Bengaluru Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್
Bengaluru Metro: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದ ಸೇವೆ ವಿಸ್ತೀರ್ಣವಾಗುತ್ತಿದೆ. ನಮ್ಮ ಮೆಟ್ರೋದಲ್ಲಿ ನಿತ್ಯವೂ ಲಕ್ಷಾಂತರ ಜನ ಪ್ರಯಾಣಿಸುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಡಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ಖರೀದಿ ಮಾಡುವುದು ಸುಲಭವಾಗಬೇಕು ಹಾಗೂ ಸರಳವಾಗಿ ಟಿಕೆಟ್ ಖರೀದಿ ಮಾಡುವುದಕ್ಕೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ವಾಟ್ಸ್ ಆ್ಯಪ್ ಮೂಲಕವೂ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಇದೀಗ ಉಬರ್ ಕಂಪನಿ ನಮ್ಮ ಮೆಟ್ರೋ ಟಿಕೆಟ್ ವಿಚಾರದಲ್ಲಿ ಬಿಎಂಆರ್‌ಸಿಎಲ್‌ನೊಂದಿಗೆ ಕೈಜೋಡಿಸಲು ಮುಂದಾಗಿದೆ.

ದೇಶದ ಪ್ರತಿಷ್ಠಿತ ಉಬರ್ ಕಂಪನಿ ತನ್ನ ಹೊಸ ಉಬರ್ ಡೈರೆಕ್ಟ್ ಸೌಲಭ್ಯವನ್ನು ಆರಂಭಿಸಿದೆ. ಇದರ ಮೂಲಕ ಬಿಜಿನೆಸ್- ಟು- ಬಿಜಿನೆಸ್ (ಬಿ2ಬಿ) ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಕಾಲಿರಿಸಿದೆ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ನೆಟ್‌ವರ್ಕ್ ಆಧಾರದಲ್ಲಿ ಉಬರ್ ಡೈರೆಕ್ಟ್ ಕಾರ್ಯನಿರ್ವಹಿಸುತ್ತಿದೆ.
ವಿವಿಧ ಬ್ರಾಂಡ್‌ಗಳ ವಸ್ತುಗಳನ್ನು ಗ್ರಾಹಕರಿಗೆ ಡೆಲಿವರಿ ತಲುಪಿಸುವ ಕೆಲಸವನ್ನು ಇದರ ಮೂಲಕ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕಂಪನಿಯು ಬೆಂಗಳೂರಿನಲ್ಲಿ ಉಬರ್ ಆ್ಯಪ್‌ನಲ್ಲಿಯೇ ಮೆಟ್ರೋ ಟಿಕೆಟ್ ಬುಕ್ ಮಾಡುವ ವಿಶೇಷ ಸೌಲಭ್ಯ ನೀಡಲಾಗಿದೆ. ಇದರಿಂದ ಉಬರ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ಮುಂದೆ ಸರಳವಾಗಿ ನಮ್ಮ ಮೆಟ್ರೋದ ಟಿಕೆಟ್ ಸಹ ಖರೀದಿ ಮಾಡಬಹುದಾಗಿದೆ.
ಇದರಿಂದ ಮೆಟ್ರೋ ಮತ್ತು ಉಬರ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಎಂಡ್ ಟು - ಎಂಡ್ ಕನೆಕ್ಟಿವಿಟಿ (ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ಬಳಸುವ ಸಾರಿಗೆ) ಸಮಸ್ಯೆ ಇದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೆ ಕನಿಷ್ಠ ಎರಡು ಸಾರಿಗೆ ಸೇವೆ ಬಳಸುವ ಅವಶ್ಯಕತೆ ಇದೆ. ಇದೀಗ ಮೆಟ್ರೋ ಮತ್ತು ಉಬರ್ ಸೇವೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಉಬರ್‌ನಲ್ಲಿ ನಮ್ಮ ಮೆಟ್ರೋ ಟಿಕೆಟ್ ಪಡೆಯುವುದು ಹೇಗೆ ?
ನಮ್ಮ ಮೆಟ್ರೋ ಹಾಗೂ ಉಬರ್ ಸಹಭಾಗಿತ್ವದಿಂದ ಮೆಟ್ರೋ ಟಿಕೆಟ್ ಖರೀದಿ ಮಾಡುವ ಪ್ರಕ್ರಿಯೆ ಇನ್ಮುಂದೆ ಸುಲಭವಾಗಲಿದೆ. ಮೆಟ್ರೋ ಪ್ರಯಾಣಿಕರು ಇನ್ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಅಪ್ಲಿಕೇಶನ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲ. UPI ಪಾವತಿಗಳನ್ನು ಬಳಸಿಕೊಂಡು ಉಬರ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.
ಅಲ್ಲದೇ ಕೊನೆಯ ನಿಮಿಷದ ಪ್ರಯಾಣ ಯೋಜನೆಗಳನ್ನು ಸುಗಮ ಮತ್ತು ಹೆಚ್ಚು ತೊಂದರೆ ಮುಕ್ತವಾಗಿರಲಿದೆ. ಟಿಕೆಟಿ ಬುಕ್ಕಿಂಗ್ ಮಾತ್ರವಲ್ಲ ಅಪ್ಲಿಕೇಶನ್ ನೈಜ-ಸಮಯದ ಮೆಟ್ರೋ ನವೀಕರಣಗಳನ್ನು ಸಹ ತೋರಿಸಲಿದೆ. ಪ್ರಯಾಣಿಕರು ಸೇವೆಗಳನ್ನು ಟ್ರ್ಯಾಕ್ ಮಾಡಲು ಮತ್ತು ಅವರ ಪ್ರಯಾಣವನ್ನು ಉತ್ತಮವಾಗಿ ಪ್ಲ್ಯಾನ್ ಮಾಡಿಕೊಳ್ಳುವುದಕ್ಕೂ ಸಹಾಯವಾಗಲಿದೆ ಎಂದು ಹೇಳಲಾಗಿದೆ.
ಬಿಎಂಆರ್‌ಸಿಎಲ್ ಸಹಭಾಗಿತ್ವ: ಇನ್ನು ಮುಂದುವರಿದು ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆ ಮುಂಭಾಗದಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಪ್ರಮುಖ ನವೀಕರಣಗಳನ್ನು ಸಹ ಯೋಜಿಸುತ್ತಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎಲ್ಲ ಕಾರಿಡಾರ್‌ಗಳಲ್ಲಿ ಮೆಟ್ರೋ ರೈಲುಗಳು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಆಗಾಗ್ಗೆ ಚಲಿಸುವ ನಿರೀಕ್ಷೆ ಇದೆ. ಇದರಿಂದ ನಮ್ಮ ಮೆಟ್ರೋ ಪ್ರಯಾಣಿಕರು ಸುಲಭವಾಗಿ ಪ್ರಯಾಣ ಮಾಡಲು ಅನುಕೂಲವಾಗಲಿದೆ.












Click it and Unblock the Notifications