Silk Board Flyover: ಬೆಂಗಳೂರಿಗರೇ ಗಮನಿಸಿ.. ಮುಚ್ಚಲಿದೆ ಸಿಲ್ಕ್ ಬೋರ್ಡ್ ಫ್ಲೈಓವರ್- ಎಷ್ಟು ತಿಂಗಳು? ಕಾರಣ, ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗಿನ ಮೆಟ್ರೋ ಕಾಮಗಾರಿಗಳು 2026 ರಲ್ಲಿ ಮುಗಿಯಲಿವೆ ಎಂದು ಸರ್ಕಾರ ಹೇಳಿದೆ.
ಈ ನೀಲಿ ಮಾರ್ಗದ ಕಾಮಗಾರಿಗಳನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಫ್ಲೈಓವರ್ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಸಂಸ್ಥೆಗೆ ಬಂದೊದಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ (ಮಡಿವಾಳ ಬದಿ) ನಾಲ್ಕು ತಿಂಗಳ ಕಾಲ ಭಾಗಶಃ ಬಂದ್ ಆಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸೇಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಪ್ ಮತ್ತು ಡೌನ್ ರಾಂಪ್ ಕ್ಯಾರೇಜ್ ವೇ ( ಮಡಿವಾಳ ಬದಿ ) ಲೂಪ್‌ಗಳು ಮತ್ತು ರಾಂಪ್ ಫ್ಲೈಓವರ್ ಸ್ಟ್ರೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21-10- 2023 ರಿಂದ ( ನಾಲ್ಕು ತಿಂಗಳವರೆಗೂ ಎರಡು ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್ ) ಭಾಗಶಃ ಬ್ಯಾರಿಕೇಡ್ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಕೋರಲಾಗುವುದು. ಇದರಿಂದಾಗುವ ಅನಾನುಕೂಲತೆಗೆ ವಿಷಾಧಿಸುತ್ತೇವೆ' ಎಂದು ತಿಳಿಸಿದೆ.
ನಮ್ಮ ಮೆಟ್ರೋ ನೀಲಿ ಮಾರ್ಗ
ನಮ್ಮ ಮೆಟ್ರೋದ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಹೊಂದಲಿದೆ. ಬೆಂಗಳೂರು ಮೆಟ್ರೋ ನೀಲಿ ಮಾರ್ಗವನ್ನು ಸಂಪರ್ಕಿಸುವ ಕೆಲವು ಪ್ರಮುಖ ಪ್ರದೇಶಗಳು ಇಲ್ಲಿವೆ
ಸೆಂಟ್ರಲ್ ಸಿಲ್ಕ್ ಬೋರ್ಡ್: ಇದು ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ಐಟಿ ಕೇಂದ್ರವಾಗಿದೆ.
ಕೆಆರ್ ಪುರಂ: ಇದು ಬೆಂಗಳೂರಿನ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ.
ಮಲ್ಲೇಶ್ವರಂ: ಇದು ಬೆಂಗಳೂರಿನ ವಸತಿ ಮತ್ತು ಸಾಂಸ್ಕೃತಿಕ ಪ್ರದೇಶವಾಗಿದೆ.
ಜಯನಗರ: ಇದು ಬೆಂಗಳೂರಿನ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ.
ವಿಜಯನಗರ: ಇದು ಬೆಂಗಳೂರಿನ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ.
ಹೆಬ್ಬಾಳ: ಇದು ಬೆಂಗಳೂರಿನ ವಸತಿ ಮತ್ತು ಐಟಿ ಕೇಂದ್ರವಾಗಿದೆ.
ಇಪಿಐಪಿ: ಇದು ಬೆಂಗಳೂರಿನ ಐಟಿ ಪಾರ್ಕ್ ಆಗಿದೆ.
ನೀಲಿ ಮಾರ್ಗವು ಕೆಆರ್ ಪುರಂನಲ್ಲಿರುವ ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರಿಗೆ ನಗರದಾದ್ಯಂತ ಪ್ರಯಾಣಿಸಲು ಅನುಕೂಲಕರ ಮಾರ್ಗವನ್ನು ಒದಗಿಸುತ್ತದೆ.

ನಮ್ಮ ಮೆಟ್ರೋದ ನೀಲಿ ಮಾರ್ಗದ ಹಂತ 2A ಮತ್ತು 2B ಮೆಟ್ರೋ ನಿಲ್ದಾಣಗಳ ವಿವರ
2A ಮೆಟ್ರೋ ನಿಲ್ದಾಣಗಳು
1- ಕೆಆರ್ ಪುರಂ
2- ಮಹದೇವಪುರ
3- ಡಿಆರ್‌ಡಿಒ ಕ್ರೀಡಾ ಸಂಕೀರ್ಣ
4- ದೊಡ್ಡನಕುಂದಿ
5- ಇಸ್ರೋ
6- ಮಾರತ್ತಹಳ್ಳಿ
7- ಕೋಡಿಬಿಸನಹಳ್ಳಿ
8- ಕಾಡುಬೀಸನಹಳ್ಳಿ
9- ಕಾಡುಬೀಸನಹಳ್ಳಿ
10- ಬೆಳ್ಳಂದೂರು
11- ಇಬ್ಬಲೂರು
12- ಎಚ್‌ಎಸ್‌ಆರ್ ಲೇಔಟ್
13- ಸಿಲ್ಕ್ ಬೋರ್ಡ್
ಹಂತ 2B ಮೆಟ್ರೋ ನಿಲ್ದಾಣಗಳು:
1- ಕಸ್ತೂರಿನಗರ
2- ಹೆಬ್ಬಾಳ
3- ದೊಡ್ಡಜಾಲ
4- ಹೊರಮಾವು
5- ವೀರಣ್ಣಪಾಳ್ಯ
6- ಏರ್‌ಪೋರ್ಟ್ ಸಿಟಿ
7- ಎಚ್‌ಆರ್‌ಬಿಆರ್ ಲೇಔಟ್
8- ಕೊಡಿಗೇಹಳ್ಳಿ
9- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್
10- ಕಲ್ಯಾಣ್ ನಗರ
11- ಜಕ್ಕೂರು ಕ್ರಾಸ್
12- ಎಚ್‌ಬಿಆರ್ ಲೇಔಟ್
13- ಯಲಹಂಕ
14- ನಾಗವಾರ
15- ಬಾಗಲೂರು ಕ್ರಾಸ್
16- ಕೆಂಪಾಪುರ
17- ಬೆಟ್ಟಹಲಸೂರು












Click it and Unblock the Notifications