Mahalakshmi murder: ಮಹಾಲಕ್ಷ್ಮಿ ಕೊಲೆಗೆ ಈ ಸಣ್ಣ ವಿಷಯ ಕಾರಣ, ಆರೋಪಿ ಡೆತ್‌ನೋಟ್

ಬೆಂಗಳೂರಿನಲ್ಲಿ ಈಚೆಗೆ ನಡೆದ ಮಹಾಲಕ್ಷ್ಮಿ ಕೊಲೆ ಕೇಸ್‌ ಅನ್ನು ಕರ್ನಾಟಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಅತ್ಯಂತ ಭೀಕರವಾಗಿ ಈ ಹತ್ಯೆ ನಡೆದಿತ್ತು. ಇಷ್ಟು ಕ್ರೂರವಾದ ಕೊಲೆಯನ್ನು ಬೆಂಗಳೂರು ಹಾಗೂ ಕರ್ನಾಟಕ ಈ ಹಿಂದೆ ಎಂದೂ ಕಂಡಿರಲಿಲ್ಲ. ಬೆಂಗಳೂರಿನ ವೈಯಾಲಿಕಾವಲ್‌ನ ಮನೆಯೊಂದರಲ್ಲಿ ಮಹಾಲಕ್ಷ್ಮಿ ಎನ್ನುವವರನ್ನು ಕೊಲೆ ಮಾಡಿ, ಮೃತದೇಹವನ್ನು 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ಇಡಲಾಗಿತ್ತು. ಇಷ್ಟು ಭಯಂಕರ ಕೊಲೆಯ ಹಿಂದೆ, ಈ ಸಣ್ಣ ವಿಷಯವಿತ್ತೇ ಎನ್ನುವುದು ಈಗ ಚರ್ಚೆಯಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಬಕೆಟ್‌ ಕೊಡಲಿಲ್ಲ, ರಿಮೋಟ್‌ ಕೊಡಲಿಲ್ಲ ಎಂದು, 50 ರೂಪಾಯಿಗಾಗಿಯೂ ಕೊಲೆ ಮಾಡಿದ ಪ್ರಕರಣಗಳು ಸಹ ಇವೆ. ಆದರೆ, ಸಣ್ಣ ವಿಚಾರಕ್ಕಾಗಿ ಭಯಂಕರವಾಗಿ ಕೊಲೆ ಮಾಡುವುದು ಎನ್ನುವುದು ಸಹಜವಾಗಿಯೇ ಅನುಮಾನಕ್ಕೆ ಗುರಿ ಮಾಡುತ್ತದೆ. ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿದ್ದ ಎನ್ನಲಾಗಿದ್ದ ಆರೋಪಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಡೆತ್‌ನೋಟ್‌ನಲ್ಲಿ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನುವ ವಿಷಯವೂ ಇದೆ. ಅದು ಆಘಾತ ಮೂಡಿಸುವಂತಿದೆ. ಈ ಕೊಲೆ ಪ್ರಕರಣದ ಆರೋಪಿ ಮುಕ್ತಿ ರಂಜನ್‌ ರಾಯ್‌ ಎನ್ನುವವನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಬರೆದಿದ್ದ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದೆ. ಒಡಿಶಾದ ಪೊಲೀಸರಿಗೆ ಈ ಡೆತ್‌ನೋಟ್‌ ಸಿಕ್ಕಿದೆ. ಇದನ್ನು ಅವರು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Bengaluru murder case Mahalakshmi murder happened for a small matter

