaluru Namma Metro Purple Line Complete details

ಹಂತ 1ರ ವಿವರ

* ಉದ್ದ - 25.27 ಕಿಲೋ ಮೀಟರ್
* ನಿಲ್ದಾಣಗಳ ಸಂಖ್ಯೆ - 23

2ನೇ ಹಂತ ಅಕ್ಟೋಬರ್ 9, 2023ರಂದು 14 ನಿಲ್ದಾಣಗಳೊಂದಿಗೆ ಕಾರ್ಯಾರಂಭ ಮಾಡಿತು. ಮೈಸೂರು ರಸ್ತೆಯಿಂದ ಕೆಂಗೇರಿ- ಬೈಯಪ್ಪನಹಳ್ಳಿಯಿಂದ ಕೆಆರ್‌ ಪುರಂ-ಕೆಂಗೇರಿಯಿಂದ ಛಲ್ಲಘಟ್ಟ -ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ.

2ನೇ ಹಂತದ ವಿವರ

* ಉದ್ದ - 17.86 ಕಿಲೋ ಮೀಟರ್
* ನಿಲ್ದಾಣಗಳ ಸಂಖ್ಯೆ - 14

ಸಂಪೂರ್ಣವಾಗಿ ಎರಡು ಹಂತಗಳು ಪೂರ್ಣಗೊಂಡ ಬಳಿಕ ಒಟ್ಟು 37 ನಿಲ್ದಾಣಗಳಾಗಿದ್ದು, 43.49 ಕಿಲೋ ಮೀಟರ್ ಉದ್ದ ಆಗಿದೆ.

ನೇರಳೆ ಮಾರ್ಗದ ಒಟ್ಟು ನಿಲ್ದಾಣಗಳ ಪಟ್ಟಿ

* ವೈಟ್‌ ಫೀಲ್ಡ್‌
* ಚನ್ನಸಂದ್ರ
* ಕಾಡುಕೋಡಿ ಟ್ರೀ ಪಾರ್ಕ್‌
* ಪಟ್ಟಂದೂರು ಅಗ್ರಹಾರ
* ಶ್ರೀ ಸತ್ಯ ಸಾಯಿ ಆಸ್ಪತ್ರೆ
* ನಲ್ಲೂರು ಹಳ್ಳಿ
* ಕುಂದಲ ಹಳ್ಳಿ
* ಸೀತಾರಾಮ ಪಾಳ್ಯ
* ಹೂಡಿ ಜಂಕ್ಷನ್
* ಗರುಡಾಚಾರ್ ಪಾಳ್ಯ
* ಸಿಂಗಯ್ಯನಪಾಳ್ಯ
* ಕೆಆರ್‌ ಪುರಂ
* ಬೆನ್ನಿಗಾನಹಳ್ಳಿ
* ಬೈಯಪ್ಪನಹಳ್ಳಿ
* ಸ್ವಾಮಿ ವಿವೇಕಾನಂದ ರಸ್ತೆ
* ಇಂದಿರಾನಗರ
* ಹಲಸೂರು
* ಟ್ರಿನಿಟಿ
* ಮಹಾತ್ಮಾ ಗಾಂಧಿ ರಸ್ತೆ
* ಕಬ್ಬನ್‌ ಪಾರ್ಕ್‌
* ಡಾ.ಬಿ.ಆರ್‌.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ
* ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
* ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
* ಮಾಗಡಿ ರಸ್ತೆ
* ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ
* ಅತ್ತಿಗುಪ್ಪೆ
* ವಿಜಯನಗರ
* ದೀಪಾಂಜಲಿ ನಗರ
* ಮೈಸೂರು ರಸ್ತೆ
* ನಾಯಂಡಹಳ್ಳಿ
* ರಾಜರಾಜೇಶ್ವರಿ ನಗರ
* ಜ್ಞಾನಭಾರತಿ
* ಪಟ್ಟಣಗೆರೆ
* ಕೆಂಗೇರಿ ಬಸ್‌ ಟರ್ಮಿನಲ್
* ಕೆಂಗೇರಿ
* ಚಲ್ಲಘಟ್ಟ

ನೇರಳ ಮಾರ್ಗದ ಇಂಟರ್‌ಚೇಂಜ್‌ ನಿಲ್ದಾಣಗಳು

* ವೈಟ್‌ ಫೀಲ್ಡ್‌
* ನಲ್ಲೂರಹಳ್ಳಿ
* ಕೆಆರ್ ಪುರಂ
* ಬೆನ್ನಿಗಾನಹಳ್ಳಿ
* ಬೈಯಪ್ಪನಹಳ್ಳಿ
* ಮಹಾತ್ಮ ಗಾಂಧಿ ರಸ್ತೆ
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
* ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ
* ಬಾಲಗಂಗಾಧರನಾಥ ಸ್ವಾಮೀಜಿ, ಹೊಸಹಳ್ಳಿ
* ಅತ್ತಿಗುಪ್ಪೆ
* ಮೈಸೂರು ರಸ್ತೆ
* ಜ್ಞಾನಭಾರತಿ
* ಕೆಂಗೇರಿ ಬಸ್‌ ಟರ್ಮಿನಲ್

