Namma Metro: ಹಳದಿ ಮಾರ್ಗ ಮಾತ್ರವಲ್ಲ, ನೀಲಿ & ಗುಲಾಬಿ ಮಾರ್ಗ ಸಹ ವಿಳಂಬ..

ಬೆಂಗಳೂರು, ಜೂನ್ 17: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳು ನಗರದ ವಿವಿಧೆಡೆ ಪ್ರಗತಿಯಲ್ಲಿವೆ. ಈ ಪೈಕಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ಹಂತ -2ರ ಯೋಜನೆಗಳ ಕೆಲಸಗಲು ನಿಧಾನವಾಗುತ್ತಿವೆ. ನಿರ್ಮಾಣವಾಗಿ ತಲೆ ಎತ್ತಿರುವ ಹಳದಿ ಮೆಟ್ರೋ ಮಾರ್ಗ ತೆರೆಯುವುದು ನಿಧಾನವಾಗುತ್ತಿದೆ ಎಂಬುದು ಮಾತ್ರವೇ ಗೊತ್ತಾಗಿತ್ತು. ಇದೀಗ ಮೆಟ್ರೋ ಗುಲಾಬಿ ಮಾರ್ಗ ಹಾಗೂ ನೀಲಿ ಮಾರ್ಗವು ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಇವೆ.

ನಮ್ಮ ಮೆಟ್ರೋ ಹಂತದ-2 ಯೋಜನೆಗಳು ಸಾಲು ಸಾಲು ವಿಳಂಬ ಎದುರಿಸುತ್ತಿವೆ. ಹೊಸ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆಗಳು, ಮರಗಳನ್ನು ಕತ್ತರಿಸುವಾಗ ಎದರಾಗುತ್ತಿರುವ ಅಡ್ಡಿ ಆತಂಕ, ಅನುಮತಿ ದೊರೆಯುವುದು ತಡವಾಗುತ್ತಿರುವುದು. ರೈಲುಗಳ ಕೊರತೆ ಉಂಟಾಗಿರುವುದು. ತಾಂತ್ರಿಕ ಮತ್ತು ಕಾನೂನು ಸಮಸ್ಯೆಗಳು ಎದುರಾಗಿದ್ದರಿಂದ ಯೋಜನೆಗಳು ಸಾರ್ವಜನಿಕಗೊಳ್ಳುವುದು ತಡವಾಗುತ್ತಿವೆ. ಇದರಲ್ಲಿ ಮೊದಲನೆಯದ್ದು 18.82 ಕಿ.ಮೀ.ಯನಮ್ಮ ಮೆಟ್ರೋ 'ಹಳದಿ ಮಾರ್ಗ'.

Bengaluru Namma Metro Phase 2 Delays Yellow Pink amp amp Blue Line Updates Commuter Concerns

ಹೌದು, ಆರ್‌ವಿ-ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವು ನಿರ್ಮಾಣವಾಗಿ ವರ್ಷ ಕಳೆದರೂ ರೈಲುಗಳ ಕೊರತೆ ಎದುರಿಸುತ್ತಿದೆ. ಸದ್ಯ ಮೂರನೇ ರೈಲಿನಲ್ಲಿ ಮೂರು ಬೋಗಿಗಳು ಬಂದಿವೆ. ಸುಮಾರು 08 ರೈಲು ಸೆಟ್‌ನಿಂದ ರೈಲು ಕಾರ್ಯಾಚರಣೆ ಆರಂಭಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ವಿಳಂಬವು ಪ್ರಯಾಣಿಕರ ನಿರೀಕ್ಷೆ ಹುಸಿ ಮಾಡಿದೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗ: Namma Metro Pink Line Project

ನಮ್ಮ ಮೆಟ್ರೋ ಈ 'ಗುಲಾಬಿ ಮಾರ್ಗ'ವು (ಕಾಳೇನ ಅಗ್ರಹಾರ-ನಾಗವಾರ) 21.26 ಕಿಲೋಮೀಟರ್ ಇದ್ದು. ಈ ಇದು 2026 ಸೆಪ್ಟಂಬರ್ ಹೊತ್ತಿಗೆ ಪೂರ್ಣಗೊಳಿಸುವ ಗುಡುಗು ಇತ್ತು. ಇದೀಗ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಕಾಣುತ್ತಿವೆ. ಇದು ಉತ್ತರ ಮತ್ತು ದಕ್ಷಿಣ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೆಟ್ರೋ ಲೈನ್ ಆಗಿದೆ.

