Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 711.72 ಕೋಟಿ ವೆಚ್ಚದ ಹೊಸ ಯೋಜನೆಗಳು
Bengaluru-Mysuru Expressway: ಉದ್ಘಾಟನೆ ಆದಾಗಿನಿಂದಲೂ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಒಂದಲ್ಲ ಒಂದು ಸಮಸ್ಯೆಗಳು ತಲೆದೂರುತ್ತಲಿವೆ. ಅಲ್ಲದೆ, ಇವುಗಳಿಗೆ ಪರಿಹಾರಗಳನ್ನು ಕೂಡ ಕಂಡುಕೊಳ್ಳಲಾಗುತ್ತಲಿದೆ. ಹಾಗೆಯೇ ಇದೀಗ ಕೇಂದ್ರ ಸರ್ಕಾರ ಈ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ನೂತನ ಯೋಜನೆಗಳಿಗೆ ಕೈಹಾಕಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಉದ್ಘಾನೆಯಾದ ಆರಂಭದಲ್ಲಿ ಟೋಲ್ ಶುಲ್ಕ ವಿಚಾರವಾಗಿ ಪ್ರಯಾಣಿಕರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆದು ಇದು ಪ್ರತಿಭಟನೆ ಹಂತಕ್ಕೂ ತಲುಪಿತ್ತು. ಅಲ್ಲದೆ, ಇದಾದ ಬಳಿಕ ಅಪಘಾತ, ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಲಿದ್ದು, ಇದರಿಂದ ಪ್ರಯಾಣಿಕರು ಭಯದಿಂದಲೇ ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಇದೀಗ ಇದಕ್ಕೆಲ್ಲ ತೆರೆ ಎಳೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳೊಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. 117 ಕಿಲೋ ಮೀಟರ್ ಉದ್ದದ 6 ಲೇನ್‌ನ ಈ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳು ಸಂಭವಿಸುತ್ತಲಿವೆ. ಅಲ್ಲದೆ, ಈ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳೇ ಇರಲಿಲ್ಲ. ಇವುಗಳನ್ನು ಇದೀಗ ತುಂಬಲು ಇದೀಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ.
ಈ ಎಕ್ಸ್‌ಪ್ರೆಸ್ ವೇ ಆದಾಗಿಂದಲೂ ಇಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು, ಪ್ರಯಾಣಿಕರು ಒತ್ತಾಯಿಸುತ್ತಲೇ ಇದ್ದರು. ಇದಕ್ಕೆ ಇದೀಗ ಮುಹೂರ್ತ ಕೂಡಿ ಬಂದಿದ್ದು, ಕೊನೆಗೂ ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ಹಾಗಾದ್ರೆ ಏನೆಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ತಿಳಿಯಿರಿ.
ಹೆದ್ದಾರಿಯಲ್ಲಿನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ 2.017 ಕಿಲೋ ಮೀಟರ್‌ನಷ್ಟು ದೂರದ ಕಾಮಗಾರಿಗೆ 711.72 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಹೆದ್ದಾರಿ ಪ್ರಾಧಿಕಾರ 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ.
ಈ ಎಕ್ಸ್‌ಪ್ರೆಸ್ ವೇನ ಬದಿಯಲ್ಲಿ ಒಟ್ಟು 22.536 ಕಲೋ ಮೀಟರ್‌ನಷ್ಟು ದೂರದ ನೂತನ ಸರ್ವಿಸ್ ರಸ್ತೆ ನಿರ್ಮಾಣ ಆಗಲಿದೆ. ಓವರ್ ಬೈಪಾಸ್, ಅಂಡರ್ ಬ್ರಿಡ್ಜ್‌ನೊಂದಿಗೆ ಒಟ್ಟು 14 ಕಡೆಗಳಲ್ಲಿ ಹೆದ್ದಾರಿಗೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ತಲೆ ಎತ್ತಲಿವೆ. ಅಲ್ಲದೆ, ಎರಡು ಬದಿಗಳಲ್ಲಿಯೂ ನೂತನ ಟೋಲ್ ಬೂತ್‌ಗಳು ಸಹ ಪ್ರಾರಂಭ ಆಗಲಿದೆ. ಇದರಿಂದ ಪ್ರಯಾಣಿಕರು ಹೆದ್ದಾರಿ ಪ್ರವೇಶಿಸಿ, ನಿರ್ಗಮಿಸುವ ದೂರಕ್ಕಷ್ಟೆ ಟೋಲ್ ದರ ಪಾವತಿ ಮಾಡಬಹುದು. ಜೊತೆಗೆ ಹೆದ್ದಾರಿಯಲ್ಲಿ ಇನ್ನು ಹಲವು ಹೊಸ ಯೋಜನೆಗಳನ್ನು ತರಲಾಗುತ್ತಿದೆ.
