Namma Metro: ವೈಟ್‌ಫಿಲ್ಡ್- ಹೂಡಿ ಜಂಕ್ಷನ್ ಮೆಟ್ರೋ ಕಾಮಗಾರಿ ಪೂರ್ಣ
ಬೆಂಗಳೂರು, ನವೆಂಬರ್ 08: ಬಹುನಿರೀಕ್ಷಿತ ವೈಟ್‌ಫಿಲ್ಡ್‌ನಿಂದ ಹೂಡಿ ಜಂಕ್ಷನ್ ವರೆಗಿನ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಮಂಗಳವಾರ ಪ್ರಯೋಗಿಕ ಸಂಚಾರವು ನಡೆಯಿತು.
ಬೆಂಗಳೂರು ಹೊರ ವರ್ತುಲ ರಸ್ತೆ (ಒಆರ್‌ಆರ್) ಸಂಪರ್ಕಿಸುವ ವೈಟ್‌ಫಿಲ್ಡ್‌ನಿಂದ ಹೂಡಿ ಜಂಕ್ಷನ್ ವರೆಗಿನ 8.3 ಕಿಲೋ ಮೀಟರ್ ಕಾಮಗಾರಿ, ಹಳಿ ಜೋಡಣೆ, ಹೂಡಿ ಜಂಕ್ಷನ್‌ನಲ್ಲಿನ ಮೆಟ್ರೋ ನಿಲ್ದಾಣವು ಸಂಪೂರ್ಣವಾಗಿ ಮುಗಿದಿದೆ. ಇತ್ತೀಚೆಗಷ್ಟೆ ಮೆಟ್ರೋ ರೈಲು ಬೋಗಿಗಳು ಜೋಡಿಸಿ ಬಿಎಂಆರ್‌ಸಿಎಲ್ ಇದೀಗ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ತಿಗೊಳಿಸಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
ಒಟ್ಟು 8.3 ಕಿಮೀ ಮಾರ್ಗದಲ್ಲಿ 09 ಮೆಟ್ರೋ ನಿಲ್ದಾಣಗಳು ಬರುತ್ತವೆ. ಬಹುಕಾಲದಿಂದಲೂ ಈ ವೈಟ್‌ಫಿಲ್ಡ, ಸಿಲ್ಕಬೋರ್ಡ್ ಜಂಕ್ಷನ್,ಹೂಡಿ ಭಾಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಸಿಹಿ ಸುದ್ದಿ ಲಭಿಸಿದೆ. ಆದಷ್ಟು ಶೀಘ್ರವೇ ಈ ಮಾರ್ಗವು ಸಾರ್ವಜನಿಕ ಬಳಕೆ ಮುಕ್ತವಾಗಲಿದ್ದು, ನಿತ್ಯ ಸಂಚಾರ ತೊಂದರೆ ಅನುಭವಿಸುವವರಿಗೆ ತುಸು ನೆಮ್ಮದಿ ಸಿಗಲಿದೆ.

ಈ ವೈಟ್‌ಫಿಲ್ಡ್‌ನಿಂದ ಹೂಡಿ ಜಂಕ್ಷನ್ ವರೆಗಿನ 8.3 ಕಿಲೋ ಮೀಟರ್ ಮಾರ್ಗದಲ್ಲಿ ಗಂಟೆಗೆ 15ಕಿಲೋ ಮೀಟರ್ ವೇಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಕಳೆದ ಅಕ್ಟೋಬರ್ 25ರಂದು ವೈಟ್‌ಫಿಲ್ಡ್ ಮೆಟ್ರೋ ನಿಲ್ದಾಣದಿಂದ ಗರುಡಾಚಾರ್‌ಪಾಳ್ಯವರೆಗೆ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಬೈಯಪ್ಪನಹಳ್ಳಿಯಿಂದ ವೈಟ್‌ಫಿಲ್ಡ್‌ವರೆಗಿನ ಒಟ್ಟು 15 ಕಿಲೋ ಮೀಟರ್‌ವರೆಗಿನ ಮೆಟ್ರೋ ನೇರಳೆ ಮಾರ್ಗ ಇದಾಗಿದೆ. ಇನ್ನೂ ಕೆಲವು ಪರಿಶೀಲನೆಗಳು ಬಾಕಿ ಇದ್ದು, ಅವುಗಳ ಮುಗಿದ ಬಳಿಕ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು, ಒಟ್ಟು ಸುಮಾರು ಎಂಟು ಲಕ್ಷ ಮಂದಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications