Namma Metro Purple Line: ಹೊಸ ವರ್ಷಕ್ಕೆ ಹೊಸ ರೈಲುಗಳ ಆಗಮನ, ದಟ್ಟಣೆಗೆ ಮುಕ್ತಿ..

ಬೆಂಗಳೂರು, ಡಿಸೆಂಬರ್ 20: ಬೆಂಗಳೂರು ನಮ್ಮ ಮೆಟ್ರೋ ಭವಿಷ್ಯದ ಯೋಜನೆಗಳು, ಮಾರ್ಗಕ್ಕಾಗಿ ಚೀನಾ ಕಂಪನಿ ಜೊತೆಗೆ 216 ಬೋಗಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಹೊಸ ಹೊಸ ಮಾದರಿಯ, ಡ್ರೈವರ್‌ಲೆಸ್ ರೈಲುಗಳು ಇದರಲ್ಲಿವೆ. ಹಳಿದ ಮಾರ್ಗಕ್ಕೆ ಹೊಸ ರೈಲು ಬರುವ ಮೊದಲೇ ಹಾಲಿ ನೇರಳೆ ಮಾರ್ಗದಲ್ಲಿನ ಹೆಚ್ಚುವರಿ ರೈಲುಗಳನ್ನು ಅಗತ್ಯಕ್ಕೆ ತಕ್ಕಂತೆ ಓಡಿಸಲು ಮತ್ತಷ್ಟು ರೈಲುಗಳು ಹೊಸ ವರ್ಷಕ್ಕೆ ಬರುತ್ತಿವೆ. ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದೆ.

ಬೆಂಗಳೂರು ಮಟ್ರೋ ರೈಲು ನಿಗಮ (BMRCL) ಒಟ್ಟು ಸುಮಾರು 50ಕ್ಕೂ ಹೆಚ್ವಚು ರೈಲು ಹೊಂದಿದ್ದು, ನೇರಳೆ ಮಾರ್ಗದಲ್ಲಿ ಅಧಿಕ ರೈಲುಗಳನ್ನು ಓಡಿಸುತ್ತಿದೆ. ಹೀಗಿದ್ದರೂ ಇಲ್ಲಿ ಸಂಚಾರ ದಟ್ಟಣೆ, ದೈನಂದಿನ ಪ್ರಯಾಣಿಕರ ಸಂಖ್ಯೆ 9.20ಲಕ್ಷಕ್ಕೆ ತಲುಪಿದೆ.

Bengaluru Namma Metro Prototype Rail will Arrival for Purple line on January 10 from China CRRC

ಹೀಗಾಗಿ ಒಪ್ಪಂದಂತೆ ಹೊಸ ಪ್ರೊಟೋ ಟೈಪ್ ರೈಲುಗಳು ಇದೇ ಜನವರಿಗೆ ಪೂರೈಕೆ ಆಗುತ್ತಿವೆ. ಚೀನಾದ ಸಿಆರ್‌ಆರ್‌ಸಿಯಿಂದ ಬೆಂಗಳೂರು ಮೆಟ್ರೋದ ಡಿಜಿಟಿ 'ಪರ್ಪಲ್ ಲೈನ್' ಪ್ರೊಟೊಟೈಪ್ ರೈಲು ವರ್ಷಾಂತ್ಯದ ವೇಳೆಗೆ ಚೆನ್ನೈ ಬಂದರನ್ನು ತಲುಪಲಿದೆ. 2025ರ ಜನವರಿ 10ರೊಳಗೆ ಬೆಂಗಳೂರಿನ ಪೀಣ್ಯ ಡಿಪೋಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ.

ಇನ್ನೂ ಇದೇ ವೇಳೆ ಆರ್‌ವಿ. ರಸ್ತೆ ಮತ್ತು ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗಾಗಿ ಟಿಆರ್‌ಎಸ್‌ಎಲ್‌ನಿಂದ 'ಹಳದಿ ಲೈನ್‌'ಗೆ ಮೊದಲ CBTC ರೈಲು ಸೆಟ್ 2025ರ ಜನವರಿ 15 ರೊಳಗೆ ಹೆಬ್ಬಗೋಡಿ ಡಿಪೋಗೆ ಆಗಮಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ಬರುವ ಈ ರೈಲುಗಳು ಪರೀಕ್ಷೆಗೆ ಒಳಪಡಬೇಕಿದೆ. ಬಳಿಕವೇ ಅವುಗಳನ್ನು ಹಾಲಿ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ, ನಮ್ಮ ಮೆಟ್ರೋ ಜಾಲ ಮಾದಾವರವರೆಗೂ ಮತ್ತೆ ಮೂರುವರೆ ಕಿಲೋ ಮೀಟರ್ ವಿಸ್ತರಣೆ ಆಗಿದೆ. ಈ ಮಾರ್ಗದಲ್ಲಿ ಹೊಸ ರೈಲು ಓಡಿಸಬಹುದು. ಇದರಿಂದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಹೊಸ ಮೆಟ್ರೋ ರೈಲುಗಲು ಕೊಡುಗೆ ನೀಡಬಹುದು.

ಮೆಟ್ರೋ ಜಾಲ ವಿಸ್ತರಣೆ, ರೈಲು ಅಗತ್ಯತೆ

ಬಿಡದಿ, ಹೊಸಕೋಟೆ, ನೆಲಮಂಗಲವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಮಡಿದೆ. ಈ ಕುರಿತು ಈಗಾಗಲೇ ಕೆಲವು ಭಾರಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಹಳದಿ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗಲು ಸಜ್ಜಾಗಿದೆ. ಇನ್ನೂ ವೈಟ್‌ಫಿಲ್ಡ್ ಕಡೆಗೆ ಹೋಗುವವರು ಸೇರಿದಂತೆ ನೇರಳೆ ಮಾರ್ಗ ಬಳುಸವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೆಟ್ರೋ ರೈಲು ಮತ್ತು ನಿಲ್ದಾಣಗಳು ಪೀಕ್ ಸಮಯದಲ್ಲಿ ತುಂಬಿ ತುಳುಕುತ್ತಿರುತ್ತವೆ. ಈ ಹಿಂದೆ ಮೆಟ್ರೋ ಬೋಗಿಗಳ ಕೊರತೆ ಇದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆಲ್ಲ ಮುಕ್ತ ನೀಡಲು ಜನವರಿಗೆ ಮೆಟ್ರೋ ಪ್ರೊಟೋ ಟೈಪ್ ರೈಲುಗಳು ಬರಲಿವೆ.

ಹಳದಿ ಮಾರ್ಗಕ್ಕೂ ಹೊಸ ರೈಲುಗಳ ಆಗಮನ

ಮತ್ತೊಂದೆಡೆ ನಮ್ಮ ಮೆಟ್ರೋ ಹಳದಿ ಮಾರ್ಗ ರೈಲುಗಳು ಸಹ ಇದೇ ಜನವರಿಗೆ ಬರಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿಡಿ ನೀಡಿದ್ದಾರೆ. ಮತ್ತೊಂದು ಸೆಟ್ ರೈಲು ಬರುತ್ತಿದ್ದಂತೆ ಈ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+