ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಗ್ರೀನ್‌ ಲೈನ್‌ಗೆ ಶೀಘ್ರದಲ್ಲೇ 2 ಹೊಸ ರೈಲು

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಗ್ರೀನ್‌ ಲೈನ್‌ನಲ್ಲಿ ಹೆಚ್ಚುತ್ತಿರುವ ಜನದಟ್ಟಣೆಗೆ ಪರಿಹಾರ ನೀಡಲು BMRCL ಎರಡು ಹೊಸ ಮೆಟ್ರೋ ರೈಲುಗಳನ್ನು ಸಂಚಾರಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಹೊಸ ರೈಲುಗಳಿಗೆ ಸುರಕ್ಷತಾ ಅನುಮೋದನೆ ದೊರೆತಿದ್ದು, ಚಾಲಕರ ತರಬೇತಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಪ್ರಯಾಣಿಕರ ಸೇವೆಗೆ ಬರಲಿವೆ.

ನಗರದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗ್ರೀನ್‌ ಲೈನ್‌ನಲ್ಲಿ ಎರಡು ಹೊಸ ರೈಲುಗಳನ್ನು ಸಂಚಾರಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಹೊಸ CRRC-ಟಿಟಾಗಢ್‌ Distance-To-Go (DTG) ರೈಲುಗಳಿಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (CMRS) ಅಗತ್ಯ ಸುರಕ್ಷತಾ ಅನುಮೋದನೆ ದೊರೆತಿದೆ.

Bengaluru Metro Green Line Metro is preparing to add two new trains to its Green Line after receiving

ಮಾದಾವರದಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ವರೆಗೆ

ಮಾದಾವರದಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ವರೆಗೆ ಸುಮಾರು 33 ಕಿ.ಮೀ. ವ್ಯಾಪ್ತಿಯಲ್ಲಿ ಗ್ರೀನ್‌ ಲೈನ್‌ ಕಾರ್ಯನಿರ್ವಹಿಸುತ್ತಿದೆ. BMRCL ಈಗಾಗಲೇ ನಾಲ್ಕು CRRC-ಟಿಟಾಗಢ್‌ ರೈಲುಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ ಮೊದಲ ಎರಡು ರೈಲುಗಳನ್ನು ಪ್ರಯಾಣಿಕರ ಸೇವೆಗೆ ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ರೈಲುಗಳ ಅಧಿಕೃತ ಸೇವಾ ಆರಂಭದ ದಿನಾಂಕ ಇನ್ನೂ ಅಂತಿಮವಾಗಿಲ್ಲ. ರೈಲು ಚಾಲಕರ ತರಬೇತಿ ಹಾಗೂ ಇತರ ಕಾರ್ಯಾಚರಣಾ ಅಗತ್ಯತೆಗಳನ್ನು ಪರಿಗಣಿಸಿ ವೇಳಾಪಟ್ಟಿಯನ್ನು ಅಧಿಕಾರಿಗಳು ಅಂತಿಮಗೊಳಿಸುತ್ತಿದ್ದಾರೆ.

ಪ್ರಯಾಣಿಕರಿಗೆ ಏನು ಲಾಭ?

ಗ್ರೀನ್‌ ಲೈನ್‌ನಲ್ಲಿ ಹೊಸ ರೈಲುಗಳು ಸಂಚಾರ ಆರಂಭಿಸಿದ ಬಳಿಕ ಪೀಕ್‌ ಅವಧಿಯಲ್ಲಿ ಉಂಟಾಗುತ್ತಿರುವ ಜನದಟ್ಟಣೆಗೆ ಕೊಂಚ ಪರಿಹಾರ ಸಿಗುವ ನಿರೀಕ್ಷೆಯಿದೆ. ಅಲ್ಲದೆ, ಹಲವು ವರ್ಷಗಳಿಂದ ನಿರಂತರವಾಗಿ ಸಂಚರಿಸುತ್ತಿರುವ ಹಳೆಯ ರೈಲುಗಳನ್ನು ಹಂತ ಹಂತವಾಗಿ ಹೊರತೆಗೆದು ನಿಗದಿತ ಮಿಡ್‌ಲೈಫ್‌ ನಿರ್ವಹಣೆ ಮಾಡಲು BMRCLಗೆ ಸಾಧ್ಯವಾಗಲಿದೆ.

ಒಂದು ಆರು ಬೋಗಿಗಳ ಮೆಟ್ರೋ ರೈಲು ಸುಮಾರು 2,002 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎರಡು ಹೊಸ ರೈಲುಗಳು ಸೇರ್ಪಡೆಯಾದರೆ ಗ್ರೀನ್‌ ಲೈನ್‌ನ ಪ್ರಯಾಣಿಕರ ಸಾಗಣೆ ಸಾಮರ್ಥ್ಯ ಹೆಚ್ಚಲಿದೆ.

