Bengaluru- Mysuru Expressway: ಕ್ಯಾರೇಜ್‌ವೇ ವ್ಯಾಪ್ತಿಯ ಪ್ರವಾಹ ಸಮಸ್ಯೆ ಪರಿಶೀಲಿಸುವ ಕೆಲಸ ಆರಂಭ- ಏನಿದು ತಿಳಿಯಿರಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಲ್ಲಿ ಬರುವ ಅನಿಮಲ್ ಓವರ್‌ಪಾಸ್‌ನ ಕ್ಯಾರೇಜ್‌ವೇ ಮೇಲೆ ಉಂಟಾಗುವ ಪ್ರವಾಹದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ NHAI ಕೆಲಸ ಆರಂಭಿಸಿದೆ.
ಬೆಂಗಳೂರು, ಮಾರ್ಚ್ 23: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ( Bengaluru- Mysuru Expressway ) ಅಲ್ಲಿ ಬರುವ ಅನಿಮಲ್ ಓವರ್‌ಪಾಸ್‌ನ ಕ್ಯಾರೇಜ್‌ವೇ ಮೇಲೆ ಉಂಟಾಗುವ ಪ್ರವಾಹದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( NHAI ) ಕೆಲಸ ಆರಂಭಿಸಿದೆ. ಭವಿಷ್ಯದಲ್ಲಿ ಇಂತಹ ಸಂಕಷ್ಟಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
NHAI ಪ್ರಕಾರ, ಯಾವುದೇ ಅಡೆತಡೆಗಳಿಲ್ಲದೆ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅನಿಮಲ್ ಓವರ್‌ಪಾಸ್‌ನಲ್ಲಿನ ವಿಸ್ತರಣಾ ಸಂಪರ್ಕಗಳು ಮತ್ತು ಕ್ಯಾರೇಜ್‌ವೇ ಮುಳುಗುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತಗೊಂಡಿತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೀಗ ಪ್ರತಿಕ್ರಿಯಿಸಿದ್ದು, ಮಾದಾಪುರ ಮತ್ತು ಇತರ ಪ್ರದೇಶಗಳ ಗ್ರಾಮಸ್ಥರಿಂದ ಚರಂಡಿ ಮಾರ್ಗವನ್ನು ಮುಚ್ಚಲಾಗಿದೆ. ಹೀಗಾಗಿ, ರಾಮನಗರ ಭಾಗದಲ್ಲಿ ಜಲಾವೃತಗೊಂಡಿರುವ ವರದಿಯಾಗಿದೆ ಎಂದು ಹೇಳಿದೆ.
ತಮ್ಮ ಸ್ವಂತ ಮಾರ್ಗದ ನಿರ್ಮಾಣವನ್ನು ಗ್ರಾಮಸ್ಥರು ಮಾಡಿಕೊಂಡಿದ್ದಾರೆ. ಮೂರು ಕಿಲೋ ಮೀಟರ್ ಅಗಲದ ಚರಂಡಿ ಮಾರ್ಗವನ್ನು ಮಣ್ಣಿನಿಂದ ನಿರ್ಬಂಧಿಸಲಾಗಿದೆ. ಇದು ಸರ್ವಿಸ್ ರಸ್ತೆಯಿಂದ ಗ್ರಾಮಸ್ಥರ ಕೃಷಿ ಭೂಮಿಯನ್ನು ಪ್ರವೇಶಿಸಲು ಶಾರ್ಟ್‌ಕಟ್ ಆಗಿದೆ ಎಂದು ಸರ್ಕಾರ ಹೇಳಿದೆ.
ಸಾಗಬಸವನದೊಡ್ಡಿ ಗ್ರಾಮದ ಬಳಿ ಚರಂಡಿ ಸಮಸ್ಯೆಯನ್ನೂ ಎನ್‌ಎಚ್‌ಎಐ ಬಗೆಹರಿಸುತ್ತಿದೆ. 17 ಮಾರ್ಚ್ 2023 ರಂದು ಸುರಿದ ಭಾರೀ ಮಳೆಯು 117 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಅಲ್ಲಿ ಬರುವ ಅನಿಮಲ್ ಓವರ್‌ಪಾಸ್ ಬಳಿಯ ಕ್ಯಾರೇಜ್‌ವೇ ಅನ್ನು ಮುಳುಗಿಸಿತು.

