ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲಲ್ಲಿ ತಾಂತ್ರಿಕ ಸಮಸ್ಯೆ! ಪ್ರಯಾಣಿಕರಿಗೆ ಅಡಚಣೆ
ಬೆಂಗಳೂರು: ಒಂದು ವರ್ಷದ ಹಿಂದಷ್ಟೇ ಹೊಸ ರೈಲುಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸೋಮವಾರ ಸಂಜೆ ಮತ್ತೆ ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಿಂದೆಯು ರೈಲುಗಳಲ್ಲಿ ಸಣ್ಣಪುಟ್ಟ ದೋಷ ಕಂಡು ಬಂದಿತ್ತು. ಇದೀಗ ಮತ್ತೆ ರೈಲಿನಲ್ಲಿ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡು ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾಗಿತ್ತು.
ಆಗಸ್ಟ್ 24 ರಂದು ಬೊಮ್ಮಸಂದ್ರದಿಂದ ಆರ್.ವಿ. ರಸ್ತೆ ಕಡೆಗೆ ಸಂಚರಿಸುತ್ತಿದ್ದ ಹಳದಿ ಮಾರ್ಗದ ಮೆಟ್ರೋ ರೈಲಿನಲ್ಲಿ ಸಂಚಾರದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ರೈಲು ಸಂಚಾರವನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ, ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ರೈಲಿನ ಸಂಚಾರವನ್ನು ಸಂಜೆ 5:14ಕ್ಕೆ ಬೆರಟೇನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಅಂತ್ಯಗೊಳಿಸಲಾಯಿತು. ತಾಂತ್ರಿಕ ತಪಾಸಣೆಗಾಗಿ ಸೇವೆಯಿಂದ ಹಿಂಪಡೆಯಲಾಯಿತು.

ಕೆಲವೇ ಹೊತ್ತಿನ ಬಳಿಕ ಮೆಟ್ರೋ ಸೇವೆ ಪುನಾರಾರಂಭ
ಈ ಅವಧಿಯಲ್ಲಿ ಹಳದಿ ಮಾರ್ಗದ ರೈಲು ಸಂಚಾರವನ್ನು ಅಲ್ಪಕಾಲ ನಿಯಂತ್ರಿಸಲಾಯಿತು. ಮೆಟ್ರೋ ಅಧಿಕಾರಿಗಳು ಮತ್ತು ತಾಂತ್ರಿಕ ತಜ್ಞರು ಕೂಡಲೇ ರೈಲಿನಲ್ಲಿ ಆಗಿದ್ದ ಸಮಸ್ಯೆಯನ್ನು ಸರಿಪಡಿಸಿದರು. ಬಳಿಕವೇ ನಂತರ ಸಂಚಾರವನ್ನು ಸಹಜ ಸ್ಥಿತಿಗೆ ತರಲಾಯಿತು.
ಸಂಜೆ ಪೀಕ್ ಸಮಯವಾಗಿದ್ದರಿಮದ ಅಧಿಕಾರಿಗಳು ತ್ವರಿತವಾಗಿ ಮರಳಿ ಸಂಚಾರ ಸೇವೆ ಲಭ್ಯವಾಗುವಂತೆ ಮಾಡುವಲ್ಲಿ ಶ್ರಮಿಸಿದರು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ಬಿಎಂಆರ್‌ಸಿಎಲ್ ವಿಷಾದಿಸುತ್ತದೆ ಹಾಗೂ ಅವರ ತಾಳ್ಮೆ ಮತ್ತು ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 10ಕ್ಕೆ ಒಂದು ವರ್ಷ ಪೂರ್ಣ
2025ರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ 19 ಕಿಲೋ ಮೀಟರ್ ಉದ್ದದ ಈ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಲಾಗಿತ್ತು. 2026ರ ಆಗಸ್ಟ್ 10ರಂದು ಒಂದು ವರ್ಷ ಪೂರ್ಣಗೊಂಡಿವೆ. ಸದ್ಯಕ್ಕೀಗ ಹತ್ತು ರೈಲುಗಳು ಮಾತ್ರವೇ ಸಂಚಾರ ಮಾಡುತ್ತಿವೆ. ಶೀಘ್ರವೇ ಈ ಮಾರ್ಗದಲ್ಲಿ ಒಟ್ಟು 15 ರೈಲುಗಳ ಕಾರ್ಯಾಚರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ಲ್ಯಾನ್ ಮಾಡಿಕೊಂಡಿದೆ.
ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಫಿಕ್ ಹವರ್‍ನಲ್ಲಿ ಸದ್ಯ ಇರುವ 6ನಿಮಿಷಗಳ ರೈಲುಗಳ ಆವರ್ತನ ಹಾಗೂ ಸಾಮಾನ್ಯ ಸಮಯದಲ್ಲಿ 10-13ನಿಮಿಷಗಳ ರೈಲು ಸಂಚಾರ ಆವರ್ತನ ಸಮಯ ಇಳಿಕೆ ಆಗಲಿದೆ.


Click it and Unblock the Notifications