ಸಣ್ಣ ವಿಷಯಕ್ಕೆ ಕೊಲೆ: ಮಹಾಲಕ್ಷ್ಮಿ ಮತ್ತು ನಾನು ಇಬ್ಬರೂ ಆತ್ಮೀಯವಾಗಿದ್ದೆವು. ಆದರೆ ತೀರ ಸಣ್ಣ ಸಣ್ಣ ವಿಚಾರಗಳಿಗೂ ಮಹಾಲಕ್ಷ್ಮಿ ಜಗಳವಾಡುತ್ತಿದ್ದಳು. ಮುನಿಸಿಕೊಳ್ಳುತ್ತಿದ್ದಳು ಇದು ನನಗೆ ಇಷ್ಟವಾಗಲಿಲ್ಲ. ಇಷ್ಟೊಂದು ಆತ್ಮೀಯವಾಗಿದ್ದರೂ ಮುನಿಸಿಕೊಳ್ಳುವುದು ಏಕೆ ಎಂದು ತಿಳಿಯಲಿಲ್ಲ. ಸಣ್ಣ ವಿಷಯಗಳಿಗೂ ಮುನಿಸಿಕೊಳ್ಳುತ್ತಿದ್ದಳು. ಇದು ನನಗೆ ಇಷ್ಟವಾಗಲಿಲ್ಲ. ಸೆಪ್ಟೆಂಬರ್‌ 3ರಂದು ಸಹ ನಾನು ಆಕೆಯ ಮನೆಗೆ ಹೋಗಿದ್ದೆ. ಅಂದೂ ಸಹ ಜಗಳವಾಗಿತ್ತು. ಜಗಳವಾಡುವಾಗ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಹೀಗಾಗಿ, ನಾನು ಪ್ರತಿಯಾಗಿ ಹಲ್ಲೆ ಮಾಡಿದ್ದೆ. ಕೊಲೆಯನ್ನೂ ಮಾಡಿದ್ದೆ ಎಂದು ಕೊಲೆ ಆರೋಪಿ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ ಎಂದು ಹೇಳಲಾಗಿದೆ. ಆದರೆ, ಮುನಿಸಿಕೊಳ್ಳುವುದಕ್ಕೆ ಜಗಳವಾಡುವುದಕ್ಕೆ ಯಾರಾದರು ಇಷ್ಟೊಂದು ಭೀಕರವಾಗಿ ಕೊಲೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಇವರಿಬ್ಬರು ಆತ್ಮೀಯವಾಗಿದ್ದು ಬಿಟ್ಟರೆ, ಬೇರೆ ಹಣಕಾಸಿನ ವ್ಯವಹಾರವಿತ್ತೇ ಅಥವಾ ಬೇರೆಯಾದರು ಇದರಲ್ಲಿ ಶಾಮೀಲಾಗಿದ್ದರೆ ಎನ್ನುವ ಹಲವು ಅನುಮಾನಗಳು ಈಗ ಎದುರಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ ?

ಮಹಾಲಕ್ಷ್ಮಿ ಕೊಲೆ ಕೇಸ್‌ನಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ ಆರೋಪಿ ಮುಕ್ತಿ ರಂಜನ್‌ ರಾಯ್‌ ಅವನು ಬರೆದಿದ್ದಾನೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದ್ದು, ಆ ಡೆತ್‌ ನೋಟ್‌ ಅನ್ನು ಒಡಿಶಾದ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅದರಲ್ಲಿ ಮಹಾಲಕ್ಷ್ಮಿ ಹಾಗೂ ನನಗೆ ಸಣ್ಣ ಸಣ್ಣ ವಿಚಾರಕ್ಕೂ ಕೊಲೆ ಆಗುತ್ತಿತ್ತು. ಸೆಪ್ಟೆಂಬರ್‌ 3ರಂದು ಸಹ ಇದೇ ನಡೆದಿತ್ತು. ಜಗಳವಾಗುವಾಗ ಆಕೆ ನನ್ನ ಮೇಲೆ ಹಲ್ಲೆಯನ್ನು ಸಹ ಮಾಡಿದ್ದಳು. ಅದರಿಂದ ತಪ್ಪಿಸಿಕೊಳ್ಳಲು ನಾನು ಸಹ ಹಲ್ಲೆ ಮಾಡಿದ್ದೆ. ಆ ಮೇಲೆ ಕೊಲೆ ಮಾಡಿ 59 ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟಿದ್ದೆ ಎಂದು ಬರೆದಿದ್ದಾನೆ. ಆದರೆ, ಸಣ್ಣ ವಿಷಯಕ್ಕೆ ಈ ರೀತಿ ಕ್ರೂರ ಕೊಲೆಯಾಗಿರುವುದು ವಿಪರ್ಯಾಸವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+