Bengaluru Metro: ಗುಲಾಬಿ ಮಾರ್ಗ 2026ಕ್ಕೆ ಓಪನ್: ಮೆಟ್ರೋ ರೆಡ್‌ ಲೈನ್, ನೀಲಿ ಮಾರ್ಗದ ಕಾಮಗಾರಿ ಅಪ್ಡೇಟ್ಸ್

Namma Metro Projects updates: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವರ್ಷದಿಂದ ವರ್ಷಕ್ಕೆ ವಿಸ್ತರಣೆಗೊಳ್ಳುತ್ತಲೇ ಇದೆ. ಮೊನ್ನೆಯಷ್ಟೇ 19 ಕಿಮೀ ಹಳದಿ ಮಾರ್ಗ ತೆರೆಯಲಾಗಿದೆ. ಬೇರೆ ಬೇರೆ ದಿಕ್ಕುಗಳಲ್ಲಿ ಸಿದ್ಧವಾಗುತ್ತಿರುವ ನೂತನ ಮೆಟ್ರೋ ಮಾರ್ಗಗಳ ಪೈಕಿ ಗುಲಾಬಿ ಮಾರ್ಗ (Metro Pink Line), ಮೆಟ್ರೋ ನೀಲಿ ಮಾರ್ಗ (Metro Blue Line), ಆರೆಂಜ್ ಲೈನ್ (Metro Orange Line) ಯಾವಾಗ ಸಾರ್ವಜನಿಕರಿಗೆ ಮುಕ್ತವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿರುವಂತೆ ನಮ್ಮ ಮೆಟ್ರೋ ಗುಲಾಬಿ ಮಾರ್ಗವು ಮುಂದಿನ ವರ್ಷ ಸೇವೆಗೆ ಸಿದ್ಧವಾಗಲಿದೆ ಎಂದು ಈಗಾಗಲೇ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಾಗರವಾರದಿಂದ ಕಾಳೇನ ಅಗ್ರಹವಾರವರೆಗೆ ಸುರಂಗ ಮತ್ತು ಎತ್ತರಿಸಿದ ಮಾರ್ಗ ಸುಮಾರು 21 ಕಿ.ಮೀ. ಮಾರ್ಗ ನಿರ್ಮಿಸುತ್ತಿದೆ. ಈ ಮಾರ್ಗವು ಎರಡು ಹಂತಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

Bengaluru Namma Metro Expansion Project Pink Blue Red and Phase 3 Work Updates Here

ಗುಲಾಬಿ ಮಾರ್ಗದಲ್ಲಿ 'ತಾವರೆಕೆರೆ ಮತ್ತು ಕಾಳೇನ ಅಗ್ರಹಾರ ನಡುವಿನ 7.5 ಕಿ.ಮೀ ಎತ್ತರದ ಮಾರ್ಗವು 2026ರ ಮಾರ್ಚ್ ನಲ್ಲಿ ಜನರಿಗೆ ಮುಕ್ತಗೊಳಿಸಲು ತಿರ್ಮಾನಿಸಲಾಗಿದೆ. ಇನ್ನೂ ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ -ನಾಗವಾರಕ್ಕೆ 13.8 ಕಿ.ಮೀ ಭೂಗತ ಮಾರ್ಗವು ಅದೇ ವರ್ಷ 2026 ರಲ್ಲಿಸೆಪ್ಟೆಂಬರ್ ನಲ್ಲಿ ತೆರೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಮೂಲಕ ಮುಂದಿನ ವರ್ಷ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಗಲಿದೆ.

ಗುಲಾಬಿ ಮಾರ್ಗವು (ಸುರಂಗ) ಎಂಜಿ ರಸ್ತೆ, ಶಿವಾಜಿನಗರ ಮತ್ತು ಟ್ಯಾನರಿ ರಸ್ತೆಯಂತಹ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತದೆ. ಸಿವಿಲ್ ಕೆಲಸ ಮುಗಿದಿದ್ದು, ಹಳಿ ಜೋಡಣೆ, ಭೂಗತ ನಿಲ್ದಾಣ ಕಾರ್ಯ ಬರದಿಂದ ಸಾಗಿದೆ ಎಂದು BMRCL ಮೂಲಗಳು ತಿಳಿಸಿವೆ.

