ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಜೂನ್‌ವರೆಗೆ 100 ಸಾವು, 335 ಮಂದಿಗೆ ಗಾಯ: ಜಿ ಪರಮೇಶ್ವರ

ಬೆಂಗಳೂರು, ಜುಲೈ. 11: ಭಾರೀ ಚರ್ಚೆಗೆ ಕಾರಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಫಘಾತ ಮತ್ತು ಸಾವಿನ ಸಂಖ್ಯೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ. ಈ ವರ್ಷದ ಜೂನ್‌ವರೆಗೆ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳಿಂದ 100 ಸಾವುಗಳು ಮತ್ತು 335 ಮಂದಿ ಗಾಯಗೊಂಡಿದ್ದಾರೆ ಎಂದು ಜಿ ಪರಮೇಶ್ವರ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಜಿ ಪರಮೇಶ್ವರ, ನೂತನವಾಗಿ ಆರಂಭಿಸಿರುವ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಅಪಘಾತಗಳ ಕುರಿತು ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಅವರ ಪ್ರಶ್ನೆಗೆ ಸವಿವ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.

Bengaluru Mysuru Expressway witnessed 100 deaths and 335 injuries till June: G Parameshwara

"ಸರ್ಕಾರದ ಪ್ರಕಾರ ಒಟ್ಟು 100 ಜನರು ಸಾವನ್ನಪ್ಪಿದ್ದಾರೆ. 335 ಜನರು ಹೆದ್ದಾರಿಯಲ್ಲಿ ಅಪಘಾತಗಳಿಂದ ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಬೇಕಾಗಿದೆ ಮತ್ತು ನಾವು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ. ಆದರೆ, ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚಿದೆ ಎಂದು ಸುರೇಶ್ ಕುಮಾರ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ತಿಳಿಸಿದ ಸುರೇಶ್ ಕುಮಾರ್, "ಆದರೆ ಮಾರ್ಚ್‌ನಲ್ಲಿ ರಸ್ತೆ ಉದ್ಘಾಟನೆಯಾದಾಗಿನಿಂದ 132 ಜನರು ಅಪಘಾತಗಳಿಂದ ಸಾವನ್ನಪ್ಪಿದ್ದಾರೆ ಎಂದು ನಮ್ಮ ಡೇಟಾ ಹೇಳುತ್ತದೆ. ರಾಮನಗರ, ಮೈಸೂರು ಮತ್ತು ಮಂಡ್ಯ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿವೆ" ಎಂದು ಅಂಕಿ ಅಂಶಗಳನ್ನು ಸಚಿವರ ಮುಂದಿಟ್ಟಿದ್ದಾರೆ.

ಬಳಿಕ ಮಾತನಾಡಿದ ಸಚಿವ ಜಿ ಪರಮೇಶ್ವರ, "ಎಕ್ಸ್‌ಪ್ರೆಸ್‌ವೇಗೆ ಸರಿಯಾದ ತಿರುವುಗಳು ಮತ್ತು ವಾಹನಗಳ ವೇಗಕ್ಕೆ ಸೂಚನಾ ಫಲಕಗಳಿಲ್ಲ. ರಸ್ತೆಯುದ್ದಕ್ಕೂ ಹೊಸ ಸೂಚನಾ ಫಲಕಗಳನ್ನು ಅಳವಡಿಸುತ್ತೇವೆ. ನಮ್ಮ ಮಾಹಿತಿಯ ಪ್ರಕಾರ, ಮಾರ್ಚ್‌ನಲ್ಲಿ 20, ಏಪ್ರಿಲ್‌ನಲ್ಲಿ 23, ಮೇನಲ್ಲಿ 29 ಮತ್ತು ಜೂನ್‌ನಲ್ಲಿ 28 ಸಾವುಗಳು ವರದಿಯಾಗಿವೆ" ಎಂದಿದ್ದಾರೆ.

Bengaluru Mysuru Expressway witnessed 100 deaths and 335 injuries till June: G Parameshwara

ಜನತಾದಳ (ಜಾತ್ಯತೀತ) ಶಾಸಕ ಜಿ.ಟಿ.ದೇವೇಗೌಡ ಕೂಡ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಗೃಹ ಸಚಿವ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ, ರಾಮನಗರ ಪೊಲೀಸರು ಈ ರಸ್ತೆಯಲ್ಲಿ ಸ್ಪೀಡ್ ರಾಡಾರ್ ಗನ್‌ಗಳೊಂದಿಗೆ ತಪಾಸಣೆಯನ್ನು ಪ್ರಾರಂಭಿಸಿದ್ದಾರೆ. ಅನುಮತಿಸುವ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡಿದ ಅನೇಕ ಜನರಿಗೆ ದಂಡ ವಿಧಿಸಿದ್ದಾರೆ. 100 ಕಿ.ಮೀ. ಗಿಂತ ಅಧಿಕ ವೇಗದಲ್ಲಿ ವಾಹನ ಚಲಾಯಿಸಿದರೆ ವಾಹನ ಸವಾರರು ದಂಡ ಕಟ್ಟಬೇಕಾಗುತ್ತದೆ.

Bengaluru Mysuru Expressway witnessed 100 deaths and 335 injuries till June: G Parameshwara

119 ಕಿಮೀ ಉದ್ದದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರೂ. 8,408 ಕೋಟಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು ಉದ್ದದಲ್ಲಿ, 52 ಕಿಮೀ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಐದು ಬೈಪಾಸ್‌ಗಳನ್ನು ಒಳಗೊಂಡಿರುವ ಹಸಿರು ಮೈದಾನದ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳು ಇವೆ. ಎಕ್ಸ್‌ಪ್ರೆಸ್‌ವೇ ಆರು ಲೇನ್‌ಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಹೆಚ್ಚುವರಿ ದ್ವಿಪಥದ ಸೇವಾ ರಸ್ತೆಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+