'ಗುಲಾಬಿ ಮಾರ್ಗ'ದಲ್ಲಿ ಸುರಂಗ ಮಾರ್ಗದ ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ. ಭೂಗತ ನಿಲ್ದಾಣದ ಕೆಲಸದಲ್ಲಿ ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಹಳಿ ಹಾಕುವುದು ಕಾರ್ಯಗಳು ನಡೆಯುತ್ತಿದೆ. ಇಷ್ಟೆಲ್ಲ ಪ್ರಗತಿಯ ಹೊರತಾಗಿಯೂ, ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸ ಇಲ್ಲದಂತಾಗಿದೆ. ಏಕೆಂದರೆ ಈ ಮೇಲೆ ತಿಳಿಸಿದ ಇಂಥದ್ದೆ ಸಮಸ್ಯೆಗಳು ಎದುರಾಗಿವೆ. ಹೀಗಾಗಿ ಮೆಟ್ರೋ ನಿಲ್ದಾಣ ನಿರ್ಮಾಣ, ಇತರ ಬಾಕಿ ಕೆಲಸಗಳು ಕೊಂಚ ತಡವಾಗಲಿವೆ ಎಂದು ಹೇಳಲಾಗುತ್ತಿದೆ.

ನಮ್ಮ ಮೆಟ್ರೋ ನೀಲಿ ಮಾರ್ಗ ಯೋಜನೆ: Metro Blue Line

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರಂ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ 'ನೀಲಿ ಮಾರ್ಗ' (Namma metro blue line project update) ಕೆಲಸಗಳು ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಇಲ್ಲ. ಆರಂಭದಲ್ಲಿ ಈ ಮೆಟ್ರೋ ಮಾರ್ಗದ ಕಾಮಗಾರಿ ವೇಗವಾಗಿತ್ತು. ಸದ್ಯ ಪಿಲ್ಲರ್‌ಗಳು ಮತ್ತು ವಯಾಡಕ್ಟ್‌ಗಳನ್ನು ನಿರ್ಮಿಸಲಾಗಿದ್ದು, ನಂತರದ ಕೆಲಸಗಳು ತಡವಾಗುತ್ತಿವೆ.

ಸದ್ಯ 'ನೀಲಿ ಮಾರ್ಗ'ವು ಯೋಜನೆ ಪೂರ್ಣಗೊಳ್ಳಲು ಜೂನ್ 2026ರ ಗಡುವು ಮೊದಲಿತ್ತು. ಈಗ ಆ ಗಡುವು 2027ಕ್ಕೆ ಮುಂದೂಡಿಕೆ ಆಗಲಿದೆ. ನಮ್ಮ ಮೆಟ್ರೋ ಹಂತ 2ರ ಅಡಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೇವಲ 75.09 ಕಿಲೋ ಮೀಟರ್ ಅಭಿವೃದ್ಧಿಪಡಿಸುತ್ತಿದೆ. ಅಧಿಕಾರಿಗಳು ಮೆಟ್ರೋ ಹೊಸ ಮಾರ್ಗ ನಿರ್ಮಾಣಕ್ಕೆ ವೇಗ ನೀಡಬೇಕಿದೆ. ಜೊತೆಗೆ ಹೊಸ ರೈಲುಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

BMRCLಗೆ ಪ್ರಯಾಣಿಕರ ಆಗ್ರಹವೇನು?

ಹೊಸ ರೈಲುಗಳು ಬೆಂಗಳೂರಿಗೆ ಬರದಿದ್ದರೆ, ಹೊಸ ಮಾರ್ಗ ನಿರ್ಮಾಣಗೊಂಡರೂ ಸಹಿತ ಕಾರ್ಯಾಚರಣೆ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಬಿಎಂಆರ್‌ಸಿಎಲ್ ಕಾನೂನು ವಿವಾದಗಳು, ನಿಧಾನಗತಿಯ ಸಂಗ್ರಹಣೆ ಮತ್ತು ಅನುಮತಿ ವಿಳಂಬದಂತಹ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯ ಪ್ರವೃತ್ತರಾಗಬೇಕು. ನಿಗದಿತ ಕಾಲಮಿತಿಯೊಳಗೆ ಸೇವೆಗೆ ಮೆಟ್ರೋ ಮಾರ್ಗವನ್ನು ಅಣಿಗೊಳಿಸುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+