Bengaluru-Mysuru Expressway: ಮೈಸೂರು-ಬೆಂಗಳೂರು ಹದ್ದಾರಿ ಸಂಚಾರಕ್ಕೆ ಮುಕ್ತವಾಗಿ 20 ತಿಂಗಳು; ಟೋಲ್ ಸಂಗ್ರಹ ಎಷ್ಟು?
Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭದಿಂದಲೂ ಒಂದಲ್ಲ ಒಂದು ವಿಚಾಕ್ಕೆ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಟೋಲ್ ಹೆಚ್ಚಳ, ಸುರಕ್ಷತೆ, ಸಿಬ್ಬಂದಿ ಕನ್ನಡ ಭಾಷೆ ಬಳಕೆ ಮಾಡದ ವಿಚಾರಕ್ಕೆ ವಾಹನ ಸವಾರರು ಅವರ ನಡುವೆ ಘರ್ಷಣೆಗಳು ನಡೆದಿವೆ. ಇದೀಗ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ 20 ತಿಂಗಳು ಕಳೆದಿದ್ದು, ಇಲ್ಲಿವರೆಗೂ ಟೋಲ್ ಸಂಗ್ರಹ ಎಷ್ಟಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಹೆಚ್ಚಳದ ನಡುವೆ ಪಯಾಣಿಕರು ಅಲ್ಲಿನ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಗಲಾಟೆಗಳು ನಡೆದಿವೆ. ಅಲ್ಲದೆ, ಹೆದ್ದಾರಿಯಲ್ಲಿ ಎಲ್ಲಿಯೂ ಸುರಕ್ಷತೆ ಇಲ್ಲದೆ, ಕಳ್ಳತನ ಪ್ರಕರಣಗಳು ಹೆಚ್ಚಾದ ಘಟನೆಗಳು ನಡೆದಿದ್ದವು. ಬಳಿಕ ಎಚ್ಚತ್ತ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಾ ಬಂದಿದೆ. ಅಲ್ಲದೆ, ಸ್ಪೀಡ್ ಲಿಮಿಟ್‌ಗಾಗಿ ಅಲ್ಲಲ್ಲಿ ಅತ್ಯಾಧುನಿಕ ಎಐ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಈ ನಿಮಯ ಮುರಿದವರಿಗೆ ದಂಡ ಗ್ಯಾರಂಟಿಯಾಗಿದೆ.

ಇಂತಹ ನಿಯಮಗಳನ್ನು ಜಾರಿ ಮಾಡಿದ್ದರು ಕೂಡ ಕೆಲವರು ಉಲ್ಲಂಘಟನೆ ಮಾಡಿ ದಂಡ ತೆತ್ತ ಘಟನೆಗಳು ನಡೆದಿವೆ. ಈ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಇಲ್ಲಿವರೆಗೂ 438 ಕೋಟಿ ಟೋಲ್ ಸಂಗ್ರಹಿಸಿದೆ. ದೇಶದ ಹೆದ್ದಾರಿಗಳಲ್ಲಿ ಸಂಗ್ರಹ ಆಗುತ್ತಿರುವ ಟೋಲ್ ಬಗ್ಗೆ ಸಂಸದ ಅಸಾದುದ್ದೀನ್ ಒವೈಸಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಮಾಹಿತಿಯನ್ನು ನೀಡಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಹೆದ್ದಾರಿಯುದ್ದಕ್ಕೂ ಮೂರು ಟೋಲ್ ಸಂಗ್ರಹ ಕೇಂದ್ರಗಳು ಇವೆ. ಈ ಪೈಕಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಕೆ ಮತ್ತು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಕೇಂದ್ರದಲ್ಲಿ ಒಟ್ಟು 278.91 ಕೋಟಿ ರೂಪಾಯಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರಿನ ಕೇಂದ್ರದಲ್ಲಿ 159.37 ಕೋಟಿ ರೂಪಾಯಿ ಟೋಲ್ ಸಂಗ್ರಹ ಆಗಿದೆ ಎಂದು ತಿಳಿದುಬಂದಿದೆ.