2027ರೊಳಗೆ 21 ಹೊಸ ರೈಲುಗಳ ಗುರಿ

BMRCL ಒಟ್ಟು 21 ಆರು ಬೋಗಿಗಳ CRRC-ಟಿಟಾಗಢ್‌ ರೈಲುಗಳನ್ನು ಸ್ವೀಕರಿಸುವ ಯೋಜನೆ ಹೊಂದಿದೆ. 2027ರ ಎರಡನೇ ತ್ರೈಮಾಸಿಕದ ವೇಳೆಗೆ ಈ ಎಲ್ಲಾ ರೈಲುಗಳು ಲಭ್ಯವಾಗುವ ನಿರೀಕ್ಷೆಯಿದೆ. ಸಂಪೂರ್ಣ ಹೊಸ ರೈಲುಗಳ ಪಡೆಯನ್ನು ಗ್ರೀನ್‌ ಲೈನ್‌ನಲ್ಲಿ ಬಳಸಲಾಗುತ್ತಿದ್ದು, ಅವುಗಳ ನಿರ್ವಹಣೆಯನ್ನು ಪೀಣ್ಯ ಡಿಪೋದಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ. ಉಳಿದ ರೈಲುಗಳ ನಿರ್ಮಾಣ ಕಾರ್ಯವು ಪಶ್ಚಿಮ ಬಂಗಾಳದ ಉತ್ತರಪಾರಾದಲ್ಲಿರುವ ಟಿಟಾಗಢ್‌ ರೈಲು ಸಿಸ್ಟಮ್ಸ್‌ ಘಟಕದಲ್ಲಿ ನಡೆಯುತ್ತಿದೆ.

ಪರ್ಪಲ್‌ ಲೈನ್‌ಗೂ ಸಿಗಲಿದೆ ಅನುಕೂಲ

ಗ್ರೀನ್‌ ಲೈನ್‌ಗೆ ಹೊಸ ರೈಲುಗಳು ಸೇರ್ಪಡೆಯಾದಂತೆ ಪ್ರಸ್ತುತ ಅಲ್ಲಿರುವ 17 BEML ರೈಲು ಸೆಟ್‌ಗಳನ್ನು ಹಂತ ಹಂತವಾಗಿ ಪರ್ಪಲ್‌ ಲೈನ್‌ಗೆ ವರ್ಗಾಯಿಸುವ ಯೋಜನೆ ಇದೆ. ಬೆಂಗಳೂರಿನ ಅತ್ಯಂತ ಬ್ಯುಸಿ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿರುವ ಪರ್ಪಲ್‌ ಲೈನ್‌ಗೆ ಈ ರೈಲುಗಳ ವರ್ಗಾವಣೆಯಿಂದ ರೈಲುಗಳ ಲಭ್ಯತೆ ಹೆಚ್ಚಲಿದ್ದು, ಅಲ್ಲಿನ ಜನದಟ್ಟಣೆಯನ್ನೂ ಕಡಿಮೆ ಮಾಡಲು ನೆರವಾಗಬಹುದು.

ಪ್ರಸ್ತುತ ಗ್ರೀನ್‌ ಮತ್ತು ಪರ್ಪಲ್‌ ಲೈನ್‌ಗಳಲ್ಲಿ ಒಟ್ಟು 57 ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ದಿನನಿತ್ಯದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 10 ಲಕ್ಷ ಟ್ರಿಪ್‌ಗಳ ಮಟ್ಟಕ್ಕೆ ತಲುಪಿದ್ದು, ಪೀಕ್‌ ಅವಧಿಯಲ್ಲಿ ಹೆಚ್ಚುವರಿ ರೈಲುಗಳ ಅಗತ್ಯ ಮತ್ತಷ್ಟು ಹೆಚ್ಚಾಗಿದೆ.

2 ನಿಮಿಷಕ್ಕೊಮ್ಮೆ ಮೆಟ್ರೋ ಸಾಧ್ಯವೇ?

BMRCL ಪ್ರಕಾರ, ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ರೈಲುಗಳನ್ನು ಸುಮಾರು 3 ನಿಮಿಷಗಳ ಅಂತರದಲ್ಲಿ ಓಡಿಸುವ ಸಾಮರ್ಥ್ಯವಿದೆ. ಆದರೆ ರೈಲುಗಳ ನಡುವಿನ ಅಂತರವನ್ನು 2 ನಿಮಿಷಗಳಿಗೆ ಇಳಿಸಬೇಕಾದರೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಅಗತ್ಯವಾದ ಮೇಲ್ದರ್ಜೆಯ ಸುಧಾರಣೆಗಳನ್ನು ಕೈಗೊಳ್ಳಬೇಕಾಗುತ್ತದೆ.

ಹೊಸ ರೈಲುಗಳ ಸೇರ್ಪಡೆ, ಹಳೆಯ ರೈಲುಗಳ ನಿರ್ವಹಣೆ ಹಾಗೂ ಪರ್ಪಲ್‌ ಲೈನ್‌ಗೆ ಹೆಚ್ಚುವರಿ ರೈಲುಗಳ ವರ್ಗಾವಣೆಯಿಂದ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆಯಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+