ಏನೆಲ್ಲಾ ನಿರ್ಮಾಣ ಆಗಲಿವೆ? & ಕಾಮಗಾರಿ ವಿವರಗಳು
* ಕಾಮಗಾರಿ ಉದ್ದ- 2.017 ಕಿ.ಮೀ.
* ರೈಲ್ವೆ ಸೇತುವೆಗಳು - 3
* ಅಂಡರ್‌ಪಾಸ್ - 7
* ಮೈಸೂರಿನ ಮಣಿಪಾಲ ಆಸ್ಪತ್ರೆ ಜಂಕ್ಷನ್ ಬಳಿ ಫ್ಲೈಓವರ್
* ಸರ್ವಿಸ್ ರಸ್ತೆ ಉದ್ದ- 22.536 ಕಿಲೋ ಮೀಟರ್
* ಎಂಟ್ರಿ-ಎಕ್ಸಿಟ್ - 14 ಕಡೆ
* ಬಸ್ ಶೆಲ್ಟರ್ - 35 ನಿರ್ಮಾಣ
* ಯೋಜನಾ ವೆಚ್ಚ- 711.72 ಕೋಟಿ ರೂಪಾಯಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿ ಮೂರು ವರ್ಷಗಳು ಕಳೆದಿವೆ. ಆದರೆ, ಬಿಡದಿ ಮತ್ತು ಮಂಡ್ಯದ ಬಳಿ ಸರ್ವಿಸ್ ರಸ್ತೆಗಳ ಕಾಮಗಾರಿ ಆಗಿರಲಿಲ್ಲ. ಹೆದ್ದಾರಿಗೆ ಆಗಮನ-ನಿರ್ಗಮನ ದ್ವಾರಗಳು ಅವೈಜ್ಞಾನಿಕವಾಗಿ ಕೂಡಿದ್ದವು ಎನ್ನುವ ಆರೋಪಗಳಿ ಕೇಳಿಬರುತ್ತಲಿದ್ದವು. ಅಲ್ಲದೆ, ಎಂಟ್ರಿ-ಎಕ್ಸಿಟ್ ಸ್ಥಳಗಳಲ್ಲಿಯೇ ಹೆಚ್ಚಿನ ಅಪಘಾತಗಳು ಸಂಭವಿಸಿದ್ದು, ಈ ಹಿನ್ನೆಲೆ ಇಲ್ಲಿನ ಸ್ಥಳಗಳನ್ನು ವಿಸ್ತರಣೆ ಮಾಡುವಂತೆ ಒತ್ತಾಯಗಳು ಕೇಳಿಬಂದಿದ್ದವು. ಅಂಡರ್‌ಪಾಸ್, ಫ್ಲೈಓವರ್‌ಗಳ ಕೊರತೆಯೂ ಹೆಚ್ಚಾಗಿದ್ದು, ಇದೀಗ ಈ ಕೊರತೆಗಳನ್ನು ನೀಗಿಸಲು ಕೇಂದ್ರ ನಿರ್ಧರಿಸಿದೆ.
ಇನ್ನು ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ, ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೆಗಳಲ್ಲಿಯೂ ಜನರು, ಪ್ರಯಾಣಿಕರು ಮಾಡುತ್ತಿರಯವ ಆರೋಪಗಳು ಸರಿಯಿವೆ ಎಂದು ತಿಳಿದುಬಂದಿದ್ದವು. ಜೊತೆಗೆ ಹೆಚ್ಚಾಗಿ ಪ್ರಯಾಣಿಸಿದ ದೂರಕ್ಕಷ್ಟೇ ಟೋಲ್ ಪಾವತಿ ಮಾಡುವ ವ್ಯವಸ್ಥೆಯೇ ಇಲ್ಲಿರಲಿಲ್ಲ. ಈ ಎಲ್ಲಾ ಯೋಜನೆಗಳ ಜಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 712 ಕೋಟಿ ರೂಪಾಯಿ ಬಿಡುಗಡೆಗೊಳಿಸಿ ಚಾಲನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾಮಗಾರಿ ಆರಂಭದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.












Click it and Unblock the Notifications