ಇದನ್ನು ಪರಿಹರಿಸುವ ಸಲುವಾಗಿ, ಮಳೆನೀರು ಸುಲಭವಾಗಿ ಹರಿಯಲು ಅನುಕೂಲವಾಗುವಂತೆ NHAI ಎರಡು ಸಾಲುಗಳ ಪೈಪ್‌ನೊಂದಿಗೆ ಪೈಪ್ ಡ್ರೈನ್ ಅನ್ನು ಹಾಕಿದೆ. 19 ಮಾರ್ಚ್ 2023 ರಂದು ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರ ಸುಗಮವಾಗಿ ಸಾಗುತ್ತಿದೆ.
ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ (RCC) ಡ್ರೈನ್ ನಿರ್ಮಾಣವನ್ನು ಒಳಗೊಂಡಿರುವ ಸೇವಾ ರಸ್ತೆಗಳಲ್ಲಿ ಸರಿಯಾದ ಒಳಚರಂಡಿಗಾಗಿ NHAI ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಸರ್ವೀಸ್ ರಸ್ತೆಗಳಿಗೆ ಸರಿಯಾದ ಪ್ರವೇಶವನ್ನು ಇದು ಖಚಿತಪಡಿಸುತ್ತದೆ.
ಮಾರ್ಚ್ 12 ರಂದು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಇದು ಕರ್ನಾಟಕದ ಜನತೆಗೆ 'ಉಡುಗೊರೆ' ಎಂದು ಹೇಳಿದರು. ಆದರೆ, ಮೊದಲ ಮಳೆಗೆ ಇದು ಜಲಾವೃತಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರವೇಶ- ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಯೋಜನೆಯು 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸರಿಸುಮಾರು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.
ರೂ 8,480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಅಕ್ಟೋಬರ್ 2022 ರಲ್ಲಿ ಕಾರ್ಯರೂಪಕ್ಕೆ ಬರಬೇಕಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 2 ಹಂತಗಳನ್ನು ಒಳಗೊಂಡಿದೆ, ಇದು ಹಂತ 1 ಬೆಂಗಳೂರಿನಿಂದ ನಿಡಘಟ್ಟದ ನಡುವೆ 58 ಕಿಮೀ ಮತ್ತು 61 ಕಿಮೀಗಳ 2 ನೇ ಹಂತವು ನಿಡಘಟ್ಟದಿಂದ ಮೈಸೂರು ನಡುವೆ ಇದೆ.
ಬೆಂಗಳೂರು ಮತ್ತು ಮೈಸೂರು ರಾಜ್ಯದ ಪ್ರಮುಖ ನಗರಗಳು. ವ್ಯಾಪಾರ ಮತ್ತು ಪ್ರವಾಸೋದ್ಯಮ ಎರಡಕ್ಕೂ ಮೌಲ್ಯಯುತವಾಗಿದೆ. ಪ್ರಸ್ತುತ ಬಳಸಲಾಗುತ್ತಿರುವ 4- ಲೇನ್ NH 275 ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಆದಾಗ್ಯೂ, ಈ ಮಾರ್ಗವು ದಟ್ಟಣೆಯಿಂದ ಕೂಡಿದೆ ಮತ್ತು ಜನನಿಬಿಡ ಪ್ರದೇಶಗಳಾದ ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣ ಮೂಲಕ ಹಾದು ಹೋಗುತ್ತದೆ.
NH 275 ಹೆದ್ದಾರಿಯ ಭಾಗವಾಗಿರುವ ಉದ್ದೇಶಿತ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುತ್ತದೆ. ಎರಡು ನಗರಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಇದು ಬೆಂಗಳೂರನ್ನು ಕೊಡಗು, ಮಂಗಳೂರು ಮತ್ತು ಕೇರಳ ಪ್ರದೇಶಗಳಿಗೆ ಸಂಪರ್ಕಿಸುತ್ತದೆ.












Click it and Unblock the Notifications