ಮೆಟ್ರೋ ನೀಲಿ ಮಾರ್ಗದ ಕಾರ್ಯಾಚರಣೆ ಅಪ್ಡೇಟ್ಸ್

ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್‌.ಪುರಂ ಮಾರ್ಗವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ (Bengaluru Airport) ನಮ್ಮ ಮೆಟ್ರೋ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಒಟ್ಟು 58.19 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಎರಡು ಹಂತಗಳಲ್ಲಿ (2ಎ & 2ಬಿ) ನಿರ್ಮಿಸಲಾಗುತ್ತಿದೆ. ಸಿಲ್‌ಬೋರ್ಡ್‌ನಿಂದ ಕೆ.ಆರ್. ಪುರಂಗೆ ಹಂತ 2A ಯ 19.75 ಕಿಮೀ. ಉದ್ದವಿದೆ. ಮತ್ತು ಅಲ್ಲಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಹಂತ 2ಬಿ ಅಡಿಯಲ್ಲಿ 38.44 ಕಿಮೀ ಉದ್ದದ ಲೈನ್‌ ನಿರ್ಮಾಣವಾಗುತ್ತಿದೆ.

2025 ಜೂನ್ 30ಕ್ಕೆ ಶೇಕಡಾ 52.5 ರಷ್ಟು ಪೂರ್ಣಗೊಂಡಿದೆ. ಬಾಕಿ ಕೆಲಸಗಳು ನಡೆಸಲಾಗುವುದು. 2026ಕ್ಕೆ ಈ ಮಾರ್ಗ ತೆರೆಯಲು ಉದ್ದೇಶಿಸಲಾಗಿದೆ. ಆದರೆ ಅಷ್ಟರೊಳಗೆ ಕಾಮಗಾರಿ ಮುಗಿಸುವ ಸವಾಲು ಮೆಟ್ರೋ ಅಧಿಕಾರಿಗಳ ಮುಂದಿದೆ.

ಕೆಂಪು ಮಾರ್ಗ ಯೋಜನೆಗೆ ಎಲ್ಲಿಗೆ ಬಂತು?

ಬೆಂಗಳೂರಿನ ಸರ್ಜಾಪುರ-ಹೆಬ್ಬಾಳ ಮಾರ್ಗವನ್ನು ಹಂತ 3ಎ ಅಡಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ಕೆಂಪು ಮಾರ್ಗವೆಂದು (Metro Red Line Project) ಕರೆಯಲಾಗುತ್ತಿದೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳ ಮೂಲಕ ಹಾದು ಹೋಗುವ ಮಾರ್ಗ ಇದಾಗಿದೆ. ಐಟಿ ಕಾರಿಡಾರ್‌ಗೂ ಸಂಪರ್ಕ ಕಲ್ಪಿಸುತ್ತದೆ. ಒಟ್ಟು 36.58 ಕಿಲೋ ಮೀಟರ್ ಉದ್ದದ ಮೆಟ್ರೋ ಲೈನ್ ಯೋಜನೆ ಇದಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿಸ್ತೃತವಾದ ಯೋಜನಾ ವರದಿ (DPR) ಮಾನದಂಡಗಳು, ಅಂದಾಜು ವೆಚ್ಚದ ಮರುಮೌಲ್ಯಮಾಪನ ಮಾಡುವಂತೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದೆ. 28,405 ಕೋಟಿ ರೂ. ಅಂದಾಜು ವೆಚ್ಚ ಪರಿಶೀಲಿಸಿ ಮರಳಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ.

ಮೆಟ್ರೋ ಹಂತ 3ನೇ ಯೋಜನೆ ವರ್ಷಾಂತ್ಯಕ್ಕೆ ಶುರು..

ಜೆಪಿನಗರ 4ನೇ ಹಂತ-ಕೆಂಪಾಪುರ, ಕಡುಬಗೆರೆ-ಹೊಸಹಳ್ಳಿವರೆಗಿನ ಎರಡು ಕಾರಿಡಾರ್ ಒಳಗೊಂಡ ನಮ್ಮ ಮೆಟ್ರೋ ಮೂರನೇ ಹಂತದ (Namma Metro Phase 3 Project) ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಒಟ್ಟು 44.65 ಕಿ.ಮೀ. ವ್ಯಾಪ್ತಿಯ ಯೋಜನೆಯಲ್ಲಿ ಎರಡು ಎತ್ತರದ ಕಾರಿಡಾರ್ ಗಳು ನಿರ್ಮಾಣಗೊಳ್ಳಲಿವೆ. ಜೆಪಿ ನಗರ 4 ನೇ ಹಂತದಿಂದ ಕಡಬಗೆರೆಗೆ ಮತ್ತು ಹೊಸಹಳ್ಳಿಯಿಂದ ಮಾಗಡಿ ರಸ್ತೆಗೆ. ರೂ. 15,611 ಕೋಟಿ ಯೋಜನೆಯು ಭೂಸ್ವಾಧೀನದ ಪ್ರಕ್ರಿಯೆ ನಡೆದಿವೆ. ಎಲ್ಲವು ಅಂದುಕೊಂಡಂತೆ ಆದರೆ 2025 ರ ಡಿಸೆಂಬರ್ ಹೊತ್ತಿಗೆ ಯೋಜನೆ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಈ ಯೋಜನೆ ಆರಂಭಿಸಲು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+