20 ತಿಂಗಳಲ್ಲಿ ಯಾವ್ಯಾವ ಟೋಲ್‌ನಲ್ಲಿ ಎಷ್ಟು ಸಂಗ್ರಹ?
* ಕಣಿಮಿಕೆ ಮತ್ತು ಶೇಷಗಿರಿಹಳ್ಳಿ ಟೋಲ್- 278.91 ಕೋಟಿ ರೂಪಾಯಿ
* ಗಣಂಗೂರಿನ ಟೋಲ್- 159.37 ಕೋಟಿ ರೂಪಾಯಿ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಾಣ ಮಾಡಿದ್ದ 118 ಕಿಲೋ ಮೀಟರ್ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2023ರ ಮಾರ್ಚ್‌ನಲ್ಲಿ ಉದ್ಘಾಟನೆ ಮಾಡಿದ್ದರು. ಇನ್ನು ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ ಇಂದಿಗೆ 20 ತಿಂಗಳುಗಳು ಕಳೆದಿದೆ. ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಈ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕೀಲೋ ಮೀಟರ್, ಮಂಡ್ಯದಲ್ಲಿ 58 ಕಿಲೋ ಮೀಟರ್ ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿಲೋ ಮೀಟರ್ ವಿಸ್ತರಿಸಿದೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಕಿ.ಮೀ.?
* ರಾಮನಗರ ಜಿಲ್ಲೆ- 55 ಕೀಲೋ ಮೀಟರ್
* ಮಂಡ್ಯ ಜಿಲ್ಲೆ - 58 ಕಿಲೋ ಮೀಟರ್
* ಮೈಸೂರು ಜಿಲ್ಲೆ - ಕಿಲೋ ಮೀಟರ್
ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ 20 ತಿಂಗಳಿನಲ್ಲಿ ಮೂರು ಬಾರಿ ಟೋಲ್ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. 2024ರ ಏಪ್ರಿಲ್‌ನಿಂದ ಜಾರಿಗೆ ಬಂದಿರುವಂತೆ ಸದ್ಯ ಒಂದು ಕಾರಿನ ಏಕಮುಖ ಸಂಚಾರಕ್ಕೆ 170 ಹಾಗೂ ದ್ವಿಮುಖ ಸಂಚಾರಕ್ಕೆ 255 ರೂಪಾಯಿ ಇದೆ. ಏಳು ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನದ ಏಖಮುಖ ಸಂಚಾರಕ್ಕೆ 1,362 ಹಾಗೂ ದ್ವಿಮುಖ ಸಂಚಾರಕ್ಕೆ 1,660 ರೂಪಾಯಿ ಟೋಲ್ ನಿಗದಿ ಮಾಡಲಾಗಿದೆ.
ಪ್ರಯಾಣಿಕರ ನಿರ್ಲಕ್ಷ್ಯದಿಂದ ಎಕ್ಸ್‌ಪ್ರೆಸ್ ವೇನಲ್ಲಿ 9 ತಿಂಗಳಲ್ಲಿ 595 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 158 ಮಂದಿ ಸಾವನ್ನಪ್ಪಿದ್ದರೆ, 538 ಜನ ಗಾಯಗೊಂಡಿದ್ದರು. ನಂತರ ವೇಗದ ಮಿತಿಯನ್ನು ಪ್ರತಿ ಗಂಟಗೆ 120 ಕಿಲೋ ಮೀಟರ್‌ಗೆ ಇಳಿಕೆ ಮಾಡಲಾಯಿತು. ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿದ್ದು, ನಿಯಮ ಮೀರಿದವರಿಂದ ದಂಡ ಕಟ್ಟಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
9 ತಿಂಗಳ ಪ್ರಕರಣಗಳು
* ಅಪಘಾತಗಳ ಸಖ್ಯೆ - 595
* ಸಾವಿನ ಸಂಖ್ಯೆ - 158
* ಗಾಯಾಳುಗಳ ಸಂಖ್ಯೆ - 538












Click it and Unblock the Notifications