ಬೆಂಗಳೂರಿನ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಆರೋಪಿ ಸೆರೆ
ಬೆಂಗಳೂರಿನ ವೀರಭದ್ರನಗರದ 6 ವರ್ಷದ ಬಾಲಕಿ ಮೇಲೆ ಆತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಗಿರಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 24: ಗಿರಿನಗರದ ಸಮೀಪವಿರುವ ವೀರಭದ್ರನಗರದ 6 ವರ್ಷದ ಬಾಲಕಿ ಮೇಲಿನ ಆತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗಿರಿನಗರ ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ.
34 ವರ್ಷ ವಯಸ್ಸಿನ ಅನಿಲ್ ಎಂಬಾತನ ಮೇಲೆ ಈಗಾಗಲೇ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಏಪ್ರಿಲ್ 21 ರಂದು ಬಾಲಕಿಯ ಪೋಷಕರು, ಗಿರಿನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.

ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ಮಗುವನ್ನು ಕರೆದುಕೊಂಡು ಹೋಗಿ ಪಾಪಿ ಆತ್ಯಾಚಾರ ಮಾಡಿ ವೀರಭದ್ರನಗರದ ಶಾರದ ಆಶ್ರಮ ಬಳಿ ಕೊಲೆ ಮಾಡಿ, ಮಂಚದ ಕೆಳಗೆ ಶವವನ್ನು ಬಚ್ಚಿಟ್ಟು ಪರಾರಿಯಾಗಿದ್ದ. ಕೆಲ ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಶವ ಕೊಳೆತು ವಾಸನೆ ಬರಲಾರಂಭಿಸಿದ್ದರಿಂದ ಈ ಪ್ರಕರಣ ಬಯಲಿಗೆ ಬಂದಿತ್ತು.












Click it and Unblock the Notifications