ವೈಟ್‌ಪೀಲ್ಡ್‌-ಕೆಆರ್‌ ಪುರಂ: ಈ ಕಾರಿಡಾರ್‌ ನಡುವೆ ಮಾರ್ಚ್‌ 25, 2023ರಿಂದ ಮೆಟ್ರೋ ಸಂಚಾರ ಆರಂಭಿಸಿದ್ದು, ಮರುದಿನ ಅಂದರೆ ಮಾರ್ಚ್‌ 26ರಂದು ಸಾರ್ವಜನಿಕರ ಕಾರ್ಯಾಚರಣೆ ಆರಂಭಿಸಿತು. ಇನ್ನೂ

ವೈಟ್‌ಪೀಲ್ಡ್‌-ಕೆಆರ್‌ ಪುರಂ ನಡುವೆ ಕಾರಿಡಾರ್ 12 ನಿಲ್ದಾಣಗಳಿವೆ. 13 ಕಿಲೋ ಮೀಟರ್ ಉದ್ದ ಇದ್ದು, ಇದರ ನಿರ್ಮಾಣದ ಅಂದಾಜು ವೆಚ್ಚ 4,500 ಕೋಟಿ ರೂಪಾಯಿ ಆಗಿದೆ ಎನ್ನುವ ಮಾಹಿತಿ ಇದೆ. ಇನ್ನೂ ಈ ಕಾರಿಡಾರ್ ಪ್ರತಿನಿತ್ಯ ಅಂದಾಜು 1.2 ಲಕ್ಷ ಜನ ಪ್ರಯಾಣ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ವೈಟ್‌ಪೀಲ್ಡ್‌-ಕೆಆರ್‌ ಪುರಂ ಮೆಟ್ರೋ ನಿಲ್ದಾಣಗಳು

1. ವೈಟ್‌ಫೀಲ್ಡ್‌
2. ಚನ್ನಸಂದ್ರ
3. ಕಾಡುಗೋಡಿ (ಟ್ರೀ ಪಾರ್ಕ್‌)
4. ಪಟ್ಟಂದೂರು ಅಗ್ರಹಾರ
5. ಶ್ರೀ ಸತ್ಯ ಸಾಯಿ ಆಸ್ಪತ್ರೆ ನಲ್ಲೂರಹಳ್ಳಿ
6. ನಲ್ಲೂರಹಳ್ಳಿ
7. ಕುಂದಲಹಳ್ಳಿ
8. ಸೀತಾರಾಮ ಪಾಳ್ಯ
9. ಹೂಡಿ ಜಂಕ್ಷನ್
10. ಗರುಚಾರ್‌ಪಾಳ್ಯ
11. ಮಹದೇವಪುರ (ಸಿಂಗಯ್ಯನಪಾಳ್ಯ)
12. ಕೆ.ಆರ್‌.ಪುರಂ

ರೈಲು ಸಂಚಾರ ಸಮಯಗಳ ವಿವರಗಳು

* ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಪಟ್ಟಂದೂರು ಅಗ್ರಹಾರಕ್ಕೆ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿದೆ.
* ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಎಂಜಿ ರಸ್ತೆ ನಡುವೆ ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ.
* ಮೈಸೂರು ರಸ್ತೆಯಿಂದ ಚಲ್ಲಘಟ್ಟದ ನಡುವೆ ಪ್ರತಿ 10 ನಿಮಿಕ್ಕೊಂದು ರೈಲು ಕಾರ್ಷಾಚರಣೆ.
* ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೊನೆಯ ರೈಲು ರಾತ್ರಿ 10.45ಕ್ಕೆ ಹೊರಡಿಲಿದೆ.
* ಪ್ರತಿ ಭಾನುವಾರ ರೈಲುಗಳು ಬೆಳಗ್ಗೆ 7ರಿಂದ ರಾತ್ರಿ 10:40ರ ವರೆಗೆ ಕಾರ್ಯನಿರ್ವಹಿಸುತ್ತವೆ. ಈ ರೈಲುಗಳು ಸಾಮಾನ್ಯವಾಗಿ 8-10 ನಿಮಿಷಗಳ ಅಂತರದಲ್ಲಿ ಸಮಯವನ್ನು ಹೊಂದಿರುತ್ತವೆ.

ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪರ್ಕದ ವಿವರ

* ಟೋಲ್‌ಫ್ರೀ ಸಹಾಯವಾಣಿ-1800-425-12345
* ಸಂಪರ್ಕ ಸಂಖ್ಯೆ: 080-22969200 ಅಥವಾ 080-22969400
* ಇಮೇಲ್‌ ವಿಳಾಸ: [email protected] ಅಥವಾ [email protected]
* ವಾಟ್ಸಾಪ್ ಚಾಟ್‌ ಸಂಖ್ಯೆ: 8105556677

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+