Namma Metro: ಬಜೆಟ್‌ನಲ್ಲಿ ಸಿಕ್ಕ 2500 ಕೋಟಿ ಅನುದಾನದಿಂದ 40 ಕಿಮೀ ಮೆಟ್ರೋ ಜಾಲ ಕಾರ್ಯಗತ
ಕರ್ನಾಟಕ ರಾಜ್ಯ ಬಜೆಟ್ 2023-24 ನಲ್ಲಿ ರಾಜ್ಯ ಸರ್ಕಾರವು ಬೆಂಗಳೂರು 'ನಮ್ಮ ಮೆಟ್ರೋ'ಗೆ ಹಾಲಿ ಯೋಜನೆಗಳಿಗಾಗಿ ಭಾರಿ ಮೊತ್ತದ ಅನುದಾನ ಮೀಸಲಿಡುವುದಾಗಿ ಘೋಷಿಸಿದೆ.
ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಬಜೆಟ್ 2023-24 ನಲ್ಲಿ ರಾಜ್ಯ ಸರ್ಕಾರವು ಬೆಂಗಳೂರು 'ನಮ್ಮ ಮೆಟ್ರೋ'ಗೆ ಹಾಲಿ ಯೋಜನೆಗಳಿಗಾಗಿ ಭಾರಿ ಮೊತ್ತದ ಅನುದಾನ ಮೀಸಲಿಡುವುದಾಗಿ ಘೋಷಿಸಿದೆ.
ಕರ್ನಾಟಕ ರಾಜ್ಯ ಬಜೆಟ್ 2023-24 ಅನ್ನು ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿಗಾಗಿ ಒಂದಷ್ಟು ಅಭಿವೃದ್ಧಿ ಯೋಜನೆ ಘೋಷಿಸಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಇರುವ ನಮ್ಮ ಮೆಟ್ರೋ ಹಾಲಿ ಯೋಜನೆಗಳಿಗೆ ಒಟ್ಟು 2,500 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಅವರು ತಿಳಿಸಿದ್ದಾರೆ.

ಇಷ್ಟು ಮೊತ್ತದ ಹಣದಲ್ಲಿ ಈಗಾಗಲೇ ನಡೆಯುತ್ತಿರುವ 40.15 ಕಿಮೀ ಮೆಟ್ರೋ ಮಾರ್ಗವನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಯಗತಗೊಳಿಸಲಿದೆ.
ನಿಗಮದ ಯೋಜನೆಗಳೀಗೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಹಣ ನೀಡಲಾಗುತ್ತದೆ. ಇವೆರಡರ ಬಜೆಟ್‌ನಲ್ಲಿ ನಾವು 5,936 ಕೋಟಿ ರೂಪಾಯಿಗಳನ್ನು ಪಡೆದಿದ್ದೇವೆ. ರಾಜ್ಯ ಮಂಡಿಸಿದ ಈ ಸಾಲಿನ ಆಯವ್ಯದಲ್ಲಿ ನಮಗೆ ಅಂದಾಜು 2,500 ಕೋಟಿ ರೂಪಾಯಿ ಸಿಗಲಿದೆ ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರ ಘೋಷಿಸಿದ ಇಷ್ಟು ಅನುದಾನವನ್ನು ಈ ವರ್ಷ ಕಾರ್ಯಾರಂಭ ಆಗಲಿರುವ ಸುಮಾರು 40 ಕಿಲೋ ಮೀಟರ್ ಮೆಟ್ರೋ ಮಾರ್ಗಗಳಿಗಾಗಿ ಬಳಸಿಕೊಳ್ಳಲಾಗುವುದು. ಈಗಾಗಲೇ ಬಿಎಂಆರ್‌ಸಿಎಲ್ ಹತ್ತಿರ ಸುಮಾರು 6,000 ಕೋಟಿ ರೂಪಾಯಿ ನಿಧಿ ಇದೆ. ಇದು ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸಾಕಾಗುತ್ತದೆ ಎಂದು ಹೇಳಿದರು.

56 ಕೀಮೀ. ವ್ಯಾಪ್ತಿಯಲ್ಲಿ ಮೆಟ್ರೋ ಸೇವೆ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಮ್ಮ ಮೆಟ್ರೋ ಸದ್ಯ 56 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿದೆ. ಮುಂದಿನ ವರ್ಷದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಲೈನ್, ಕೆಂಗೇರಿಯಿಂದ ಚಲ್ಲಘಟ್ಟ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮತ್ತು ನಾಗಸಂದ್ರದಿಂದ ಬಿಐಇಸಿವರೆಗೆ ಸೇವೆ ವಿಸ್ತರಿಸಲು, ಕಾರ್ಯಾರಂಭಗೊಳಿಸಲು ನಿರ್ಧರಿಸದ್ದೇವೆ ಎಂದು ಹೇಳಿದರು.
ಪ್ರಸ್ತುತ ಆಯವ್ಯಯದಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗ ಬಗ್ಗೆ ಪ್ರಸ್ತಾಪಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ 58.19 ಕಿಲೋ ಮೀಟರ್ ಕೆಐಎಗೆ ಸಂಪರ್ಕ ಕಲ್ಪಿಸಲಾಗುವುದು. ಈ ಮಾರ್ಗದಲ್ಲಿ ರೈಲು ಯೋಜನೆಯ ಕಾಮಗಾರಿಗಳು 30 ನಿಲ್ದಾಣಗಳ ತಲೆ ಎತ್ತಲಿದ್ದು, ನಿರ್ಮಾಣ ಕೆಲಸ ನಡೆಯುತ್ತಿದೆ. ಒಟ್ಟು ಅಂದಾಜು 16,328 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಹಂತ 3ರ ಯೋಜನೆಯು 44.65 ಕಿಮೀ ಉದ್ದದ ಎರಡು ಕಾರಿಡಾರ್ ಒಳಗೊಂಡಿದೆ ಎಂದು ಅಂಜುಮ್ ಪರ್ವೇಜ್ ವಿವರಿಸಿದರು.












Click it and Unblock the Notifications