Namma Metro Green Line: ನಮ್ಮ ಮೆಟ್ರೋ ಹಸಿರು ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ
Namma Metro Green Line: ಬೆಂಗಳೂರು ಜೀನವಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಈ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆರಂಭವಾಯಿತು? ಎಷ್ಟು ಹಂತಗಳಲ್ಲಿ ನಿರ್ಮಾಣ ಮಾಡಲಾಯಿತು? ಎಷ್ಟು ನಿಲ್ದಾಣಗಳನ್ನು ಒಳಗೊಂಡಿದೆ? ನಿರ್ಮಾಣ ವೆಚ್ಚ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ನಮ್ಮ ಮೆಟ್ರೋ ಹಸರು ಮಾರ್ಗ ಮಾರ್ಚ್, 1, 2014ರಂದು ಉದ್ಘಾಟನೆ ಆಗಿದ್ದು, ಇದು ನಾಗಸಂದ್ರದಿಂದ ಸಿಲ್ಕ್ ಇನ್ಸ್‌ಟ್ಯೂಟ್ ವರೆಗೂ ವಸ್ತರಿಸಿದೆ. ಈ ಮಾರ್ಗವು 29 ನಿಲ್ದಾಣಗಳನ್ನು ಹೊಂದಿದ್ದು, 33.5 ಕಿಲೋ ಮೀಟರ್‌ವರೆಗೂ ವಿಸ್ತರಿಸಿದೆ.

ಇನ್ನು ಈ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5ರಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ಸಂಚಾರ ನಡೆಸುತ್ತವೆ. ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 11.35ರ ವರೆಗೆ ಮೆಟ್ರೋ ಕಾರ್ಯನಿರ್ವಹಿಸಲಿದೆ. ಇದೀಗ ಸಮಯದಲ್ಲಿ ಸ್ವಲ್ಪ ಬದಲಾಣೆ ಆಗಿದ್ದು, ಸೋಮವಾರ ಬೆಳಗ್ಗೆ ಮಾತ್ರ ಅತೀ ಬೇಗನೆ ಮೆಟ್ರೋ ಸಂಚಾರ ಮಾಡುತ್ತಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ನಿಲ್ದಾಣಗಳು
* ಮಾದವರ
* ಚಿಕ್ಕಬಿದಕಲ್ಲು
* ಮಂಜುನಾಥನಗರ
* ನಾಗಸಂದ್ರ
* ದಾಸರಹಳ್ಳಿ
* ಜಾಲಹಳ್ಳಿ
* ಪೀಣ್ಯ ಇಂಡಸ್ಟ್ರೀ
* ಪೀಣ್ಯ
* ಗೋರಗುಂಟನಪಾಳ್ಯ
* ಯಶವಂತಪುರ
* ಸ್ಯಾಂಡಲ್ ಸೋಪ್ ಫ್ಯಾಕ್ಟರಿ
* ಮಹಾಲಕ್ಷ್ಮಿ
* ರಾಜಾಜಿ ನಗರ
* ಮಹಾಕವಿ ಕುವೆಂಪು ರಸ್ತೆ
* ಶ್ರೀರಾಂಪುರ
* ಸಂಪಿಗೆ ರಸ್ತೆ
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
* ಚಿಕ್ಕಪೇಟೆ
* ಕೆಆರ್ ಮಾರ್ಕೆಟ್
* ನ್ಯಾಷನಲ್ ಕಾಲೇಜು
* ಲಾಲ್‌ಬಾಗ್
* ಸೌತ್ ಎಂಡ್ ಸರ್ಕಲ್
* ರಾಷ್ಟ್ರೀಯ ವಿದ್ಯಾಲಯ ರಸ್ತೆ
* ಬನಶಂಕರಿ
* ಜೆಪಿ ನಗರ
* ಯಲಚೇನಹಳ್ಳಿ
* ದೊಡ್ಡಕಲ್ಲಸಂದ್ರ
* ಕೋಣನಕುಂಟೆ ಕ್ರಾಸ್
* ವಾಜರಹಳ್ಳಿ
* ತಲಘಟ್ಟಪುರ
* ಸಿಲ್ಕ್ ಇನ್‌ಸ್ಟೀಟ್ಯೂಟ್
ಎಲ್ಲಿಂದ ಎಲ್ಲಿಯವರೆಗೂ ಎಷ್ಟು ಕಿ.ಮೀಟರ್
1. ಜೆಪಿ ಪಾರ್ಕ್‌ನಿಂದ ಯಶವಂತಪುರ ಮೆಟ್ರೋ ನಿಲ್ದಾಣ: 2.4 ಕಿಲೋ ಮೀಟರ್
2. ಓರಾಯನ್ ಮಾಲ್ - ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣ: 0.9 ಕಿ.ಮೀ.
3. ಇಸ್ಕಾನ್ ಟೆಂಪಲ್ - ಮಹಾಲಾಕ್ಷ್ಮಿ ಮೆಟ್ರೋ ನಿಲ್ದಾಣ: 0.5 ಕಿ.ಮೀ.
4. ಮಂತ್ರಿ ಮಾಲ್-ಸಂಪಿಗೆ ರಸ್ತೆ
5. ಕರ್ನಾಟಕ ಚಿತ್ರಕಲಾ ಪರಿಷರ್-ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ: 2.1 ಕಿ.ಮೀ.
6. ಕಬ್ಬನ್ ಪಾರ್ಕ್- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ: 3.2 ಕಿ.ಮೀ.
7. ಎಂ ಚಿನ್ನಸ್ವಾಮಿ ಕ್ರೀಡಾಂಗಣ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ: 3.5 ಕಿ.ಮೀ.
8. ವಿಶ್ಮೇಶ್ವರಯ್ಯ ಕೈಗಾರಿಕಾ & ತಂತ್ರಜ್ಞಾನ ಮ್ಯೂಸಿಯಂ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ: 3.3 ಕಿ.ಮೀ.
9. ಜವಹಾರ್‌ಲಾಲ್ ನೆಹರು ಪ್ಲಾನೇಟೇರಿಯಂ-ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ: 3.2 ಕಿ.ಮೀ.
10. ಲಾಲ್‌ಬಾಗ್- ಲಾಲ್‌ಬಾಗ್ ಮೆಟ್ರೋ ನಿಲ್ದಾಣ












Click it and Unblock the Notifications